ಮೈಸೂರು ಕರವೇ ಜಿಲ್ಲಾದ್ಯಕ್ಷ ಪ್ರವೀಣ್ ಅವರ ಮೇಲಿನ ಗಡೀಪಾರು ಆದೇಶ ಹಿಂದೆಗೆದುಕೊಳ್ಳಿ

The Issue

ಇವರಿಗೆ,
ಮಾನ್ಯ  ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ.

    ವಿಷಯ:-ಮೈಸೂರು ಉಪ-ಪೊಲೀಸ್ ಆಯುಕ್ತರಿಂದ ಕನ್ನಡ ಪರ ಹೋರಾಟಗಾರರ ಹೋರಾಟವನ್ನು ಗಡೀಪಾರು ಆದೇಶದಿಂದ ಹತ್ತಿಕ್ಕುವ ಹುನ್ನಾರವನ್ನು ಖಂಡಿಸಿ.

ಮಾನ್ಯರೆ,

           ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರವೀಣ್ ಎಂಬ ವ್ಯಕ್ತಿಯು ಕರ್ನಾಟಕ ರಕ್ಷಣಾ ವೇದಿಕೆಯ ನಂಜನಗೂಡು ತಾಲೋಕು ಅಧ್ಯಕ್ಷ ಮತ್ತು ಮೈಸೂರು ಜಿಲ್ಲಾಧ್ಯಕ್ಷರಾಗಿ ಅನೇಕ ಕನ್ನಡ ಪರ ಹೋರಾಟವನ್ನು ಮಾಡುತ್ತ ಬಂದಿರುತ್ತಾರೆ. ಕನ್ನಡಕ್ಕೆ ಕುಂದು ಬಂದಾಗ ಅದನ್ನು ಉಗ್ರವಾಗಿ  ಕಂಡಿಸಿದ್ದಾರೆ, ಅವರ ಕೆಲವು ಹೋರಾಟಗಳು ಕ್ರಾಂತಿಯಿಂದಲೂ ಸಹ ನಡೆದಿರುತ್ತವೆ. ಅಂತಹ ಕೆಲವು ಕನ್ನಡಪರ ಉಗ್ರ ಹೋರಾಟಗಳು ನೆಪವಾಗಿ ಅವರ ಮೇಲೆ ಹೋರಾಟದ ವಿಷಯಕ್ಕೆ ಸಂಬಂದಿಸಿದಂತೆ  ನಾಲ್ಕು ಮೊಕದ್ದಮೆಗಳು ಇರುತ್ತದೆ ಅದರಲ್ಲಿ.

೧) ಕಾವೇರಿ ನೀರಿನ ವಿಚಾರದಲ್ಲಿ ರೈಲ್ವೇ ಕಛೇರಿಯಲ್ಲಿ ನಡೆದ ಹೋರಾಟ.

೨) ಕನ್ನಡಿಗ ನೌಕರರ ವಿರೋಧಿ ನಿಲುವು ತಳೆದಿದ್ದ ಸಿ.ಎಫ್.ಟಿ.ಆರ್.ಐ ನಿರ್ದೇಶಕರಾದ ಪ್ರೊ.ರಾಮರಾಜಶೇಖರನ್ ರವರಿಗೆ ಕಪ್ಪು ಮಸಿ ಬಳಿದ ಪ್ರಕರಣ

೩) ಸಿ.ಎಫ್.ಟಿ.ಆರ್.ಐ ಕಛೇರಿಗೆ ಮುತ್ತಿಗೆ ಹಾಕಿದ ಪ್ರಕರಣ

೪)ಕನ್ನಡಿಗರಾದ ನಾವು ಗೌರವಿಸಿ ಪೂಜಿಸುವ ಕನ್ನಡದ ಧ್ವಜದ ಮೇಲೆ ಬಾಟಾ ಕಂಪನಿಯ ವ್ಯವಸ್ಥಾಪಕರು ಚಪ್ಪಲಿ ಮತ್ತು ಶೂಗಳನ್ನು ಇಟ್ಟು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದ ಕ್ರಮವನ್ನು ಖಂಡಿಸಿ ನಡೆಸಿದ ಹೋರಾಟದ ಪ್ರಕರಣ.

ಈ ಮೇಲ್ಕಂಡ ನಾಲ್ಕು ಪ್ರಕರಣದ ಮೊಕದ್ದಮೆಗಳು ಪ್ರವಿಣ್ ಅವರ ಮೇಲಿದೆ ಈ ಹೋರಾಟದ ಪ್ರಕರಣ ಹೊರತು ಪಡಿಸಿ ವಯುಕ್ತಿಕವಾಗಿ ಯಾವುದೇ ಮೊಕದ್ದಮೆ ಅವರ ಮೇಲಿರುವುದಿಲ್ಲ. ಉಪ-ಪೊಲೀಸ್ ಆಯುಕ್ತರು ಹೋರಾಟಗಾರರನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ, ಅವರ ಮೇಲೆ ದಾಖಲಾದ ಬಾಟಾ ಕಂಪನಿಯ ಪ್ರಕರಣ, ಕಂಪನಿಯ ವ್ಯವಸ್ಥಾಪಕ ಅವರ ಮೇಲೆ ನೀಡಿರುವ ದೂರು ಏನೆಂದರೆ "ನಮ್ಮ ಮಳಿಗೆಯ ಕುರ್ಚಿ,ಟೇಬಲ್ ಮತ್ತು ಗಣಕಯಂತ್ರ ಧ್ವಂಸಗೊಳಿಸಿದ್ದಾರೆ" ಮತ್ತು ಎಲ್ಲಿಯೂ ಕೂಡ ನಗದು,ಗಣಕಯಂತ್ರ ಅಥವಾ ಇನ್ನಿತರ ಕಳೆದುಹೋಗಿದೆ ಎಂದು ನಮೂದಿಸಿರುವುದಿಲ್ಲ . ಆದರೂ ಕೂಡ ಈ ಅಧಿಕಾರಿಗಳು ಪ್ರವೀಣ್ ಅವರ ಮೇಲೆ ಡಕಾಯಿತಿ ಪ್ರಕರಣ ದಾಖಲಿಸಿರುವುದು ಎಷ್ಟರ ಮಟ್ಟಿಗೆ ಸರಿಯಿದೆ?

