ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಹಕ್ಕೊತ್ತಾಯ

The Issue
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ
ವಿಧಾನ ಸೌಧ
ಬೆಂಗಳೂರು
ವಿಷಯ: ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವಂತೆ ಹಕ್ಕೊತ್ತಾಯ.
ಕರ್ನಾಟಕದಲ್ಲಿನ ಉದ್ಯೋಗವಕಾಶಗಳಲ್ಲಿ ಸಿಂಹಪಾಲು ಸಹಜವಾಗಿ ಈ ನೆಲದ ಮಕ್ಕಳಿಗೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೇ 1983ರಲ್ಲಿ ರಚಿಸಿದ ಡಾ.ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲಾ ಖಾಸಗಿ, ಸರ್ಕಾರಿ ವಲಯದ ಎಲ್ಲಾ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುವತ್ತ ಹಲವಾರು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ 1986ರಲ್ಲೇ ಸಲ್ಲಿಸಿದೆ. ನೋವಿನ ಸಂಗತಿಯೆಂದರೆ ವರದಿ ಬಂದು 26 ವರ್ಷವಾದರೂ ಅದು ಪೂರ್ತಿ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕೆಂದು ಕರ್ನಾಟಕದ ಮುಖ್ಯಮಂತ್ರಿಗಳಾದ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.
ನಮ್ಮ ಮೂರು ಹಕ್ಕೊತ್ತಾಯಗಳು:
೧) ಇಂದಿಗೆ ಹೊಂದುವಂತೆ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಲು ತಜ್ಞರ ಸಮಿತಿ ರಚಿಸಬೇಕು.
೨) ಹೊಸ ಸಮಿತಿಯ ಶಿಫಾರಸ್ಸಿನನ್ವಯ ಪರಿಷ್ಕರಿಸಿದ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಮಾನ್ಯತೆ ಒದಗಿಸಬೇಕು.
೩) ಹೊಸ ವರದಿಯ ಅನ್ವಯ ಕರ್ನಾಟಕದಲ್ಲಿನ ಎಲ್ಲಾ ಉದ್ಯೋಗಗಳಲ್ಲಿ ಸಿಂಹಪಾಲು ಕನ್ನಡಿಗರಿಗೆ ಸಿಗುವಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
- ಹೆಸರು

Petition Closed
Share this petition
The Decision Makers
Petition updates
Share this petition
Petition created on 12 December 2012