Rename Belagavi airport as "Kittur Rani Chennamma Airport" and install her statue

Recent signers:
Samarth Aralimatti and 19 others have signed recently.

The Issue

ಬೆಳಗಾವಿ ವಿಮಾನ ನಿಲ್ದಾಣದ ಇತಿಹಾಸವು 1942ರಲ್ಲಿ ಬ್ರಿಟಿಷ್ ರಾಯಲ್ ಏರ್ ಫೋರ್ಸ್ (RAF) ನಿಂದ ನಿರ್ಮಾಣಗೊಂಡಿದ್ದು, ದ್ವಿತೀಯ ಮಹಾಯುದ್ಧದ ಸಮಯದಲ್ಲಿ ತರಬೇತಿ ಕೇಂದ್ರವಾಗಿ ಸೇವೆ ಸಲ್ಲಿಸಿತು. ಕರ್ನಾಟಕದ ಮೂರನೇ ಹಳೆಯ ವಿಮಾನ ನಿಲ್ದಾಣವಾಗಿರುವ ಇದು, ಸ್ವಾತಂತ್ರ್ಯದ ನಂತರ 1956ರಲ್ಲಿ DGCA ಮತ್ತು 1962ರಲ್ಲಿ ಸಿವಿಲ್ ಏವಿಯೇಷನ್ ಸಚಿವಾಲಯದ ಅಧೀನಕ್ಕೆ ಬಂದಿತು. 1990ರ ದಶಕದಲ್ಲಿ ವಿವಿಧ ಏರ್‌ಲೈನ್‌ಗಳು ಸೇವೆ ನೀಡಿದ್ದ ಈ ನಿಲ್ದಾಣವು ಇಂದು ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮುಂತಾದ ನಗರಗಳೊಂದಿಗೆ ಸಂಪರ್ಕ ಕಲ್ಪಿಸಿ, ಉತ್ತರ ಕರ್ನಾಟಕದ ಆರ್ಥಿಕತೆಯನ್ನು ಬೆಂಬಲಿಸುತ್ತಾ, ಭಾರತದ ವಿವಿಧ ಭಾಗಗಳ ನಡುವಿನ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಬೆಳವಣಿಗೆಯೊಂದಿಗೆ, ಇದು ಪ್ರದೇಶದ ಅಭಿವೃದ್ಧಿಯ ಸಂಕೇತವಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮನವರು 1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಜನಿಸಿದರು. ಅವರು, 15ನೇ ವಯಸ್ಸಿನಲ್ಲಿ ಕಿತ್ತೂರಿನ ರಾಜ ಮಲ್ಲಸರ್ಜರನ್ನು ವಿವಾಹವಾದರು. 1824ರಲ್ಲಿ ಪತಿಯ ಮರಣದ ನಂತರ, ದತ್ತುಪುತ್ರನನ್ನು ಆಯ್ಕೆಮಾಡಿದರೂ ಬ್ರಿಟಿಷರ ಡಾಕ್ಟ್ರಿನ್ ಆಫ್ ಲ್ಯಾಪ್ಸ್ ನೀತಿಯಿಂದಾಗಿ ರಾಜ್ಯವನ್ನು ವಶಪಡಿಸಿಕೊಳ್ಳಲು ಮುಂದಾದರು. ಚೆನ್ನಮ್ಮನವರು ಸoಗೋಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಬೆಳವಡಿಯ ವಡ್ಡರ ಎಲ್ಲಣ್ಣ ರಂತಹ ನೂರಾರು ವೀರ ಸೇನಾನಿಗಳ ನೆರವಿನೊಂದಿಗೆ ಸಶಸ್ತ್ರ ಹೋರಾಟ ನಡೆಸಿ, ಮೊದಲ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸಿ, ಕಲೆಕ್ಟರ್ ಸೇಂಟ್ ಜಾನ್ ಥ್ಯಾಕರೆಯನ್ನು ಕೊಂದರು. ಎರಡನೇ ಯುದ್ಧದಲ್ಲಿ ಸೆರೆಯಾಗಿ, 1829ರಲ್ಲಿ ಬೈಲಹೊಂಗಲದ ಕಾರಾಗೃಹದಲ್ಲಿ ಶಿವಾದಿನರಾದರು. ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಕನ್ನಡ ನಾಡಿನ ಜಾನಪದ ನಾಯಕಿಯಾಗಿ ಅಮರಳಾದ ಅವರ ಹೋರಾಟದ ಧೈರ್ಯವು ಭಾರತೀಯರಲ್ಲಿ ಸ್ವಾತಂತ್ರ್ಯದ ಬೆಂಕಿಯನ್ನು ಹಚ್ಚಿತು. 

