ಬಿಎಂಟಿಸಿ ಬಸ್ ದರಗಳನ್ನು ಕಡಿಮೆಗೊಳಿಸಿ! ಆಯವ್ಯಯದಲ್ಲಿ ಇದಕ್ಕಾಗಿ ವಾರ್ಷಿಕ ರೂ​.​1000 ಕೋಟಿ ಹಂಚಿಕೆ ಮಾಡಿ!

The Issue

● ಬಿಎಂಟಿಸಿ ಬಸ್ ಸೇವೆಗಳನ್ನು ಪ್ರತಿ ದಿನ ಲಕ್ಷಾಂತರ ಜನರು ತಮ್ಮ ಜೀವನೋಪಾಯಕ್ಕಾಗಿ ಬಳಸುತ್ತಾರೆ. ಆದರೆ ದುರಾದೃಷ್ಟವಶಾತ್ ಬಿಎಂಟಿಸಿ ಬಸ್ ಟಿಕೆಟ್ ದರಗಳು ಇಡೀ ದೇಶದಲ್ಲಿಯೇ ಇತರೆ ಯಾವುದೇ ರಾಜ್ಯಗಳಲ್ಲಿಯೂ ಇಲ್ಲದಷ್ಟು ದುಬಾರಿ ಆಗವೆ. ಇದರ ದರಗಳು ನಗರದ ದೊಡ್ಡ ಸಂಖ್ಯೆಯ ಜನರಿಗೆ ಕೈಗೆಟಕುವಂತಿಲ್ಲ.

●  ಆರ್ಥಿಕ ಸಂಕಷ್ಟತೆ ಮತ್ತು ಕೋವಿಡ್ ಸಾಂಕ್ರಾಮಿಕವು ಹೆಚ್ಚಿನ ಸಂಖ್ಯೆಯಜನರನ್ನು,ಅದರಲ್ಲಿಯೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಕಡು ಬಡತನಕ್ಕೆ ದೂಡಿದೆ.ಕೈಗೆಟಕುವ ಸಾರಿಗೆ ವ್ಯವಸ್ಥೆಯ ಕೊರತೆ ಈ ಜನರನ್ನು ಬಡತನದ ಸುಳಿಗೆ ಸಿಲುಕಿಸಿದ್ದು, ತಮ್ಮ ಸ್ವಂತ ಪ್ರಯತ್ನಗಳಿಂದ ಹೊರಗೆ ಬರುವುದು ಸಾಧ್ಯವಾಗುತ್ತಿಲ್ಲ.

● ಬಸ್ ಟಿಕೆಟ್ ದರಗಳನ್ನು ಮಹತ್ತರವಾದ ಪ್ರಮಾಣದಲ್ಲಿ ಇಳಿಕೆ ಮಾಡಿದರೆ ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗುತ್ತದೆ ಮತ್ತು ಆರ್ಥಿಕ ಅವಕಾಶಗಳನ್ನು ಪಡೆದುಕೊಳ್ಳಲು ನೆರವಾಗಿ ಜೀವನ ಸುಧಾರಿಸುತ್ತದೆ; ಮಹಿಳೆಯರಿಗೆ, ಟ್ರಾನ್ಸ್ ಜೆಂಡರ್ ಸಮುದಾಯದವರಿಗೆ, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸುವುದರಿಂದ ಹೆಚ್ಚಿನ ಓಡಾಡುವ ಶಕ್ತಿ ಲಭಿಸುತ್ತದೆ.

ಕರ್ನಾಟಕ ಸರ್ಕಾರ 2022-23ರ ಆಯವ್ಯಯದಲ್ಲಿ ಬಿಎಂಟಿಸಿಗೆ, ಬಸ್ ಟಿಕೆಟ್ ದರಗಳನ್ನು ಕಡಿಮೆಗೊಳಿಸಲು ಹಾಗೂ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಲಭ್ಯಗೊಳಿಸಲು ಹಣವನ್ನು ಹಂಚಿಕೆ ಮಾಡಬೇಕು.

ಜನರು ವಸ್ತುಗಳನ್ನು ಖರೀದಿಸಲು, ಕೆಲಸಕ್ಕೆ ಹೋಗಲು, ಶಿಕ್ಷಣ ಪಡೆಯಲು, ವೈದ್ಯಕೀಯ ಸೇವೆಗಳನ್ನು ಪಡೆಯಲು ಆಸ್ಪತ್ರೆಗಳುಹಾಗೂ ಚಿಕಿತ್ಸಾಲಯಗಳಿಗೆ ಹೋಗುವಂತಹ ತಮ್ಮ ದೈನಂದಿನ ಅಗತ್ಯಗಳಿಗಾಗಿ ನಗರದಾದ್ಯಂತ ಪ್ರಯಾಣಿಸುತ್ತಾರೆ. ಸಾರಿಗೆಯೇ ನಗರದ ಜೀವಾಳ. ಈ ಹಿನ್ನೆಲೆಯಲ್ಲಿ ಜನರು ಘನತೆಯುಳ್ಳ ಜೀವನ ನಡೆಸಲು ಹಾಗೂ ನಗರದ ಕಾರ್ಯಚಟುವಟಿಕೆಗಳು ಮುನ್ನಡೆದುಕೊಂಡು ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆಯ ಲಭ್ಯತೆ ಮತ್ತು ದೊರೆಯುವಿಕೆ ನಿರ್ಣಾಯಕವಾಗುತ್ತದೆ.

