Table the Local Jobs Bill in the Belagavi Session. #JobsForKannadigas
The Issue
ಗೆ,
ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಮಾನ್ಯ ಕಾರ್ಮಿಕ ಸಚಿವರು
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
ವಿಷಯ: ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ
ಮಾನ್ಯರೇ,
ಕಾರ್ಖಾನೆಗಳು, ವಿಮಾನ ನಿಲ್ದಾಣಗಳು, ