ಚಿಕ್ಕಲ್ಲೂರು, ಕಪ್ಪಡಿ ಜಾತ್ರೆಗಳಲ್ಲಿ 'ಮಾಂಸಾಹಾರ ನಿಷೇಧ' ತೆರವುಗೊಳಿಸಿ..

The Issue
ಚಿಕ್ಕಲ್ಲೂರು, ಕಪ್ಪಡಿ ಜಾತ್ರೆಗಳಲ್ಲಿ ಮಾಂಸಾಹಾರ ನಿಷೇಧವೇಕೆ ?
ಶತಮಾನಗಳ ಕಾಲದಿಂದ ಹಳೆ ಮೈಸೂರು ಪ್ರಾಂತ್ಯದ ಹತ್ತಾರು ಜಾತಿ-ಮತಗಳಿಗೆ ಸೇರಿದ ಮಂಟೇಸ್ವಾಮಿ ಪರಂಪರೆಯ ಜನ ಕೊಳ್ಳೇಗಾಲ ಬಳಿಯ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಗದ್ದುಗೆ ಹಾಗೂ ಕೆ ಆರ್ ನಗರ ಬಳಿಯ ಕಪ್ಪಡಿಯ ರಾಚಪ್ಪಾಜಿ ಗದ್ದುಗೆಗಳ ಬಳಿ ಜಾತ್ರೆ ನೆರವೇರಿಸುವುದು ತಿಳಿದಿರುವ ವಿಚಾರ. ಪ್ರತಿ ವರ್ಷ ಲಕ್ಷಾಂತರ ಜನ ಶದ್ದೆ -ಭಕ್ತಿಗಳಿಂದ ಧಾರ್ಮಿಕ ಆಚರಣೆಗಳನ್ನು ನಡೆಸುವುದು ರೂಢಿ. ಹಲವು ವರ್ಷಗಳ ಹಿಂದೆಯೇ 'ಭಂಗಿ ಸೇವೆ' ಎನ್ನುವ ಭಂಗಿ ಸೊಪ್ಪಿನ ಧೂಮಪಾನವನ್ನು ಸರಕಾರ ನಿಷೇಧಗೊಳಿಸಿತ್ತು. ಈ ವರ್ಷ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಎನ್ನುವ ಸಂಸ್ಥೆ ಸಲ್ಲಿಸಿದ ಅರ್ಜಿಯ ಅನ್ವಯ ಹೈಕೋರ್ಟ್ ಈ ಜಾತ್ರೆಗಳಲ್ಲಿ 'ಪ್ರಾಣಿ ಬಲಿ ನಿಷೇಧ' ಜಾರಿಯಾಗಬೇಕೆಂದು ನಿರ್ದೇಶನ ಕೊಟ್ಟಿದೆ. ಹಾಗೆಯೇ ಅಲ್ಲಿನ ಪೊಲೀಸ್ ಇಲಾಖೆ ಈ ಕುರಿತು ಕಟ್ಟೆಚ್ಚರ ವಹಿಸಿ ಯಾರು ಮಾಂಸಾಹಾರದ ಅಡುಗೆ ಮಾಡದಂತೆ ಚಿಕ್ಕಲೂರಿನ ಎಲ್ಲ ಮಾರ್ಗಗಳಲ್ಲೂ ಚೆಕ್ ಪೋಸ್ಟ್ ಗಳನ್ನು ಇತ್ತು ಕುರಿಕೋಳಿಗಳನ್ನು ತೆಗೆದುಕೊಂಡು ಹೋಗದಂತೆ ನೋಡಿಕೊಂಡಿದೆ.
ಚಿಕ್ಕಲ್ಲೂರು - ಕಪ್ಪಡಿ ಜಾತ್ರೆಗಳಲ್ಲಿ ಮಾಂಸಾಹಾರವೇ ಪ್ರಧಾನವೂ ಧಾರ್ಮಿಕ ಆಚರಣೆಯ ಪ್ರಸಾದವೂ ಆಗಿರುವುದರಿಂದ ಬಾಡೂಟ ಅಲ್ಲಿ ದೈವೀಕ ಆಚರಣೆಯ ಮುಖ್ಯ ಭಾಗವಾಗಿದೆ. ಗಮನಿಸಬೇಕು ಇಲ್ಲಿ ಯಾವುದೇ ಪ್ರಾಣಿಯನ್ನು ಬಲಿ ನೀಡಿ ಬಿಸಾಡುವುದಿಲ್ಲ. ಅದು ಜನರ ಆಹಾರವಾಗಿ ಬಳಸಲ್ಪಡುತ್ತದೆ.
ಕೋರ್ಟು ಹೀಗೆ ಜನರ ಆಹಾರವನ್ನೇ ನಿಷೇಧ ಮಾಡಿಬಿಟ್ಟರೆ ಹೇಗೆ? ಅದೂ ಅವರ ಧಾರ್ಮಿಕ ಆಚರಣೆಯ ಮುಖ್ಯಭಾಗವನ್ನೇ?
ಇದು ಈ ದೇಶದ ಸಾಮಾನ್ಯ ನಾಗರೀಕನ ಆಹಾರ ಮತ್ತು ಧಾರ್ಮಿಕ ಹಕ್ಕನ್ನು ಮುಟ್ಟುಗೋಲು ಹಾಕಿಕೊಂಡಂತೆ ಆಗುವುದಿಲ್ಲವೇ?
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರವು ತುರ್ತಾಗಿ ಹೈಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಲ್ಲದೆ ಈ ಎರಡು ಜಾತ್ರೆಗಳಲ್ಲಿ ಮಾಂಸಾಹಾರ/ ಬಲಿಯ ಮೇಲೆ ಹೇರಿರುವ ನಿಷೇಧ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
ಅವೈದಿಕರ - ಬುಡಕಟ್ಟು ಜನರ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳ ಮೇಲೆ ಎಲ್ಲ ಕಾಲದಲ್ಲೂ ನಡೆಯುತ್ತಲೇ ಬಂದಿರುವ 'ನಾಗರೀಕತೆ ' ಎನ್ನುವ ಹೆಸರಿನ ಏಕಮುಖಿ ಸಂಸ್ಕೃತಿ ಪ್ರಚಾರ ಮತ್ತು ಹೇರಿಕೆಯನ್ನು ನಾವು ಖಂಡಿಸುತ್ತೇವೆ.

Petition Closed
Share this petition
The Decision Makers
Petition Updates
Share this petition
Petition created on 29 January 2016