ಬೃಹತ್ ಶ್ರೀಮಂತಿಕೆ ಇರುವಂತಹ ಬೆಂಗಳೂರು ನಗರದಲ್ಲಿ ಅಷ್ಟೇ ಗಂಭೀರ ಸ್ವರೂಪದ ಬಡತನ ಹಾಗೂ ಅಸಮಾನತೆಯೂ ರಾರಾಜಿಸುತ್ತಿದೆ. ನಗರದ ಅಂದಾಜು 25% ರಿಂದ 35%ರಷ್ಟು ಜನಸಂಖ್ಯೆ ಕೊಳಗೇರಿಗಳಲ್ಲಿ ವಾಸಿಸುತ್ತಿದೆ. 2017ರಲ್ಲಿ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ನಗರದ ಕೊಳಗೇರಿಯಲ್ಲಿ ವಾಸಿಸುವ ಓರ್ವ ವ್ಯಕ್ತಿಯ ಮಾಸಿಕ ಆದಾಯ ಕೇವಲ ರೂ.3,000(2). 

ಇತ್ತೀಚಿನ ಸಮೀಕ್ಷೆಗಳು(3) ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ ಕಡು ಬಡತನದಲ್ಲಿರುವ ಶೇ.40ರಷ್ಟು ಜನರ ಆದಾಯ ಗಳಿಕೆ ಶೇ.30ರಿಂದ ಶೇ.50ರಷ್ಟು ಕುಸಿದಿದೆ. ಸಾಂಕ್ರಾಮಿಕದ ನಂತರದ ಲ್ಲಂತೂ ಮಧ್ಯಮವರ್ಗಕ್ಕೆ ಇಳಿಯುವ ಮೂಲಕ ನಗರಪ್ರದೇಶದ ಬಡತನ ನಗರಗಳಲ್ಲಿರುವ ದಿನಗೂಲಿಗಳು, ಸಣ್ಣವ್ಯಾಪಾರಸ್ಥರು, ಎದುರಿಸುತ್ತಿರುವುದು ಸಮೀಕ್ಷೆಯ ದತ್ತಾಂಶ ಸೂಚಿಸುತ್ತದೆ.

ಬಿಎಂಟಿಸಿ ಬಸ್ಸುಗಳು ಬೆಂಗಳೂರು ನಗರದ ಜೀವನಾಡಿ. ಸಾಂಕ್ರಾಮಿಕಕ್ಕೂ ಮುಂಚೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಬಿಎಂಟಿಸಿ ಬಸ್ ಸೇವೆಗಳನ್ನು ಉಪಯೋಗಿಸುತ್ತಿದ್ದರು.

ಬಿಎಂಟಿಸಿ ಬಸ್ ಟಿಕೆಟ್ ದರಗಳು ಭಾರತದ ಇತರೆಯಾವುದೇ ನಗರಗಳಲ್ಲಿರುವ ಬಸ್ ಟಿಕೆಟ್ ದರಗಳಿಂತಲೂ ಅತ್ಯಂತ ದುಬಾರಿಯಾಗಿದೆ. ಬಿಎಂಟಿಸಿ ಬಸ್ಸುಗಳು ಈ ಅತ್ಯಂತ ದುಬಾರಿ ಟಿಕೆಟ್ ದರಗಳು ಈಗಾಗಲೇ ಕಡಿಮೆಯಾಗಿರುವ ನಗರಬಡವರ
ಆದಾಯಕ್ಕೆ ಕೊಳ್ಳಿ ಇಟ್ಟಿದೆ. ಅನೇಕ ಜನರು ಸಾರಿಗೆವೆಚ್ಚಗಳನ್ನು ಉಳಿಸುವುದಕ್ಕಾಗಿ ದೂರದವರೆಗೂ ನಡೆದುಕೊಂಡೇ ಹೋಗುವಂತಾಗಿದೆ. ಇಡೀ ಕುಟುಂಬದ ಸದಸ್ಯರು ಸಾರಿಗೆ ವೆಚ್ಚಗಳನ್ನುಭರಿಸುವುದು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಆರೋಗ್ಯ ಅಥವಾ ತಮ್ಮ ಮಕ್ಕಳ ಪೌಷ್ಠಿಕತೆ ಹಾಗೂ ಶಿಕ್ಷಣದಂತಹ ಇತರೆ ವೆಚ್ಚಗಳನ್ನು ಅನಿವಾರ್ಯವಾಗಿ ಕಡಿತಗೊಳಿಸಬೇಕಾಗುತ್ತಿದೆ.

ದುಬಾರಿ ಸಾರಿಗೆ ದರದಿಂದಾಗಿ ದುಬಾರಿ ಸಾರಿಗೆ ದರದಿಂದಾಗಿ ಉತ್ತಮ ಕೆಲಸ, ಶಿಕ್ಷಣ ಅಥವಾ ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವ ಅವರಹಕ್ಕು ನಿರ್ಬಂಧಿಸಿದಂತಾಗಿದೆ.

