Kampanya güncellemesiRestore 'Mangalore Chemicals & Fertilizers' (MCFL) in PPL's corporate identityWe have reached a landmark of 1000 signatures but still there’s a long way to go. Up up
Maxim Alfred DsouzaMangalore, Hindistan
15 Ara 2025

ಮಾನ್ಯರೆ 

ವಿಷಯ: “ಮಂಗಳೂರು ರಸಗೊಬ್ಬರ ಕಾರ್ಖಾನೆ” (MCFL) ಹೆಸರು ಬದಲಾವಣೆ ವಿರುದ್ಧ ಒಕ್ಕೊರಳಿನ ಒತ್ತಾಯ 

                 ಮಂಗಳೂರಿನ ಹೆಮ್ಮೆಯ ಕೈಗಾರಿಕಾ ಸಂಸ್ಥೆ “ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ” (ಎಂಸಿಎಫ್) ಈ ಹೆಸರಲ್ಲಿ ಈಗ ಅಸ್ತಿತ್ವದಲ್ಲಿಲ್ಲ ಎಂಬ ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು. ಅಕ್ಟೋಬರ್ 16 ರಿಂದ ಎಂಸಿಎಫ್ ನ್ನು ಒರಿಸ್ಸಾದ ಪಾರದೀಪ್ ಫಾಸ್ಫೇಟ್ಸ್ ಎಂಬ ಸಂಸ್ಥೆಯೊಂದಿಗೆ ವಿಲೀನ ಗೊಳಿಸಿ,  ಎಂಸಿಎಫ್ ಹೆಸರನ್ನು ತೆಗೆದು ಹಾಕಿ ಅದರ ಅಸ್ತಿತ್ವವನ್ನೇ ಕೊನೆಗೊಳಿಸಲಾಗಿದೆ ಮತ್ತು ಪಾರಾದೀಪ್ ಫಾಸ್ಫೇಟ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ಇದರಿಂದ ಮಂಗಳೂರಿನ ಮತ್ತು ರಾಜ್ಯದ  ಐದ್ಯೋಗಿಕ ಭೂಪಟವೇ ಬದಲಾಗಲಿದೆ ಮತ್ತು ಸ್ಥಳೀಯ ಉದ್ಯೋಗಾವಕಾಶಗಳ ಮೇಲೆ ತೀವ್ರತಮ ಪರಿಣಾಮ ಬೀರಲಿದೆ. ಈ ಹೆಸರು ಬದಲಾವಣೆ ಸಂಸ್ಥೆಯ ಪಾಲುದಾರರಾದ ಈಗಿನ ಮತ್ತು ಹಿಂದಿನ ಉದ್ಯೋಗಿಗಳು, ಸಮುದಾಯದ ಜನರು, ಮಂಗಳೂರಿನ ಮತ್ತು ರಾಜ್ಯದ ಜನರಲ್ಲಿ ಆಕ್ರೋಶ ಮತ್ತು ಮಾನಸಿಕ ನೋವು ಉಂಟು ಮಾಡಿರುವುದು ನಿಜ. 
                    ಈ ಸಂಧರ್ಬದಲ್ಲಿ ಎಂಸಿಎಫ್ ನ ಮಾಜಿ ಮತ್ತು ನಿವೃತ್ತ ಉದ್ಯೋಗಿಗಳು ಜೊತೆಗೂಡಿ ಎಂಸಿಎಫ್ ಹೆಸರನ್ನು ಮರುಸ್ಥಾಪಿಸಬೇಕೆಂದು ಒಕ್ಕೊರಲಿನಿಂದ ಕರೆ ನೀಡಿದ್ದೇವೆ. 440 ಕ್ಕೂ ಅಧಿಕ ಮಾಜಿ ಉದ್ಯೋಗಿಗಳು “ಎಂಸಿಎಫ್ ಹೆಸರು ಉಳಿಸಿ “ ಎಂಬ ಅಭಿಯಾನವನ್ನು ಆರಂಭಿಸಿ, ರಾಜ್ಯದ ಜನರ, ಜನಪ್ರತಿನಿಧಿಗಳ, ಸರಕಾರದ ಮತ್ತು ಮಾಧ್ಯಮಗಳ ಗಮನಕ್ಕೆ ತರುತಿದ್ದೇವೆ.

