Petition Closed

ಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮನವಿ

This petition had 1,889 supporters


ಕರ್ನಾಟಕದಲ್ಲಿ ಇತರೆ ಭಾಷೆಯಲ್ಲಿರುವ ಜ್ಞಾನ, ಮನರಂಜನೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರದಂತೆ ಡಬ್ಬಿಂಗ್ ಮೇಲೆ ಒಂದು ಅಸಂವಿಧಾನಿಕವಾದ ಖಾಸಗಿ ನಿಷೇಧ ಜಾರಿಯಲ್ಲಿದೆ. ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳಲ್ಲಿ ಡಬ್ಬಿಂಗ್ ಅನ್ನು ಭಾಷೆಯನ್ನು ಪಸರಿಸುವ ಒಂದು ಸಾಧನವನ್ನಾಗಿ ಗುರುತಿಸಿದೆ. ಜಗತ್ತಿನಾದ್ಯಂತ ಡಬ್ಬಿಂಗ್ ಅನ್ನು ಭಾಷೆ ಬೆಳೆಸಲು, ಹರಡಲು ಒಂದು ಸಾಧನವಾಗಿಯೇ ಬೇರೆ ಬೇರೆ ನುಡಿಸಮಾಜಗಳು ಬಳಸುತ್ತಿವೆ. ಹೀಗಿದ್ದರೂ ಖಾಸಗಿ ನಿಷೇಧವೊಂದರಿಂದಾಗಿ ಜಗತ್ತಿನ ಅತ್ಯು ತ್ತಮವಾದ ಮಾಹಿತಿ, ಜ್ಞಾನ, ಮನರಂಜನೆಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಸವಿಯುವ ಆಯ್ಕೆ ಸ್ವಾತಂತ್ರ್ಯದಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಡಬ್ಬಿಂಗ್ ಅನ್ನು ಒಂದು ಉದ್ಯಮದಂತೆ ಮಾಡುವುದರ ಮೇಲಾಗಲೀ, ಡಬ್ ಆದ ಕಾರ್ಯಕ್ರಮಗಳನ್ನು ನೋಡುವುದರ ಮೇಲಾಗಲೀ ಭಾರತದ ಸಂವಿಧಾನ ಮತ್ತು ಕಾನೂನುಗಳು ಯಾವುದೇ ನಿರ್ಬಂಧ ಹೇರಿಲ್ಲ. ಹೀಗಿದ್ದರೂ ಕೆಲವು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಕಾನೂನು ಧಿಕ್ಕರಿಸಿಯಾದರೂ ಕನ್ನಡದಲ್ಲಿ ಡಬ್ಬಿಂಗ್ ಅನ್ನು ತಡೆಯುತ್ತೇವೆ ಅನ್ನುವ ಬೆದರಿಕೆಯ ಮಾತುಗಳನ್ನಾಡುತ್ತಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಕಾನೂನು ಬದ್ಧವಾಗಿ ಡಬ್ಬಿಂಗ್ ಮಾಡಬೇಕೆಂದಿರುವ ಜನರನ್ನು ಮತ್ತು ಡಬ್ ಆದ ಕಾರ್ಯಕ್ರಮಗಳನ್ನು ನೋಡಬೇಕು ಅನ್ನುವ ಕನ್ನಡಿಗರ ನ್ಯಾಯಯುತವಾದ ಆಯ್ಕೆಯ ಹಕ್ಕನ್ನು ಬಲವಂತವಾಗಿ ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆ ಸ್ಪಷ್ಟವಾಗಿ ಕರ್ನಾಟಕದ ಕಾನೂನು-ಸುವ್ಯವಸ್ಥೆಗೆ ಮತ್ತು ಕರ್ನಾಟಕದ ಸರ್ಕಾರದ ಸಾರ್ವಭೌಮತ್ವಕ್ಕೆ ಸವಾಲು ಎಸೆಯುವಂತಿದೆ.

ಕನ್ನಡಿಗರ ಪ್ರತಿನಿಧಿಯಾದ ನೀವು ಇದನ್ನು ಗಂಭೀರವಾಗಿ ಪರಿಗಣಿಸಿ, ಸಂವಿಧಾನವು ಮಾನ್ಯ ಮಾಡಿರುವ ಆಯ್ಕೆ ಸ್ವಾತಂತ್ರ್ಯವನ್ನು ಕನ್ನಡಿಗರೆಲ್ಲರಿಗೆ ಕಲ್ಪಿಸುವತ್ತ ಡಬ್ಬಿಂಗ್ ವಿಷಯದಲ್ಲಿ ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಈ ಸಹಿ ಸಂಗ್ರಹ ಅಭಿಯಾನದ ಮೂಲಕ ಕೇಳಿಕೊಳ್ಳುತ್ತೇವೆ. 

--
ಪ್ರಿಯಾಂಕ್ ಕತ್ತಲಗಿರಿ
ಆನಂದ್. ಜಿ.
ವಸಂತ್ ಶೆಟ್ಟಿ
ವಲ್ಲೀಶ್ ಕುಮಾರ್
ಬಾಬು ಅಜಯ್
ಮಲ್ಲೇಶ್ ಬಿ. ಜಿ.
ಜಯಂತ್ ಸಿದ್ಮಲ್ಲಪ್ಪ



Today: Priyank is counting on you

Priyank KS needs your help with “ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ: ಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮನವಿ”. Join Priyank and 1,888 supporters today.