ಸಾರ್ವಜನಿಕ ವಿಚಾರಣೆ: ಬೆಂಗಳೂರು ಮಹಾನಗರದಲ್ಲಿ ಬಸ್ ಸೇವೆ ಸಾಮಾನ್ಯ ಜನರಿಗೆ ಕೈಗೆಟಕುವಂತಿದೆಯೇ?

ಸಾರ್ವಜನಿಕ ಸಾರಿಗೆ ವಕಾಲತ್ತು ಗುಂಪಾಗಿರುವಂಥಹ ಬೆಂಗಳೂರು ಬಸ್‌ಪ್ರಯಾಣಿಕರ ವೇದಿಕೆ, ಫೆಬ್ರವರಿ 15,2022 ರಂದು ಈ ಸಂಬಂಧಪಟ್ಟಂತೆ ಒಂದು ಸಾರ್ವಜಿಕ ವಿಚಾರಣೆಯನ್ನು ಏರ್ಪಡಿಸಿತ್ತು. ನಗರದ ವಿವಿಧೆಡೆಗಳಿಂದ ಕಾರ್ಮಿಕ ವರ್ಗಗಳಿಗೆ ಸೇರಿದಂತಹ ಅನೇಕ ಜನರು ತೀರ್ಪುಗಾರರ ಮಂಡಳಿಯ ಮುಂದೆ ತಮ್ಮ ಪ್ರಮಾಣಗಳನ್ನು ವ್ಯಕ್ತಪಡಿಸಿದರು. ಗೃಹ ಕಾರ್ಮಿಕರು, ಪೌರಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು, ರೈತರು, ಹಿರಿಯ ನಾಗರಿಕರು ಹಾಗೂ ಇನ್ನೂಅನೇಕರು ತಾವು ಪ್ರಸ್ತುತ ಇರುವಂತಹ ತೀವ್ರ ಹಣಕಾಸಿನ ತೊಂದರೆಯ ಕುರಿತು ಮಾಹಿತಿಯನ್ನು ಹಂಚಿ ಕೊಂಡರು ಹಾಗೂ ದುಬಾರಿ ಬಸ್ ದರಗಳಿಂದಾಗಿ ಮತ್ತು ಅಸಮರ್ಪಕ ಬಸ್ ಸೇವೆಗಳಿಂದಾಗಿ ತಮ್ಮ ಜೀವನೋಪಾಯ, ವೈದ್ಯಕೀಯ ಸೇವೆ, ಶಿಕ್ಷಣದಂತಹ ಎಲ್ಲಾ ಅತ್ಯಗತ್ಯ ಸೌಲಭ್ಯಗಳ ಮೇಲೆಯಾವ ರೀತಿ ಪರಿಣಾಮ ಬೀರಿದೆ ಎಂದು ಅನಿಸಿಕೆಗಳನ್ನು ಹಂಚಿ ಕೊಂಡರು. ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವಂತಾಗಿದೆ. ಇಬ್ಬರು ಆದಾಯಗಳಿಸುವ ಸದಸ್ಯರಿರುವಂತಹ ಕುಟುಂಬಗಳು ಸಹ ಅವರ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಥವಾ ಅವರ ಕುಟುಂಬಗಳಲ್ಲಿರುವ ಹಿರಿಯರ ಅಗತ್ಯಗಳನ್ನು ಪೂರೈಸಲು ಹೆಣಗಾಡುವಂತಾಗಿದೆ. ಒಬ್ಬರೇ ಮಹಿಳೆ ಮುನ್ನಡೆಸುತ್ತಿರುವಂತಹ ಕುಟುಂಬಗಳಲ್ಲಿ ಪ್ರಯಾಣಕ್ಕೆ ಖರ್ಚುಮಾಡಿದ ನಂತರ ಕೈಯಲ್ಲಿ ಬಹಳ ಕಡಿಮೆ ಹಣ ಉಳಿಯುತ್ತಿದೆ. ಹೆಚ್‌ಐವಿ ರೋಗಿಗಳು ಹಾಗೂ ಗಂಭೀರ ಖಾಯಿಲೆಗಳಿರುವಂತಹ ಸಂಕಷ್ಟದಲ್ಲಿರುವಂತಹ ಸಮುದಾಯಗಳಿಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ವಿಚಾರಣೆಯು ಬೆಂಗಳೂರು ಮಹಾನಗರದ ದುಡಿಯುವ ಜನರ ಮೂಕ ಹಾಗೂ ಕಣ್ಣಿಗೆ ಕಾಣದಿರುವಂತಹ ಹೊರೆ ಹಾಗೂ ತೊಂದರೆಗಳನ್ನು ಬಹಿರಂಗಪಡಿಸಿತು. ಇಷ್ಟೆಲ್ಲದರಹೊರತಾಗಿಯೂ ನಗರ, ಈ ಜನರಿಲ್ಲದೇ ಮುಂದೆ ಸಾಗುವುದಿಲ್ಲ ಆದರೂ ಇವರಿಗೆ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಪ್ರತಿಕ್ರಿಯಿಸಿದ ಅನೇಕರು ತಮಿಳುನಾಡು ಹಾಗೂ ಇತರೆ ರಾಜ್ಯಗಳನ್ನು ಉಲ್ಲೇಖಿಸಿ,ಅಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಯಾವ ರೀತಿ ಉಚಿತಗೊಳಿಸಿದೆ ಎಂಬುದನ್ನು ವಿವರಿಸಿದರು. ಆದರೆ ಬೆಂಗಳೂರಿನ ಂತಹ ಶ್ರೀಮಂತ ನಗರದಲ್ಲಿ ಇಂತಹ ಸೌಲಭ್ಯ ಮಹಿಳೆಯರಿಗೆ ಏಕಿಲ್ಲ?! ಎಂದು ಪ್ರಶ್ನಿಸಿದರು.

