ದಾವಣಗೆರೆಯಿಂದ ಬೆಂಗಳೂರಿಗೆ ಒಂದು ಹೊಸ ಎಕ್ಸ್ಪ್ರೆಸ್ ರೈಲಿಗೆ ಬೇಡಿಕೆ

The Issue
ದಾವಣಗೆರೆ ಜನತೆಗೆ ಪ್ರತಿದಿನ ಬೆಂಗಳೂರಿಗೆ ಪ್ರಯಾಣಿಸಲು ಒಂದು ಪ್ರತ್ಯೇಕ ಎಕ್ಸ್ಪ್ರೆಸ್ ರೈಲಿನ ಅವಶ್ಯಕತೆ ತುಂಬಾ ಇದೆ. ದಾವಣಗೆರೆಯಲ್ಲಿ ಪ್ರತಿನಿತ್ಯ ಬೇರೆ ಬೇರೆ ಕಾರಣಗಳಿಗಾಗಿ ಬೆಂಗಳೂರಿಗೆ ತೆರಳುವ ಹಲವಾರು ಜನರು ಇದ್ದಾರೆ. ಆದರೆ, ನಗರದಿಂದ ಪ್ರಾರಂಭವಾಗುವ ಒಂದು ರೈಲು ಕೂಡ ಇಲ್ಲ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬೆಳಿಗ್ಗೆ 5.30ಕ್ಕೆ ದಾವಣಗೆರೆಯಿಂದ ಹೊರಟು 10 ಗಂಟೆಯ ಒಳಗೆ ಬೆಂಗಳೂರು ತಲುಪಿ, ಸಂಜೆ 5.30ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10 ಗಂಟೆಯ ಒಳಗೆ ದಾವಣಗೆರೆ ತಲುಪುವ ಎಕ್ಸ್ಪ್ರೆಸ್ ರೈಲು ಆರಂಭಿಸಬೇಕು ಎಂಬುದು ನಮ್ಮ ಆಗ್ರಹ. ಸದರಿ ರೈಲನ್ನು ಪ್ರಾರಂಭಿಸಲು ಅವಶ್ಯಕವಾದ ಸೌಕರ್ಯಗಳು ( Watering & other maintainance) ಹರಿಹರ ರೈಲು ನಿಲ್ದಾಣದಲ್ಲಿ ಈಗಾಗಲೇ ಲಭ್ಯವಿದೆ.
ದಾವಣಗೆರೆಯಿಂದ ಬೆಂಗಳೂರಿಗೆ ಪ್ರತಿನಿತ್ಯ ಓಡಾಡುವ ಜನದಟ್ಟಣೆ ಎಷ್ಟಿದೆಯೆಂಬ ಅಂದಾಜು ನಿಮಗೆ ಸಿಗಬೇಕಾದರೆ ಕೆಎಸ್ಸಾರ್ಟಿಸಿ ಪ್ರೀಮಿಯಂ ಬಸ್ಸುಗಳ ವೇಳಾಪಟ್ಟಿ ನೋಡಿ.
ದಾವಣಗೆರೆ ಆದಾಯ ಸಂಗ್ರಹಣೆಯಲ್ಲಿ, ಪ್ರಯಾಣಿಕರ ಸಂಖ್ಯೆಯಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿನ ಮೈಸೂರು ವಿಭಾಗದಲ್ಲಿ ಎರಡನೆ ಸ್ಥಾನದಲ್ಲಿದೆ. ಹೀಗಿದ್ದೂ ನಮ್ಮ ಊರಿನಿಂದ ರಾಜಧಾನಿಗೆ ಒಂದು ಪ್ರತ್ಯೇಕ ರೈಲು ಇಲ್ಲ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ದಾವಣಗೆರೆಯಿಂದ ಬೆಂಗಳೂರಿಗೆ ಈ ಅತ್ಯಗತ್ಯವಾದ ಎಕ್ಸ್ಪ್ರೆಸ್ ರೈಲು ಪ್ರಾರಂಭಿಸುವಂತೆ ನಮ್ಮ ಹಕ್ಕೊತ್ತಾಯ.
94

The Decision Makers
Petition updates
Share this petition
Petition created on 13 August 2025