                 ಐದು ದಶಕಗಳಿಂದ ಅಸ್ತಿತ್ವದಲ್ಲಿರುವ “ಎಂ.ಸಿ.ಎಫ್.ಎಲ್” ಹೆಸರು ಒಂದು ಕಾರ್ಪೊರೇಟ್ ನಾಮಫಲಕಗಿಂತ ಮಿಗಿಲಾದ ಪರಂಪರೆಯನ್ನು ಹೊಂದಿದ್ದು , ಸಮುದಾಯದ ಮತ್ತು ನೇರ ಪಾಲುದಾರರ ಹೆಮ್ಮೆ ಮತ್ತು ನಂಬಿಕೆಯ ಪ್ರತೀಕವಾಗಿತ್ತು. ಇದು ಮಂಗಳೂರಿನ ಕೈಗಾರಿಕಾ ಪರಂಪರೆ ಮತ್ತು ಗುರುತಿನ ಒಂದು ಅವಿಭಾಜ್ಯ ಅಂಗವಾಗಿದೆ.
             ಈ ಹೆಸರನ್ನು ಪುನಃ ಸ್ಥಾಪಿಸಿ ಈ ಪರಂಪರೆಯನ್ನು ಗೌರವಿಸುವುದು ಸ್ಥಾವರದ ಸ್ಥಾಪನೆಗೆ ಶ್ರಮಿಸಿದವರಿಗೆ, ಕೃಷಿ ಭೂಮಿ ತ್ಯಾಗ ಮಾಡಿದವರಿಗೆ ಮತ್ತು ಸ್ಥಳೀಯ ಸಮುದಾಯದ ಭಾವನೆಗಳಿಗೆ ಗೌರವ ತೋರಿಸುವುದಾಗಿದೆ. ಮಂಗಳೂರು ಘಟಕದ ಕಾರ್ಯಾಚರಣಾ ಮತ್ತು ಕಾರ್ಪೊರೇಟ್ ಗುರುತಿನೊಳಗೆ "ಮಂಗಳೂರು ರಸ ಗೊಬ್ಬರ ಕಾರ್ಖಾನೆ" ಯ ಗುರುತನ್ನು ಪುನಃ ಸ್ಥಾಪಿಸಲು ನಾವು ಆಡಳಿತ ಮಂಡಳಿಗೆ ಆಗ್ರಹಿಸಿದ್ದು ನಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಜನ ಪ್ರತಿನಿಧಿಗಳ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ವಿನಂತಿಸುತಿದ್ದೇವೆ. ಈ ಬೆಳವಣಿಗೆಯನ್ನು ಸರಕಾರದ ಗಮನಕ್ಕೆ ತಂದು ಮಂಗಳೂರಿನ ಅಸ್ಮಿತೆಯ ಸಂಕೇತವಾದ ಹೆಸರನ್ನು ಪುನಃಸ್ಥಾಪಿಸಲು ತಮ್ಮ ಪ್ರಭಾವವನ್ನು ಬೀರಬೇಕಾಗಿ ವಿನಂತಿಸುತಿದ್ದೇವೆ.

ಇತಿ ತಮ್ಮ ವಿಶ್ವಾಸಿಗಳಾದ

ಎಂ.ಸಿ.ಎಫ್.ಎಲ್ ಮಾಜಿ ಉದ್ಯೋಗಿಗಳು ಮತ್ತು ಸ್ಥಳೀಯ ಸಮುದಾಯದ ಪರವಾಗಿ,

Bağlantıyı kopyala
WhatsApp
Facebook
X
E-posta