ತೀರ್ಪುಗಾರರ ಮಂಡಳಿಯಲ್ಲಿ ಸಾರಿಗೆ ತಜ್ಞರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯರ್ತರು ಹಾಗೂ ಓರ್ವ ಜನಪ್ರತಿನಿಧಿಯೂ ಇದ್ದರು. ದುಬಾರಿ ಬಸ್ ಟಿಕೆಟ್ ದರ ಹಾಗೂ ಅಸಮರ್ಪಕ ಬಸ್ ಸೇವೆಗಳು ಜನರನ್ನು ಹೆಚ್ಚು ಸಂಕಷ್ಟಕ್ಕೆ ದೂಡಿದೆ,ವಿಶೇಷವಾಗಿ ಕಾರ್ಮಿಕ ವರ್ಗದವರನ್ನು ಹೆಚ್ಚು ಸಂಕಷ್ಟಕ್ಕೆ ಸಿಲುಕಿಸಿದೆ ಎಂಬುದನ್ನು ಅರಿತು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು. ನಗರದಲ್ಲಿ ಬಸ್ ಸೇವೆಗಳ ವ್ಯವಸ್ಥೆಯಲ್ಲಿರುವ ಹಲವು ಲೋಪಗಳನ್ನೂ ಸಹ ಸೂಚಿಸಿದರು. ಉದಾಹರಣೆಗೆ,ಬಿಎಂಟಿಸಿಯ ಹತ್ತಿರದ ಟ್ರಿಪ್‌ಗಳಿಗೆ ಹಂತವಾರು ಟಿಕೆಟ್ ದರಗಳು ಬಹಳ ಹೆಚ್ಚಿದೆ. ವಿದ್ಯಾರ್ಥಿಪಾಸ್‌ಗಳು ನಿಗಧಿತ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಸ್ ಸೇವೆ ಸರಿಯಾಗಿ ದೊರೆಯುತ್ತಿಲ್ಲ. ಅಂಚಿನಲ್ಲಿರುವಂತಹ ಸಮುದಾಯದ ಜನರು ಜೀವಿಸುವ ನಗರದ ಬಡ ಪ್ರದೇಶಗಳಲ್ಲಿ ಅನೇಕ ಸೇವಾ ಅಂತರಗಳಿವೆ. ಅಸಮರ್ಪಕ ಸೇವೆಗಳು ಹಾಗೂ ಮೊದಲ ಹಾಗೂ ಕೊನೆಯ ಮೈಲಿ ಬಸ್ ಸಂಪರ್ಕದ ಸಮಸ್ಯೆಯು ಕಡಿಮೆ-ಆದಾಯ ಗಳಿಸುವ ಕುಟುಂಬಗಳ ಸದಸ್ಯರನ್ನು ಅನಿವಾರ್ಯವಾಗಿ ದುಬಾರಿ ಶೇರ್- ಆಟೋಗಳನ್ನು ಅವಲಂಬಿಸುವಂತೆ ಮಾಡಿದೆ. ಈ ಎಲ್ಲಾ ಸಮಸ್ಯೆಗಳು, ಸರ್ಕಾರ ಬಿಎಂಟಿಸಿಯನ್ನು ಸಾರ್ವಜನಿಕ ಸೇವೆಯಬದಲಿಗೆ ಒಂದು ಲಾಭಗಳಿಸುವ ಸಂಸ್ಥೆಯನ್ನಾಗಿ ಪರಿಗಣಿಸುತ್ತಿರುವುದೇ ಕಾರಣ ಎಂದು ತೀರ್ಪುಗಾರರು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರದ ಹಣಕಾಸಿನ ಬೆಂಬಲವಿಲ್ಲದೆ ಬಿಎಂಟಿಸಿ ಕಾರ್ಯಾಚರಣೆಗಳಿಗೆ ಅನಿವಾರ್ಯವಾಗಿ ತನ್ನದೇಹಣಕಾಸಿನ ವ್ಯವಸ್ಥೆಯನ್ನು ಅವಲಂಭಿಸುವಂತಾಗಿದೆ. ಆದ್ದರಿಂದ, ಟಿಕೆಟ್ ದರಗಳನ್ನು ಹೆಚ್ಚಾಗಿಸಿದೆ ಹಾಗೂ ಕೇವಲ ಲಾಭ ಬರುವಂತಹ ಮಾರ್ಗಗಳಲ್ಲಿ ಮಾತ್ರವೇ ಸಮರ್ಪಕ ಬಸ್ ಸೇವೆಗಳನ್ನು ಒದಗಿಸುತ್ತಿದೆ, ಎಂದು ವಿವರಿಸಿದರು. ಮೆಟ್ರೊರೈಲು ಸೇವೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಾರ್ವಜನಿಕರ ಹಣದಿಂದ ವೆಚ್ಚ ಮಾಡುತ್ತಿರುವ ಸರ್ಕಾರದ ನಿಲುವನ್ನು ಉಲ್ಲೇಖಿಸಿದ, ತೀರ್ಪುಗಾರರು, ಮೆಟ್ರೋ ಹೋಲಿಕೆಯಲ್ಲಿ ಬಿಎಂಟಿಸಿ ಬಳಸುವವರ ಸಂಖ್ಯೆ ಬಹಳ ಹೆಚ್ಚಾಗಿದ್ದರೂ ಸಹ ಬಿಎಂಟಿಸಿಗೆ ಸಾರ್ವಜನಿಕ ಹಣ ಹಂಚಿಕೆಯ ಅಗತ್ಯವನ್ನು ನಿರ್ಲಕ್ಷಿಸುತ್ತಿರುವುದರ ಕುರಿತು ಕಾಳಜಿ ವ್ಯಕ್ತಪಡಿಸಿದರು.

