
ಸಂಪಾದಕರು, ಪ್ರಜಾವಾಣಿ ದಿನಪತ್ರಿಕೆ.
ಮಾನ್ಯರೇ,
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕೇಂದ್ರೀಯ ವಿದ್ಯಾಲಯದ ಕಚೇರಿ,ಹಾಗೂ ಯೋಗ ವಿಶ್ವವಿದ್ಯಾಲಯ ಪ್ರಾರಂಭಿಸುವ ಯೋಜನೆಯ ವರದಿ ನೋಡಿ ಆಘಾತವುಂಟಾಯಿತು. ಖ್ಯಾತಪರಿಸರ ವಿಜ್ಞಾನಿ ಶ್ರೀ
ಯೆಲ್ಲಪ್ಪ ರೆಡ್ಡಿಯವರು ಹಾಗೂ ಖ್ಯಾತ ಭೂವಿಜ್ಞಾನಿ ಪ್ರೊ.ರೇಣುಕಾಪ್ರಸಾದ್ ಅವರ ನೇತೃತ್ವದಲ್ಲಿ 25 ವರ್ಷಗಳ ಹಿಂದೆ ಮುತುವರ್ಜಿ ವಹಿಸಿ ನೆಟ್ಟು,ಪೋಷಿಸಿ ಇಂದು ವೃಕ್ಷವಾಗಿ ಅನೇಕ ಪಕ್ಷಿಸಂಕುಲಗಳಿಗೆ
ಆಶ್ರಯಕೊಟ್ಟಿರುವುದು ಶ್ಲಾಘನೀಯ ಸಂಗತಿ.ಇದಲ್ಲದೆ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ ಜಿಯೋ ಪಾರ್ಕ್ ಹಾಗೂ ಅಂತರ್ಜಾಲವೃದ್ಧಿಗೆ ಪೂರಕವಾಗಿ ಅನೇಕ ಕಾರ್ಯಕ್ರಮಗಳು ರೂಪಿತವಾಗಿವೆ. ಹೀಗಿದ್ದೂ ಹಾಲಿ
ಉಪಕುಲಪತಿ ಉಚ್ಚ ನ್ಯಾಯಾಲಯದ ಆದೇಶದಂತೆ ಸ್ಥಾನಭ್ರಷ್ಟರಾದರೂ ರಾಜಕಾರಣಿಗಳಂತೆ ಕುರ್ಚಿ ಉಳಿಸಿಕೊಳ್ಳಲು ವಾಮಮಾರ್ಗದಿಂದ ಮುಂದುವರೆಯುತ್ತಿರುವುದೂ ಅಲ್ಲದೆ ಹಾಲಿ ವಿಶ್ವವಿದ್ಯಾಲಯದ
ಆವರಣದಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡಲುಹೊರಟಿರುವುದು ದುರ್ದೈವದ ಸಂಗತಿ.
ಇವೆಲ್ಲವನ್ನೂ ಕೂಲಂಕುಷವಾಗಿ ನೋಡಿದಾಗ ಪಟ್ಟಭದ್ರಹಿತಾಸಕ್ತಿಗಳ ಪಾತ್ರ ಎದ್ದು ಕಾಣುತ್ತಿದೆ. "ವೃಕ್ಷೋ ರಕ್ಷತಿ ರಕ್ಷಿತಃ"
ಎಂಬ ನಾಣ್ನುಡಿಯಂತೆ ನಾವು ವೃಕ್ಷಗಳನ್ನು ಬೆಳೆಸಿ, ಇಡೀ ಪರಿಸರಕ್ಕೆ ಆಮ್ಲಜನಕ ಕೊಡುವಂತೆಮಾಡಿ, ವೈವಿಧ್ಯ ಪಕ್ಷಿಗಳಿಗೆ ಆಶ್ರಯಕೊಡುವಂತೆ ಮಾಡಿ, ಸಮಾಜಕ್ಕೆ ಮಾದರಿಯಾಗಬೇಕಿರುವುದರಿಂದ,
ಸಮಾಜವಿರೋಧಿಯಾಗಿರುವ ಪ್ರಸ್ತುತಯೋಜನೆಯನ್ನು ಕೂಡಲೇ ಕೈಬಿಡಬೇಕಾಗಿ ಆಗ್ರಹಿಸುತ್ತೇವೆ.
ವಿಶ್ವವಿದ್ಯಾಲಯದ ಮೂಲಾರ್ಥವನ್ನೇ ತಿಳಿಯದೆ ಮೂರ್ಖರಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ . ರಾಷ್ಟ್ರಕವಿ
ಶ್ರೀ ಕುವೆಂಪು ಅವರ ದೂರದೃಷ್ಟಿಯ ಕೂಸು ವಿಶ್ವವಿದ್ಯಾಲಯ ಪದ. ಆ ಆವರಣದಲ್ಲಿ ಪ್ರಸ್ತುತ ಯೋಜನೆಯನ್ನು ಕಾರ್ಯರೂಪಕ್ಕೆ ತಂದದ್ದೇ ಆದರೆ ಸಹಸ್ರಾರು ವೃಕ್ಷಗಳಮಾರಣಹೋಮ ನಡೆಯುತ್ತದೆ. ಇದಕ್ಕೆ ಇಡೀ
ಸಮಾಜ ದ ವಿರೋಧವಿದೆ.
ಇಂತೀ,
ಡಾ.ಬಿ.ಆರ್.ವೆಂಕಟೇಶ್, ಹಾಗೂ ರು.ಲ. ಮಂಜುನಾಥ್. 424 , 8ನೇ ಮುಖ್ಯ ರಸ್ತೆ .ಹನುಮಂತನಗರ ಬೆಂಗಳೂರು-560019 ಚಲನವಾಣಿ ಸಂಖ್ಯೆ 9449824496 ಹಾಗೂ 9611105938