ಅದಕ್ಕಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವುದು ಸೂಕ್ತವಾಗಿದ್ದು, ಪ್ರದೇಶದ ಐತಿಹಾಸಿಕ ಗೌರವವನ್ನು ಹೆಚ್ಚಿಸುತ್ತದೆ.

ಅತೀತದಲ್ಲಿ   "ಬೆಳಗಾವಿಕೆಎ (BelagaviKA)" ಪೇಜ್ ನ ಸದಸ್ಯರು ಮತ್ತು ಬೈಲಹೊಂಗಲದ "ಕ್ಯಾಪ್ಟನ್ ಅಕ್ಷಯ ಬಿ ಪಾಟೀಲ" ರವರು ಹಲವು ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಿದ್ದರಿಂದ ಕರ್ನಾಟಕ ವಿಧಾನಸಭೆ ಇದಕ್ಕೆ ಏಕಮತದಿಂದ ನಿರ್ಣಯ ಅಂಗೀಕರಿಸಿದೆ. ಆದರೆ ಕೇಂದ್ರದಿಂದ ಇನ್ನೂ ಅಂತಿಮ ಅನುಮೋದನೆ ಬಂದಿಲ್ಲ ಹಾಗೂ ಇನ್ನೂ ಕಾರ್ಯಗತಗೊಂಡಿಲ್ಲ. ಬೆಳಗಾವಿಯ ಪೂರ್ವ ಲೋಕಸಭಾ ಸದಸ್ಯರಾಗಿದ್ದ ದಿವಂಗತ "ಶ್ರೀ ಸುರೇಶ ಅಂಗಡಿ" ಅವರು ಈ ಪ್ರಸ್ತಾವನೆಯನ್ನ ಮೆಚ್ಚಿ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುವುದಾಗಿ ಹೇಳಿದ್ದರು. ತದನಂತರ  ರಾಜ್ಯಸಭಾ ಸದಸ್ಯರಾದ "ಶ್ರೀ ಈರಣ್ಣ ಬಿ ಕಡಾಡಿ" ಅವರು ಮೇಲ್ಮನೆಯಲ್ಲಿ ಈ ವಿಷಯವನ್ನು ಎತ್ತಿದ್ದಾರೆ ಹಾಗೂ  ಪೂರ್ವ ಲೋಕಸಭಾ ಸದಸ್ಯರಾದ "ಶ್ರೀಮತಿ ಮಂಗಳಾ ಸುರೇಶ್ ಅಂಗಡಿ" ಅವರು ಕೂಡ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದರು 

ಈಗ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. 322 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ 2027ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದ್ದು, ವಾರ್ಷಿಕ 3.5 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದೆ. ಈ ಹೊಸ ಟರ್ಮಿನಲ್ ಉದ್ಘಾಟನೆಯ ಸಂದರ್ಭದಲ್ಲಿ ವಿಮಾನ ನಿಲ್ದಾಣವನ್ನು ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಅಲ್ಲದೆ, ನಿಲ್ದಾಣದ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಸ್ಥಾಪಿಸಬೇಕು. ಈ ಪ್ರತಿಮೆಯು ಕೇವಲ ಕಲ್ಲು-ಲೋಹದ ಶಿಲ್ಪವಲ್ಲ; ಅದು ನಮ್ಮ ಸ್ವಾಭಿಮಾನ, ಮಹಿಳಾ ಸಬಲೀಕರಣ, ಸ್ವಾತಂತ್ರ್ಯ ಹಾಗೂ ವೀರತ್ವದ ಸಂಕೇತವಾಗಿ ನಿಲ್ಲುತ್ತದೆ. ಇದು ಪ್ರವಾಸೋದ್ಯಮವನ್ನು ಹೆಚ್ಚಿಸಿ, ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. 

ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಜನರು ಒಗ್ಗೂಡಿ ಈ ಕನಸನ್ನು ನನಸಾಗಿಸೋಣ. ಕಿತ್ತೂರು ರಾಣಿ ಚೆನ್ನಮ್ಮಜಿಯವರ  ವೀರತ್ವವನ್ನು ಜಗತ್ತಿಗೆ ತೋರಿಸೋಣ – ಬೆಳಗಾವಿ ವಿಮಾನ ನಿಲ್ದಾಣವು ಅವರ ಹೆಸರಿನಲ್ಲಿ ಹಾರಾಡಲಿ

– ಚೆನ್ನಮ್ಮನ ವೀರತ್ವ ಜಗತ್ತಿಗೆ ಸಾರಲಿ-

!!ಹರ ಹರ ಮಹದೇವ!!

avatar of the starter
Akshay PatilPetition Starter

987

Petition updates