ತೀರ್ಪುಗಾರರು ನಗರದ ಬಸ್ ಸೇವೆಗಳು ಹಾಗೂ ಪ್ರಯಾಣಿಕರನ್ನು ಯಾವ ರೀತಿ ಪರಿಗಣಿಸಬೇಕು ಎಂಬ ಕುರಿತು ಎರಡು ಅಗತ್ಯ ದೃಷ್ಟಿಕೋನಗಳನ್ನು ವಿವರಿಸಿದರು: 1) ಅತ್ಯುತ್ತಮ ಗುಣಮಟ್ಟ, ಕೈಗೆಟಕುವದರಗಳಲ್ಲಿ ಬಸ್ ಸೇವೆಗಳ ದೊರೆಯುವಿಕೆ ಹಾಗೂ ಶಿಕ್ಷಣ, ಆದಾಯಗಳಿಕೆ ತರುವ ಉದ್ಯೋಗ ಅವಕಾಶಗಳು, ರೈತರು ಹಾಗೂ ವ್ಯಾಪಾರಸ್ಥರಿಗೆ ಮಾರುಕಟ್ಟೆಗಳನ್ನು ತಲುಪುವ ಅವಕಾಶಗಳು, ಆರೋಗ್ಯ ಸೇವಾ ಸೌಲಭ್ಯಗಳ ದೊರೆಯುವಿಕೆ ಹಾಗೂಬಾಲಕಿಯರು ಹಾಗೂ ಮಹಿಳೆಯರ ಸಶಕ್ತೀಕರಣದಂತಹ ಮಾನವ ಯೋಗಕ್ಷೇಮದ ವಿಸ್ತೃತ ಕ್ಷೇತ್ರಗಳ ನಡುವಿನ ಅಗತ್ಯ ಅಂತರ್‌ಸಂಪರ್ಕವನ್ನು ಗುರುತಿಸುವುದು. 2) ಬಸ್ಸುಗಳನ್ನು ಬಳಸುವುದು ಸಾರ್ವಜನಿಕ ಸೇವೆಯನ್ನು ಪಡೆಯುತ್ತಿರುವುದಲ್ಲ,ಬದಲಿಗೆ ಸಾರ್ವಜನಿಕ ಸೇವೆಯನ್ನು ಮಾಡುತ್ತಿರುವುದಾಗಿ ಕಾಣುವುದು. ಬಸ್ಸುಗಳನ್ನು ಬಳಸುವವರು ರಸ್ತೆ ಸ್ಥಳದ ಅಗತ್ಯವನ್ನು ಕಡಿಮೆಗೊಳಿಸುತ್ತಿದ್ದಾರೆ ಹಾಗೂ ರಸ್ತೆಗಳಲ್ಲಿ ವಾಹನ ಸಂಚಾರದಟ್ಟಣೆಯನ್ನು ಕಡಿಮೆಗೊಳಿಸುತ್ತಿದ್ದಾರೆ. ಈ ಮೂಲಕ ನಗರಕ್ಕೆ, ಪ್ರತಿ ವರ್ಷ ವಾಹನದಟ್ಟಣೆಯಿಂದಾಗಿ ವೆಚ್ಚವಾಗುವ ಕೋಟ್ಯಂತರ ರೂಪಾಯಿಗಳನ್ನು ಉಳಿಸುತ್ತಿದ್ದಾರೆ, ಇಷ್ಟೇ ಅಲ್ಲದೆ, ವಾಯು ಮಾಲಿನ್ಯ ಕಡಿಮೆಗೊಳಿಸುವುದು ಹಾಗೂ ಗ್ರೀನ್‌ಹೌಸ್ ಗ್ಯಾಸ್‌ಗಳ ಉತ್ಪತ್ತಿಗೆ ಕೊಡುಗೆ ನೀಡುತ್ತಿದ್ದಾರೆ, ಜೊತೆಗೆ ವಾಹನ ಅಪಘಾತಗಳಿಂದಾಗಿ ನಡೆಯುವ ಪ್ರಾಣ ಹಾನಿ ಹಾಗೂ ಗಾಯಗೊಳ್ಳುವ ಪ್ರಮಾಣವನ್ನೂ ಕಡಿಮೆಗೊಳಿಸುವಲ್ಲಿ ಕೊಡುಗೆ ನೀಡುತ್ತಿದ್ದಾರೆ.

