Petition updateಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮನವಿ
ಕನ್ನಡದಲ್ಲಿ ಡಬ್ಬಿಂಗ್ ಇದೀಗ ನಿಜವಾಗಿದೆ

Priyank KSBangalore, India
8 Jun 2017
ಕರ್ನಾಟಕದಲ್ಲಿ ಕಾನೂನು ಬಾಹಿರವಾದ ಸಾರಾಸಗಟು ಡಬ್ಬಿಂಗ್ ನಿಷೇಧವು ಕನ್ನಡವನ್ನು ಮಾತ್ರ ಬಲ್ಲ ಕೋಟ್ಯಾಂತರ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ, ಜ್ಞಾನ ವಿಜ್ಞಾನ ವಾಹಿನಿಗಳ ಕಾರ್ಯಕ್ರಮಗಳನ್ನು ನೋಡುವ ಹಕ್ಕನ್ನು ಇಷ್ಟು ವರ್ಷಗಳ ಕಾಲ ಕಸಿದುಕೊಂಡಿತ್ತು. ಈ ಸಾರಾಸಗಟು ನಿಷೇಧದ ವಿರುದ್ಧ ದೊಡ್ಡ ಅಭಿಯಾನವನ್ನೇ ಹಮ್ಮಿಕೊಳ್ಳಲಾಯಿತು. ಜನಾಭಿಪ್ರಾಯ ಮೂಡಿಸುವ, ಡಬ್ಬಿಂಗ್ ನಿಷೇಧದಿಂದಾಗಿ ಕನ್ನಡ ಸಮಾಜದ ಹಾಗೂ ಭಾಷೆಯ ಮೇಲಾಗುತ್ತಿರುವ ಪರಿಣಾಮಗಳನ್ನು ಮನವರಿಕೆ ಮಾಡಿಸುವ ಪ್ರಯತ್ನ ಮಾಡಲಾಯಿತು. ಹತೋಟಿಕೂಟಗಳು ಇದಕ್ಕೆ ಬಗ್ಗದಿದ್ದಾಗ ಕೊನೆಗೆ ಕಾನೂನಿನ ಮೊರೆ ಹೋಗಿ ಡಬ್ಬಿಂಗ್ ಮೇಲೆ ಕಾನೂನು ಬಾಹಿರ ನಿಷೇಧ ಹೇರಿದ್ದನ್ನು ತೆರವುಗೊಳಿಸಬೇಕಾಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಡಬ್ಬಿಂಗ್ ಚಲನಚಿತ್ರಗಳು ತೆರೆಗೆ ಬರುವುದರ ಮೂಲಕ ಈ ಅಭಿಯಾನ ಒಂದು ತಾತ್ವಿಕ ಅಂತ್ಯದತ್ತ ಸಾಗಿದೆ. ಕನ್ನಡದಲ್ಲಿ ಡಬ್ಬಿಂಗ್ ಕಂಟೆಂಟ್ ತರಲು ನಡೆಸಿದ ಹೋರಾಟದ ಬಗೆಗಿನ ಕಿರು ಚಿತ್ರವನ್ನು ನೀವು ಇಲ್ಲಿ ನೋಡಬಹುದು.
ನೀವು ಈ ಅಭಿಯಾನವನ್ನು ಸದಾ ಬೆಂಬಲಿಸಿದ್ದೀರಿ. ವಿಶೇಷವಾಗಿ ಸಹಿ ಸಂಗ್ರಹದಲ್ಲಿ ಭಾಗವಹಿಸಿ ಡಬ್ಬಿಂಗ್‍ಪರ ದನಿಯೆತ್ತಿದ್ದೀರಿ, ನಿಮ್ಮೆಲ್ಲರ ಬೆಂಬಲದಿಂದಲೇ, 'ಸತ್ಯದೇವ್ ಐಪಿಎಸ್' (www.sathyadevips.com) ಎಂಬ ಪ್ರಮುಖ ಚಿತ್ರವು ತೆರೆ ಕಾಣಲು ಕಾರಣವಾಗಿದೆ. ಕನ್ನಡದಲ್ಲಿ ಡಬ್ಬಿಂಗ್ ತರಬೇಕೆಂಬ ದೃಡ ಮನಸ್ಸು ಹೊಂದಿರುವ ಹಾಗೂ ಡಬ್ಬಿಂಗ್ ಪರ ಹೋರಾಟದಲ್ಲೂ ನಮಗೆ ಬೆಂಬಲಿಸಿದ ಹಲವಾರು ಕನ್ನಡಪರ ಮನಸ್ಸಗಳೇ ಒಂದು ತಂಡವಾಗಿ Crowd Funding ಮಾಡಿ ಈ ಚಿತ್ರವನ್ನು ನಿರ್ಮಿಸಿರುತ್ತಾರೆ.
ಹೋರಾಟಕ್ಕೆ ಬೆನ್ನೆಲುಬಾಗಿ ನಿಂತ ನೀವು ಇನ್ನು ಮುಂದೆ ಡಬ್ಬಿಂಗ್ ಚಿತ್ರಗಳನ್ನು ನೋಡುವ ಮೂಲಕ, ಡಬ್ಬಿಂಗ್ ಚಿತ್ರಗಳನ್ನು ನಿರ್ಮಿಸುತ್ತಿರುವ ನಿರ್ಮಾಪಕರನ್ನು ಬೆಂಬಲಿಸಬೇಕಿದೆ, ಈ ಮೂಲಕ ಕನ್ನಡದಲ್ಲಿ ಇನ್ನೂ ಹೆಚ್ಚಿನ ಡಬ್ಬಿಂಗ್ ಚಿತ್ರಗಳು ಮುಖ್ಯವಾಹಿನಿಗೆ ಬರಲು ನೆರವಾಗಬೇಕಿದೆ.
'ಸತ್ಯದೇವ್ ಐಪಿಎಸ್' ಚಿತ್ರವು ಆನ್‍ಲೈನಿನಲ್ಲಿಯೂ ನೋಡಲು ಸಿಗುತ್ತಿದೆ.
ಚಿತ್ರವನ್ನು ಯೂಟ್ಯೂಬಿನಲ್ಲಿ ನೋಡಲು ಈ ಲಿಂಕ್ ಬಳಸಿ.
ಚಿತ್ರವನ್ನು ವಿಮಿಯೋದಲ್ಲಿ ನೋಡಲು ಈ ಲಿಂಕ್ ಬಳಸಿ.
ಕನ್ನಡಪರವಾದ ಒಂದು ಹೋರಾಟಕ್ಕೆ ನೀವು ಕೊಟ್ಟಿರುವ ಬೆಂಬಲಕ್ಕೆ ವಂದನೆಗಳು, ನಮ್ಮ ಎಲ್ಲಾ ಕನ್ನಡದ ಕೆಲಸಗಳಿಗೆ ನಿಮ್ಮ ಬೆಂಬಲ ಹೀಗೇ ಇರಲಿ.
Copy link
WhatsApp
Facebook
Nextdoor
Email
X