

BBMP has provided letter for conserving this Biodiversity park.
ಶ್ರೀ ರಂಗನಾಥಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಹಾನಗರ ಪಾಲಿಕೆಯವರಿಗೆ ಪತ್ರದ ಮೂಲಕ ಜೈವಿಕ ವನ ಸಂರಕ್ಷಣೆ ಮಾಡಲು ಕೋರಿಕೆ ಸಲ್ಲಿಸಿದ್ದೆ. ಶ್ರೀಯುತ ವಿಜಯ ನಿಶಾಂತ್, ಭಾರ್ಗವ ಮತ್ತು ಎಲ್ಲಾ ಮಹಾನಗರ ಪಾಲಿಕೆ ಬಯೋಡೈವರ್ಸಿಟಿ ನಿರ್ವಹಣಾ ಸಮಿತಿ ಸದಸ್ಯರ ಸಹಾಯ ಕೇಳಲಾಗಿತ್ತು. ಶ್ರೀ ಗುರುದೇವ್ ನಾರಾಯಣಕುಮಾರ ರವರ ಸಹಭಾಗಿತ್ವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿರುವ ಬಯೋ ಪಾರ್ಕ್ ಕುರಿತು ವರದಿ ಪಡೆಯಲು ಪ್ರಯತ್ನ ಆಗಿತ್ತು.
ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಜೈವಿಕ ವನ ಅಸ್ತಿತ್ವ ಮತ್ತು ಅದರ ಮಹತ್ವ ಹಾಗೂ ಜೈವಿಕ ವನ ಉಳಿಸುವುದು ಅವಶ್ಯಕ ಎಂದು ಈ ಸಂಬಂಧ ಧ್ರಢೀಕರಣ ಪತ್ರ ನೀಡಿರುತ್ತಾರೆ. ಡಾ. ನಂದಿನಿ, ಪ್ರಾಚಾರ್ಯರು, ಬೆಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಸಂಬಂಧಿಸಿದ ವರದಿ ನೀಡಿರುವುದನ್ನು ಲಗತ್ತಿಸಲಾಗಿದೆ.
ಜೈವಿಕ ವನ ಸಂರಕ್ಷಣೆ ಮಾಡಲು ಅದರ ಅವಶ್ಯಕತೆಯನ್ನು ಒತ್ತಿ ಹೇಳಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕ ವನವನ್ನು ಇತರೆ ಸಂಸ್ಥೆಗಳಿಗೆ ಗುತ್ತಿಗೆ ಪರಭಾರೆ ಮಾಡಿದ ಹಿನ್ನೆಲೆಯಲ್ಲಿ ಈ ವರದಿ ನೀಡುವಂತೆ ಕೇಳಿಕೊಂಡಿದ್ದೆನು.
ಶ್ರೀಯುತ ರಂಗಸ್ವಾಮಿಯವರು ಮತ್ತು ಪಾಲಿಕೆ ಬಯೋಡೈವರ್ಸಿಟಿ ನಿರ್ವಹಣಾ ಸಮಿತಿ ಸದಸ್ಯರು ಹಾಗೂ ಡಾ. ನಂದಿನಿಯ ವರಿಗೆ ಆಭಾರಿಯಾಗಿದ್ದೇನೆ. ಜೈವಿಕ ವನ ಉಳಿದು ಮುಂದಿನ ಜನಾಂಗಕ್ಕೆ ಬಹಳ ಸಹಕಾರಿ ಆಗಲೆಂದು ಆಶಿಸುತ್ತೇನೆ.
ಪ್ರಾ. ಟಿ. ಜೆ. ರೇಣುಕಾ ಪ್ರಸಾದ್
ಮಾಜಿ ಜೈವಿಕ ವನ ಸಂಯೋಜಕ
ಬೆಂಗಳೂರು ವಿಶ್ವವಿದ್ಯಾಲಯ