ತೀರ್ಪುಗಾರರು ಮಾಡಿದಂತಹ ಕೆಲವು ಪ್ರಮುಖ ನೀತಿ ಶಿಫಾರಸ್ಸುಗಳು ಈ ಕೆಳಗಿನಂತಿವೆ:

  1. ಬಸ್ ಬಳಕೆದಾರರಿಗೆ ಅವರು ಬಸ್ಸುಗಳನ್ನು ಬಳಸುವುದರಿಂದಾಗಿ ನಗರಕ್ಕೆ ಕೊಡುಗೆಯಾಗಿ ನೀಡುತ್ತಿರುವ ಸಕಾರಾತ್ಮಕಲಾಭಗಳನ್ನು ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು. ನಗರದಲ್ಲಿ ಬಸ್ ಪ್ರಯಾಣವನ್ನು ಉಚಿತಗೊಳಿಸುವುದು (ಅಥವಾ ಕನಿಷ್ಠ ಅನುದಾನಿತ ದರಗಳಲ್ಲಿ), ಪರಿಹಾರ ಒದಗಿಸುವ ಒಂದು ನೇರ ಕಾರ್ಯವಿಧಾನ.
  2. ಅನೌಪಚಾರಿಕ ಕಡಿಮೆ-ಆದಾಯದ ಉದ್ಯೋಗಗಳಲ್ಲಿ ತೊಡಗಿರುವಂತಹ ಮಹಿಳೆಯರು ಹಾಗೂ ಅವರ ಕುಟುಂಬಗಳ ಸದಸ್ಯರ ಶಾರೀರಿಕ ಹಾಗೂ ಭಾವನಾತ್ಮಕ ಆರೋಗ್ಯ ಸುಧಾರಣೆಗಾಗಿ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸುವುದು ಅತ್ಯಗತ್ಯ.ಇದು ಮಹಿಳೆಯರಿಗೆ ಕೆಲಸಕ್ಕೆ ಹೋಗಲು ಸುರಕ್ಷಿತ ಹಾಗೂ ಘನತೆಯುಳ್ಳ ಸಾರಿಗೆವ್ಯವಸ್ಥೆಯನ್ನು ಕಲ್ಪಿಸುತ್ತದೆ, ಜೊತೆಗೆ ಅವರಿಗೆ ಆರೋಗ್ಯಸೇವೆ ದೊರೆಯುವಂತೆ ಮಾಡುತ್ತದೆ ಹಾಗೂ ಬಾಲಕಿಯರ ಶೈಕ್ಷಣಿಕ ಸಾಧನೆಗಳಿಗೆ ಬಲ ನೀಡುತ್ತದೆ.
  3. ಕೈಗೆಟಕುವ ಬಸ್ ಸಾರಿಗೆ ಹಾಗೂ ಮಾನವ ಯೋಗಕ್ಷೇಮದ ಅಂಶಗಳು ಅಗತ್ಯವಾಗಿ ಅಂತರ್‌ಸಂಪರ್ಕಿತಗೊಂಡಿದ್ದು ಈ ಹಿನ್ನೆಲೆಯಲ್ಲಿ, ಬಸ್ ದರದಲ್ಲಿ ಮಾಡುವ ಬದಲಾವಣೆಗಳಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಹಾಗೂ ಮಾನವ ಸಂಪನ್ಮೂಲ ಇಲಾಖೆಗಳು/ ಸಚಿವಾಲಯಗಳಿಂದ ಪರ್ಯಾಯ ಹಣಕಾಸಿನ ಮಧ್ಯಸ್ಥಿಕೆಗಳ ಅಗತ್ಯವಿದೆ.
  4. ಮಿನಿ ಬಸ್ಸುಗಳ ನಿಯೋಜನೆ, ಬೆಂಗಳೂರಿನ ಹೊರವಲಯದ ಪ್ರದೇಶಗಳು ಹಾಗೂ ಉಪನಗರ ಬಡಾವಣೆಗಳಲ್ಲಿರುವ ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕಜಾಲದ ಪ್ರಯಾಣ ವೆಚ್ಚಗಳನ್ನು ಕಡಿಮೆಗೊಳಿಸುತ್ತದೆ.

ಇತರೆ ನಗರಗಳು ಏನು ಮಾಡಿವೆ?