 ಮಾನ್ಯರು ಪ್ರವೀಣ್ ಅವರಿಗೆ ನೀಡಿರುವ ಆದೇಶಪತ್ರದಲ್ಲಿ ೧೨-೧೨-೨೦೧೫ ಕ್ಕೆ ವಿಶೇಷ ಕಾರ್ಯನಿರ್ವಾಹಕ ಮತ್ತು ಉಪ-ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರದ ನ್ಯಾಯಾಲಯಕ್ಕೆ ೧೧.೦೦ಕ್ಕೆ ಹಾಜರಾಗಲು ಆದೇಶಸಿದ್ದರು ಸದರಿ ದಿನ ಪ್ರವೀಣ್ ಅವರು ಉಪ-ಪೊಲೀಸ್ ರವರ ಕಛೇರಿಗೆ ನಗರದ ಪ್ರತಿಷ್ಠಿತ ಹಿರಿಯ ವಕೀಲರೊಂದಿಗೆ ೧೦-೪೫ ಕ್ಕೆ ಆಗಮಿಸಿದ್ದರು, ಆದರೆ ಅಂದು ಉಪ-ಪೊಲೀಸ್ ಆಯುಕ್ತರು ಮಾನ್ಯ ಮುಖ್ಯಮಂತ್ರಿಗಳ ಬಂದೂಬಸ್ತ್ ಗೆ ತೆರಳಿರುತ್ತಾರೆ ಇದಕ್ಕೆ ಸಂಬಂಧಸಿದಾಗೆ ಅವರ ಆಪ್ತಸಹಾಯಕರಿಗೆ ಪ್ರವೀಣ್ ಅವರ ವಕೀಲರು ದೂರವಾಣಿ ಮುಖೇನ ಸಂಪರ್ಕಿಸಿದಾಗ ನಮ್ಮ ಉಪ-ಪೊಲೀಸ್ ಆಯುಕ್ತರು ಇಲ್ಲದ ಕಾರಣ ನಿಮಗೆ ಮತ್ತೊಮ್ಮೆ ನೋಟಿಸ್ ಬಂದ ನಂತರ ಬನ್ನಿ ಎಂದು ಉತ್ತರಿಸಿರುತ್ತಾರೆ.

ಅವರ ಆ ಉತ್ತರದಿಂದ ಮತ್ತೊಮ್ಮೆ ಬರಲಿರುವ ನೋಟಿಸ್ ಗಾಗಿ ಕಾಯುತ್ತಿರುವಾಗಲೆ ಒಂದು ಆದೇಶವನ್ನು ಹೊರಡಿಸಿರಿತ್ತಾರೆ, ಆ ಆದೇಶ ಯಾವ ರೀತಿಯಿದೆಯೆಂದರೆ ನೀವು ನಮ್ಮ ಕಛೇರಿಗೆ ಗೈರುಹಾಜರಾಗಿರುವುದರಿಂದ ನಿಮ್ಮನ್ನು ಮೈಸೂರು ನಗರಕ್ಕೆ ಆಗಮಿಸದಂತೆ ಗಡೀಪಾರು ಆದೇಶ ನೀಡಿದ್ದೀರಿ ಮತ್ತು ಅದರ ಪ್ರತಿಯನ್ನು ಪ್ರವೀಣ್ ಅವರ ಮನೆಯ ಗೋಡೆಗೆ ಅಂಟಿಸಿರುತ್ತಾರೆ.

ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಕುಂದು ಬಂದಾಗ ಹೋರಾಡಿದ್ದು ತಪ್ಪೇ? ಇಂತಹ ಕನ್ನಡಿಗರಿಗೆ ಈತೆರನಾದ ಶಿಕ್ಷೆ ಕೊಡುತ್ತ ಹೋದರೆ ಕನ್ನಡಿಗರಿಗೆ ಉಳಿವೆಲ್ಲಿ ? ದಯವಿಟ್ಟು ಇದನ್ನು ಮತ್ತೊಮ್ಮೆ ಪರೀಕ್ಷಿಸಿ ಆ ಕನ್ನಡಿಗನಿಗೆ ನ್ಯಾಯ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ

ಉಪ-ಪೊಲೀಸ್ ಆಯುಕ್ತರು ನೀಡಿರುವ ಈ ಆದೇಶ ಖಂಡನೀಯವಾದದ್ದು ಈ ಕೂಡಲೆ ಮೈಸೂರು ನಗರಕ್ಕೆ ಪ್ರವೇಶದಂತೆ ನಿರ್ಬಂಧಿಸಿ ಗಡೀಪಾರು ಮಾಡಿರುವುದನ್ನು ಹಿಂಪಡೆಯಬೇಕು ಎಂದು ಕೋರಿಕೊಳ್ಳುತ್ತಿದ್ದೆವೆ.

ಇಂತಿ ನಿಮ್ಮಯ

ಕನ್ನಡಿಗರು.
ಐಟಿ ಬಳಗ.

avatar of the starter
ಐಟಿ ಬಳಗPetition Starter
This petition had 161 supporters

The Decision Makers

Chief Minister
Chief Minister
Government of Karnataka

Petition Updates

Share this petition

Petition created on 21 December 2015