Stop Tippu Sulthan Jayanthi in Karnataka

The Issue
1. ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರವು ಟಿಪ್ಪುಸುಲ್ತಾನ್ ಜನ್ಮದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡು ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅದರ ಆಚರಣೆಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಬಿಡುಗಡೆಗೊಳಿಸಲು ತೀರ್ಮಾನಿಸಿದೆ.
2. ಅದರಂತೆ ಈ ವರ್ಷದ ಟಿಪ್ಪುಜಯಂತಿಯು ಇದೇ ನವೆಂಬರ್ 10 ರಂದು ಆಚರಿಸುತ್ತಿರುವುದಾಗಿ ತಿಳಿದುಬಂದಿದೆ.
3. ಕರ್ನಾಟಕದ ಇತಿಹಾಸದ ದಾಖಲೆಗಳ ಪ್ರಕಾರ ಟಿಪ್ಪೂಸುಲ್ತಾನನ್ನೊಬ್ಬ ಇಸ್ಲಾಮೀಮತಾಂಧನಾಗಿದ್ದು, ಆತನ ಅಧಿಕಾರಾದವಧಿಯಲ್ಲಿ ಹಾಗೂ ಅದಕ್ಕೂ ಮೊದಲು ಈ ನಾಡಿನ ಬಹುಸಂಖ್ಯಾತ ಹಿಂದುಗಳ ಮೇಲೆ, ಅವರ ನಂಬಿಕೆ ಹಾಗೂ ಭಾವನೆಗಳ ಮೇಲೆ ತೀವ್ರತರದ ಧಾಳಿಗಳನ್ನು ನೆಡೆಸಿರುತ್ತಾನೆ. ಆತ ಹೋದಲೆಲ್ಲ ಮಠ-ಮಂದಿರಗಳನ್ನು ಧ್ವಂಸಗೊಳಿಸಿ ಆ ಜಾಗಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದಲ್ಲದೆ, ಆ ಎಲ್ಲಾ ಊರುಗಳಲ್ಲಿ ಹಿಂದುಗಳನ್ನು ಕಗ್ಗೊಲೆಗೈದಿರುವುದು ಬೆಳಕಿಗೆ ಬಂದಿರುತ್ತದೆ. ಕೊಡಗಿನ ಮೇಲೆ ಆಕ್ರಮಣವನ್ನು ನೆಡೆಸಿದ ಈ ಟಿಪ್ಪುಸುಲ್ತಾನ್ ಅತ್ಯಾಚಾರ, ಕೊಲೆ, ಸುಲಿಗೆಗಳನ್ನು ನೆಡೆಸಿದ್ದಲ್ಲದೆ ದೇವಪರಂಬು ಎನ್ನುವ ಜಾಗದಲ್ಲಿ 30 ಸಾವಿರಕ್ಕೂ ಹೆಚ್ಚು ಹಿಂದುಗಳನ್ನು ಕೊಲೆಗೈದು, ಸಾವಿರಾರು ಹಿಂದುಗಳನ್ನು ಒತ್ತೆಯಾಳಾಗಿ ಹಿಡಿದುತಂದು ಶ್ರೀರಂಗಪಟ್ಟಣ್ಣದಲ್ಲಿ ಬಲಾತ್ಕಾರವಾಗಿ ಇಸ್ಲಾಮಿಗೆ ಮತಾಂತರಕೊಳಿಸಿರುತ್ತಾನೆ. ಈತನ ದಾಳಿಗೆ ಸಿಲುಕಿ ಶ್ರೀರಂಗಪಟ್ಟಣ್ಣದ ಇತಿಹಾಸ ಪ್ರಸಿದ್ದ ಮೂಡಲಬಾಗಿಲು ಆಂಜನೇಯದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿರುವುದನ್ನು ನಾವಿಂದು ಕಾಣಬಹುದು. ಕೊಡಗಿನಲ್ಲಿ ಟಿಪ್ಪು ಸುಲ್ತಾನ್ ನೆಡೆಸಿದ ದಾಳಿಗೆ ಸಂಬಂಧಿಸಿದಂತೆ ಕೊಡಗಿನ ಗೆಜೇಟಿಯರ್ ಹಾಗೂ ಕೊಡಗಿನ ಇತಿಹಾಸಕಾರ ಐ. ಮಾ. ಮುತ್ತಣ್ಣನವರು ಬರೆದಿರುವ ಗ್ರಂಥಗಳನ್ನು ನಾವು ಕಾಣಬಹುದು
4. ಈ ಟಿಪ್ಪುಸುಲ್ತಾನ್ ಕನ್ನಡ ವಿರೋಧಿಯೂ ಆಗಿದ್ದು, ಆತ ತನ್ನ ಆಡಳತಾವಧಿಯಲ್ಲಿ ಈ ನಾಡಿನ ಜನರ ಮೇಲೆ ಬಲತ್ಕಾರವಾಗಿ ಪರ್ಷಿಯಾ ಭಾಷೆಯನ್ನು ಹೇರಿ ಜಾರಿಗೆ ತಂದಿರುವುದನ್ನು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ.