  • ಮುಂಬೈ ನಗರದಲ್ಲಿ 2019ರಲ್ಲಿ ಬಸ್ ಟಿಕೆಟ್ ದರಗಳನ್ನು ಕಡಿಮೆಗೊಳಿಸಲಾಯಿತು ಹಾಗೂ ವಿವಿಧ ಹಂತಗಳಿಗೆರೂ.5 (5ಕಿ.ಮೀ.ವರೆಗೆ), ರೂ.10 (5-10 ಕಿ.ಮೀ.ಗಳಿಗೆ), ರೂ.15 (10-15 ಕಿ.ಮೀ.ಗಳಿಗೆ) ಹಾಗೂ ರೂ.20 (15 ಕಿ.ಮೀ. ಮೀರಿ) ದರವನ್ನು ನಿಗಧಿಪಡಿಸಲಾಯಿತು.
  • ಇದೇ ವರ್ಷದಲ್ಲಿ ದೆಹಲಿ ಸರ್ಕಾರ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸುವ ಮೂಲಕ ಮಹತ್ತರವಾದ ಕ್ರಮವನ್ನು ಕೈಗೊಂಡಿತು.
  • ಏಪ್ರಿಲ್ 2021ರಲ್ಲಿ ಪಂಜಾಬ್ ಸರ್ಕಾರ ರಾಜ್ಯದಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಬಸ್ ಪ್ರಯಾಣ ಉಚಿತಗೊಳಿಸಿತು, ಇದರಿಂದ ಪಂಜಾಬ್ ರಾಜ್ಯದ 1.3 ಕೋಟಿ ನಿವಾಸಿಗಳಿಗೆ ಅನುಕೂಲವಾಗಿದೆ.
  • ತಮಿಳುನಾಡು ಸರ್ಕಾರ ಮೇ 2021ರಲ್ಲಿ ಇದೇ ರೀತಿಯ ಒಂದು ನೀತಿಯನ್ನು ಅನುಸರಿಸಿತು.

ಈ ಮೇಲಿನ ರಾಜ್ಯ ಹಾಗೂ ನಗರ ಸರ್ಕಾರಗಳು ಅಲ್ಲಿನ ಬಸ್ ನಿಗಮಗಳಿಗೆ ಮಹಿಳೆಯರಿಗೆ ನಿರ್ಣಾಯಕವಾಗಿರುವಂತಹ ಕೈಗೆಟಕುವ ಸಂಚಾರ ವ್ಯವಸ್ಥೆಯಿರುವ ಸಾಮಾಜಿಕ ಹಾಗೂ ಆರ್ಥಿಕ ಹಣಕಾಸಿನ ಬೆಂಬಲ ಮತ್ತು ಹೆಚ್ಚು ಅವಕಾಶಗಳನ್ನು ಒದಗಿಸುತ್ತಿವೆ. ಮುಂಬೈನಲ್ಲಿ ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ ಬಸ್ ನಿಗಮಕ್ಕೆ ಬೆಂಬಲ ನೀಡಲು ಬೆಸ್ಟ್ಗೆ (BEST) ರೂ.600 ಕೋಟಿ ಹಣಕಾಸಿನ ನೆರವನ್ನು ಮಂಜೂರು ಮಾಡಿದೆ.ತಮಿಳುನಾಡಿನಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸಿದ್ದು,ಇದರಿಂದ ತಮಿಳುನಾಡು ಸರ್ಕಾರಕ್ಕೆ ವಾರ್ಷಿಕ ರೂ.1,200 ವೆಚ್ಚವಾಗುತ್ತಿದೆ. ದೆಹಲಿ, ಪಂಜಾಬ್ ಹಾಗೂ ತಮಿಳುನಾಡು ರಾಜ್ಯಗಳು ರಾಜ್ಯದಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರಯಾಣವನ್ನು ಉಚಿತಗೊಳಿಸಿವೆ. ಇದರಿಂದಾಗಿ ಆ ರಾಜ್ಯಗಳಲ್ಲಿ ಜನರ ಮಾಸಿಕ ಉಳಿತಾಯ ಪ್ರಮಾಣ ಹೆಚಾ- ್ಚಗಿರುವುದು ಸಮೀಕ್ಷೆಗಳ ಮೂಲಕತಿಳಿದು ಬಂದಿದೆ(4). ಮುಂದುವರೆದು, ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಸ್ಸುಗಳನ್ನು ಬಳಸುವ ಕಾರಣದಿಂದಾಗಿ ಅವರಿಗೆ ಬಸ್ ಪ್ರಯಾಣ ಸುರಕ್ಷಿತವೆನಿಸಿದೆ.ನಾಗರಿಕ ಸೇವಾ ಸಂಸ್ಥೆಗಳು ತಿಳಿಸಿರುವಂತೆ ಒಟ್ಟಾರೆಯಾಗಿ ಮಹಿಳೆಯರನ್ನು ಜೊತೆಗೂಡುವ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ಬಸ್ ಬಳಕೆಯ ಪ್ರಮಾಣ ಹೆಚ್ಚಿದೆ. ಇತರೆ ಸಾರಿಗೆ ವ್ಯವಸ್ಥೆಗಳಿಗಿಂತ ಬಸ್ ಪ್ರಯಾಣ ಮಹತ್ತರವಾದ ಮಟ್ಟಿಗೆ ಕಡಿಮೆ ಇರುವ ಕಾರಣದಿಂದಾಗಿ ಅಲ್ಲಿನ ಜನರು ಖಾಸಗಿ ವಾಹನಗಳ ಬಳಕೆಯನ್ನು ನಿಲ್ಲಿಸಿ ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸುವ ಸಂಭವ ಹೆಚ್ಚಿದೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆಯೂ ಕಡಿಮೆಯಾಗುತ್ತದೆ.

