Petition updateಅಭಿಮನ್ಯುವಿಗೆ ಕೊನೆಯ ಬಾರಿಗೆ ಮೈಸೂರು ದಸರಾ – ಗೌರವದ ವಿದಾಯ ನೀಡಿ

ನಾಡಹಬ್ಬದ ಮೆರುಗನ್ನು ಹೆಚ್ಚಿಸಲು ರಾಜ ಗಾಂಭೀರ್ಯದ ನಡಿಗೆಯೊಂದಿಗೆ ಅಭಿಮನ್ಯು ಸಜ್ಜಾಗಿದ್ದಾನೆ! 💛

Narendra RTIndia
Sep 4, 2026

ಗಜಪಡೆಯ ಅಧಿನಾಯಕ, ಚಿನ್ನದ ಅಂಬಾರಿಯ ಗಜರಾಜ ಅಭಿಮನ್ಯು ಮತ್ತೆ ಸಾಂಸ್ಕೃತಿಕ ನಗರಿ ಮೈಸೂರಿಗೆ ರಾಜಗಾಂಭೀರ್ಯದಿಂದ ಹೆಜ್ಜೆ ಇಡುತ್ತಿದ್ದಾನೆ! 🐘✨
ಅಭಿಮನ್ಯುವಿನ ಈ ಮೈಸೂರು ಆಗಮನದ ಹಿಂದೆ ಶ್ರಮಿಸಿದ, ಕಾಳಜಿ ವಹಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಈ ಮಹತ್ಕಾರ್ಯಕ್ಕೆ ಸದಾ ಸಾಥ್ ನೀಡಿ ಧ್ವನಿಯಾದ ಪ್ರತಿಯೊಬ್ಬ ಆನೆ ಪ್ರೇಮಿಗಳಿಗೂ ಮತ್ತು ಸಾರ್ವಜನಿಕರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು. 🙏❤️
ನಿಮ್ಮೆಲ್ಲರ ಪ್ರೀತಿ ಮತ್ತು ನಿರಂತರ ಬೆಂಬಲದಿಂದಲೇ ಇಂದು ಗಜರಾಜನನ್ನು ಮತ್ತೊಮ್ಮೆ ಅರಮನೆಯ ಅಂಗಳದಲ್ಲಿ ಕಣ್ತುಂಬಿಕೊಳ್ಳುವ ಸಂಭ್ರಮ ನಮ್ಮದಾಗಿದೆ. ನಾಡಹಬ್ಬದ ಮೆರುಗನ್ನು ಹೆಚ್ಚಿಸಲು ರಾಜ ಗಾಂಭೀರ್ಯದ ನಡಿಗೆಯೊಂದಿಗೆ ಅಭಿಮನ್ಯು ಸಜ್ಜಾಗಿದ್ದಾನೆ! 💛
ಕಾಮೆಂಟ್‌ನಲ್ಲಿ ನಿಮ್ಮ ಪ್ರೀತಿಯನ್ನು ತಿಳಿಸಿ, ‘ಶುಭ ಹಾರೈಸಿ! 👇

Copy link
WhatsApp
Facebook
Nextdoor
Email
X