5. ಇತ್ತಿಚಿನ ದಿನಗಳಲ್ಲಿ ಆತನ ಮತಾಂಧತೆ ಹಾಗೂ ಕನ್ನಡ ವಿರೋದಿ ನಿಲುವಿನ ಕುರಿತು ವ್ಯಾಪಕವಾದ ಚರ್ಚೆಗಳು ಕರ್ನಾಟಕದಲ್ಲಿ ನಡೆದಿದ್ದು ಆತನೊಬ್ಬ ಕನ್ನಡ ದ್ವೇಷಿ ಹಾಗೂ ಹಿಂದು ವಿರೋದಿ ಮತಾಂಧನೆಂಬುದು ಮತ್ತಷ್ಟು ಬಹಿರಂಗವಾಗಿದೆ. ಆ ಮೂಲಕ ಆತ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿ ಹೊರಹೊಮ್ಮಿರುತ್ತಾನೆ.
6. ಕರ್ನಾಟಕದಲ್ಲಿ ಇತ್ತಿಚೆಗೆ ತಲೆ ಎತ್ತಿರುವ ದೇಶದ್ರೋಹಿ ಹಾಗೂ ಸಮಾಜ ಘಾತುಕ ಶಕ್ತಿಗಳ ಗುಂಪೊಂದು ಟಿಪ್ಪು ಸುಲ್ತಾನನ್ನು ವೈಭವೀಕರಿಸುವ ಯತ್ನದಲ್ಲಿ ತೊಡಗಿದ್ದು, ಸ್ವಾರ್ಥ ರಾಜಕೀಯಕ್ಕಾಗಿ ಮುಸ್ಲಿಂರೊಂದಿಗೆ ಟಿಪ್ಪುವನ್ನು ಸಮೀಕರಿಸುವ ಯತ್ನ ನೆಡೆಸಿದ್ದು, ಆ ಹಿನ್ನಲೆಯಲ್ಲಿ ಸರಕಾರ ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧರಿಸಿದೆ.
7. ರಾಜ್ಯ ಸರ್ಕಾರದ ಈ ನಿಲುವು ದೇಶ ವಿರೋಧಿಯಾಗಿರುತ್ತದೆ. ಬಹುಸಂಖ್ಯಾಂತ ಹಿಂದುಗಳ ಭಾವನೆಯ ಮೇಲೆ ನೆಡೆದಿರುವ ಅತ್ಯಾಚಾರವಾಗಿರುತ್ತದೆ. ಅಲ್ಲದೆ ಇತಿಹಾಸಕ್ಕೆ ಎಸಗುವ ದ್ರೋಹವೂ ಆಗಿದ್ದು ನೂರಕ್ಕೆ ನೂರು ಕನ್ನಡ ಭಾಷೆಗೆ ಮಾಡುವ ಅಪಮಾನವಾಗಿರುತ್ತದೆ.
8. ಈ ವರ್ಷದ ಟಿಪ್ಪುಜಯಂತಿಯನ್ನು ನವೆಂಬರ್ 10 ರಂದು ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಆ ದಿನ ದೀಪಾವಳಿ ಹಬ್ಬ(ನರಕ ಚತುರ್ದಶಿ)ವೂ ಆಗಿದ್ದು ಹಿಂದು ಸರ್ಕಾರಿ ನೌಕರರು ಹಾಗೂ ಶಾಲಾ ವಿಧ್ಯಾರ್ಥಿಗಳಿಗೆ ಟಿಪ್ಪೂಜನ್ಮದಿನಾಚರಣೆ ಕಡ್ಡಾಯಗೊಳಿಸುವುದು ಅನ್ಯಾಯದ ಕ್ರಮವಾಗುತ್ತದೆ. ಹಿಂದುಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನೆಡೆಯುವ ದಬ್ಬಾಳಿಕೆಯಾಗಿರುತ್ತದೆ.
ತಾವು ಈ ಕ್ಷಣ ಮಧ್ಯಪ್ರವೇಶಮಾಡಿ ಕರ್ನಾಟಕ ಸರ್ಕಾರವು ಮತಾಂಧ, ದೇಶ ವಿರೋದಿ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಆಚರಿಸುವುದನ್ನು, ಆ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು, ಸ್ವಾರ್ಥ ರಾಜಕೀಯಕ್ಕಾಗಿ ಟಿಪ್ಪುವನ್ನು ವೈಭವೀಕರಿಸುವುದನ್ನು ತಡೆಯಬೇಕೆಂದು ಆ ಕುರಿತು ತಾವು ತಮ್ಮ ಅಧಿಕಾರವನ್ನು ಬಳಸಿ ಸರ್ಕಾರಕ್ಕೆ ಸ್ಪಷ್ಠ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸುತ್ತೇವೆ.

Petition Closed
Share this petition
The Decision Makers
Petition Updates
Share this petition
Petition created on 31 October 2015