ನಮ್ಮ ಬೇಡಿಕೆಗಳು

ಕೈಗೆಟಕುವ ಸಾರಿಗೆ ವ್ಯವಸ್ಥೆ ದೊರೆಯುವಿಕೆಯ ಕೊರತೆ ಸೌಲಭ್ಯವಂಚನೆಯ ಹಲವು ಪದರಗಳಿಗೆ ದಾರಿ ಮಾಡಿಕೊಡುತ್ತದೆ ಹಾಗೂ ಜನರನ್ನು ಹೆಚ್ಚು ಬಡವರನ್ನಾಗಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಈ ಮೂಲಕ ಜನರು ಬಡತನದಿಂದ ಆಚೆಬಂದು,ತಮ್ಮ ಸ್ವಂತ ಪ್ರಯತ್ನದಿಂದ ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ಸಾಮರ್ಥ್ಯವೂ ಸಹ ಗಂಭೀರವಾಗಿ ಸೀಮಿತಗೊಳ್ಳುತ್ತದೆ. ಸಾಮಾನ್ಯ ಜನರಿಗೆ ಹಾಗೂ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಕೈಗೆಟಕುವಂತೆ ಮಾಡುವುದು ನಗರದಲ್ಲಿರುವ ಬಹುಪಾಲು ಎಲ್ಲರಿಗೂ ಒಂದಿಲ್ಲ ಒಂದು ರೀತಿಯಲ್ಲಿ ದೊಡ್ಡ ಪರಿಹಾರವನ್ನು ಒದಗಿಸುತ್ತದೆ ಹಾಗೂ ಜೀವನ ನಡೆಸಲು ಹೋರಾಟವನ್ನುಕಡಿಮೆಗೊಳಿಸುತ್ತೆ ಮತ್ತು ಹೆಚ್ಚು ಆರ್ಥಿಕ ಅವಕಾಶಗಳು ಹಾಗೂ ಜನರಿಗೆ ಸುಧಾರಿತ ಜೀವನ ಪರಿಸ್ಥಿತಯನ್ನು ಕಲ್ಪಿಸಿಕೊಡುತ್ತದೆ.

ಈ ಸಂಬಂಧ ಕೂಡಲೇ ಈ ಕೆಳಕಂಡ ಅಂಶಗಳ ಕಡೆ ಗಮನ ನೀಡಿ ಕ್ರಮಕೈಗೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ:

ಬಿಎಂಟಿಸಿ ಬಸ್ ಟಿಕೆಟ್ ದರಗಳನ್ನು ಕಡಿಮೆಗೊಳಿಸಿ! ಆಯವ್ಯಯದಲ್ಲಿ ಇದಕ್ಕಾಗಿ ವಾರ್ಷಿಕ ರೂ.1000 ಕೋಟಿ ಹಂಚಿಕೆ ಮಾಡಿ!

  1. ಬಿಎಂಟಿಸಿ ಬಸ್ ಟಿಕೆಟ್ ದರಗಳನ್ನು ಸಾಮಾನ್ಯ ಜನರಿಗೆ ಅರ್ಧದಷ್ಟು ಕಡಿಮೆಗೊಳಿಸುವುದು
  2. ಮಹಿಳೆಯರು, ಮಂಗಳಮುಖಿಯರು ಹಾಗೂ ಹಿರಿಯ ನಾಗರಿಕರಿಗೆ ಬಿಎಂಟಿಸಿ ಪ್ರಯಾಣವನ್ನು ಉಚಿತಗೊಳಿಸುವುದು
  3. ವಿದ್ಯಾರ್ಥಿ ಬಸ್ ಪಾಸುಗಳನ್ನು ಉಚಿತಗೊಳಿಸಿ; ವಿದ್ಯಾರ್ಥಿಗಳು ಪಾಸ್ ಬಳಸಿ ನಗರದಯಾವುದೇ ಭಾಗಕ್ಕೆ ಬೇಕಾದರೂ ಓಡಾಡುವಂತೆ ಮಾಡಿ, ಕೇವಲ ಶಾಲೆ/ಕಾಲೇಜಿಗೆ ಮಾತ್ರವಲ್ಲ
  4. ಪ್ರಸ್ತುತ ಬಸ್ ಸೇವೆ ಸಮರ್ಪಕವಾಗಿ ಇಲ್ಲದಿರುವಂತಹ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಬಸ್‌ಗಳನ್ನು ಬಿಡುವುದು ಹಾಗೂ ಟ್ರಿಪ್‌ಗಳನ್ನು ಹೆಚ್ಚಿಸುವುದು
avatar of the starter
Bengaluru Bus Prayanikara VedikePetition Starterbbpvedike.wordpress.com | Bangalore Bus Prayaanikara Vedike (BBPV) was formed in 2013 to begin discussing various urban mobility related issues not being addressed in Bengaluru.
This petition had 59 supporters

Petition Closed

This petition had 59 supporters

Share this petition

The Decision Makers

Sri B S Bommai
Sri B S Bommai
Hon'ble Chief Minister, Karnataka
Sri B Sriramulu
Sri B Sriramulu
Hon'ble Minister for Transport, Karnataka
Petition updates