Petition Closed
Petitioning Suvarna TV
This petition will be delivered to:
Suvarna TV

Telecast "Satyameva Jayate" in Kannada

There are 60 million kannada speaking population across the world. Not airing kannada version of "satyameva jayate" denies the fundamental rights of kannadigas to get their entertainment in their mother tongue. Hence, we urge suvarna TV to air kannada version of "satyameva jayate" a tele serial by Amirkhan productions.


Letter to
Suvarna TV
ಮುಖ್ಯಸ್ಥರು,
ಸುವರ್ಣ ಕನ್ನಡ ವಾಹಿನಿ,
ಏಷಿಯಾನೆಟ್ ಸಂಸ್ಥೆ, ಸ್ಟಾರ್ ಸಮೂಹ ಸಂಸ್ಥೆ

ಮಾನ್ಯರೇ,

ವಿಷಯ : ಈಗಾಗಲೇ ಘೋಷಿಸಿರುವಂತೆ “ಸತ್ಯಮೇವ ಜಯತೆ” ಧಾರವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಲು ಮನವಿ.

ಜಾಗೃತ ಗ್ರಾಹಕರಾದ ನಾವು ತಮ್ಮಲ್ಲಿ, ತಾವು ಈಗಾಗಲೇ ಘೋಷಿಸಿರುವಂತೆ “ಸತ್ಯಮೇವ ಜಯತೆ” ಧಾರವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಲು ಮನವಿ ಈ ಕೆಳಕಂಡ “ಮಿಂಬಲೆ ಮನವಿ” (ONLINE PETITION) ಯನ್ನು ಸಲ್ಲಿಸಲು ಬಯಸುತ್ತೇವೆ.

1. ಕನ್ನಡದ ಜನಪ್ರಿಯ ವಾಹಿನಿಗಳಲ್ಲಿ ಒಂದಾದ ಸುವರ್ಣ ವಾಹಿನಿಯಲ್ಲಿ ಶ್ರೀ. ಅಮೀರ್‌‍ಖಾನ್ ಅವರ “ಸತ್ಯಮೇವಜಯತೇ” ಎನ್ನುವ ಧಾರಾವಾಹಿಯು ಕನ್ನಡದಲ್ಲಿಯೇ ಪ್ರಸಾರವಾಗಲಿದೆ ಎನ್ನುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಕಂಡು ಸಂತಸಗೊಂಡಿರುವ ಗ್ರಾಹಕರಲ್ಲಿ ನಾನೊಬ್ಬನಾಗಿದ್ದು ಸ್ಟಾರ್ ಸಮೂಹವನ್ನು ಅಭಿನಂದಿಸುತ್ತೇನೆ ಮತ್ತು ಈ ಬೆಳವಣಿಗೆಯನ್ನು ಸ್ವಾಗತಿಸುತ್ತೇನೆ.
2. ಇದು ಕನ್ನಡದಲ್ಲಿಯೇ ಮನರಂಜನೆಯನ್ನು ಪಡೆದುಕೊಳ್ಳುವ ನಮ್ಮ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತಿರುವ ಕ್ರಮವಾಗಿದ್ದು, ಪರಭಾಷೆಯಲ್ಲಿ ತಯಾರಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಇತರೆ ಭಾರತೀಯ ಪ್ರಜೆಗಳಂತೆಯೇ, ನಮ್ಮ ತಾಯ್ನುಡಿಯಲ್ಲೇ ನೋಡುವ ಅವಕಾಶ ಮಾಡಿಕೊಡುತ್ತಿರುವುದಕ್ಕೆ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ “ಸತ್ಯಮೇವ ಜಯತೆ” ಕನ್ನಡದಲ್ಲೇ ಬರಬೇಕೆಂದು ಬಯಸುತ್ತೇನೆ.
3. ಕನ್ನಡ ನಾಡಿನಲ್ಲಿ ಅಸಂವಿಧಾನಿಕವಾಗಿಯೂ, ಜನ ವಿರೋಧಿಯಾಗಿಯೂ ಕೆಲವು ಪಟ್ಟಭದ್ರರು ತಾವಾಗೇ ಘೋಷಿಸಿರುವ “ಡಬ್ಬಿಂಗ್ ನಿಶೇಧ” ಇನ್ನಿಲ್ಲವಾಗಲಿ ಎನ್ನುವ ಹಕ್ಕೊತ್ತಾಯವನ್ನು ಈ ಮೂಲಕ ಮಂಡಿಸುತ್ತಿದ್ದೇನೆ.