"Stop the Privatization of Karnataka’s Electricity Distribution "

Recent signers:
Ashok Hunashyal and 19 others have signed recently.

The Issue

ನಾವು ಕರ್ನಾಟಕದ ನಾಗರಿಕರು, ವಿದ್ಯುತ್ ಗ್ರಾಹಕರು, ರೈತರು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ವಿದ್ಯುತ್ ಕಂಪನಿ ನೌಕರರು, ವಿದ್ಯುತ್ ಕಂಪನಿ ಖಾಸಗೀಕರಣದ ಯಾವುದೇ ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸುತ್ತೇವೆ.

ವಿದ್ಯುತ್ ಸೇವೆಯು ಕೇವಲ ಒಂದು ವ್ಯಾಪಾರಿಕ ಸೇವೆಯಲ್ಲ; ಅದು ಜನಜೀವನ, ಕೃಷಿ, ಶಿಕ್ಷಣ, ಆರೋಗ್ಯ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯವಾದ ಮೂಲಭೂತ ಸಾರ್ವಜನಿಕ ಸೇವೆಯಾಗಿದೆ. ವಿದ್ಯುತ್ ಕಂಪನಿಯು ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳಿಗೂ ನಿರಂತರ ವಿದ್ಯುತ್ ಪೂರೈಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಖಾಸಗೀಕರಣದಿಂದ ಉಂಟಾಗಬಹುದಾದ ಪರಿಣಾಮಗಳು:

* ವಿದ್ಯುತ್ ದರಗಳಲ್ಲಿ ಏರಿಕೆ.
* ಗ್ರಾಮೀಣ ಮತ್ತು ಸಾಮಾಜಿಕ ಸೇವೆಗಳ ನಿರ್ಲಕ್ಷ್ಯ.
* ನೌಕರರ ಉದ್ಯೋಗ ಭದ್ರತೆ ಹಾಗೂ ಕಲ್ಯಾಣದ ಮೇಲೆ ಪರಿಣಾಮ.
* ಸಾರ್ವಜನಿಕ ಹಿತಾಸಕ್ತಿಗಿಂತ ಲಾಭದ ಮೇಲೆ ಹೆಚ್ಚಿನ ಒತ್ತು.
* ಜನರ ಮುಂದೆ ಉತ್ತರದಾಯಿತ್ವದಲ್ಲಿ ಕುಸಿತ.

ಆದ್ದರಿಂದ ನಾವು ಸರ್ಕಾರವನ್ನು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ:

1.  ಅನ್ನು ಸಾರ್ವಜನಿಕ ಸಂಸ್ಥೆಯಾಗಿ ಮುಂದುವರಿಸಬೇಕು.
2. ಮೂಲಸೌಕರ್ಯ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕು.
3. ತಾಂತ್ರಿಕ ಸುಧಾರಣೆಗಳ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು.
4. ಗ್ರಾಹಕ ಸೇವೆಗಳನ್ನು ಇನ್ನಷ್ಟು ಬಲಪಡಿಸಬೇಕು.
5. ರೈತರು, ಗ್ರಾಹಕರು ಹಾಗೂ ನೌಕರರ ಹಿತಾಸಕ್ತಿಯನ್ನು ಕಾಪಾಡಬೇಕು.

ಸಾರ್ವಜನಿಕ ವಿದ್ಯುತ್ ಸೇವೆ ಜನರ ಹಕ್ಕು; ಅದು ಲಾಭಕ್ಕಾಗಿ ನಡೆಸುವ ವ್ಯಾಪಾರವಲ್ಲ.

ಆದ್ದರಿಂದ  ವಿದ್ಯುತ ಖಾಸಗೀಕರಣದ ಯಾವುದೇ ಪ್ರಸ್ತಾವನೆಯನ್ನು ಕೈಬಿಟ್ಟು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ದಿಕ್ಕಿನಲ್ಲಿ  ಕರ್ನಾಟಕದ ವಿದ್ಯುತ್ ಕಂಪನಿ ಅನ್ನು ಇನ್ನಷ್ಟು ಬಲಪಡಿಸುವಂತೆ ಕರ್ನಾಟಕ ಸರ್ಕಾರವನ್ನು ನಾವು ಆಗ್ರಹಿಸುತ್ತೇವೆ.

592

Petition Updates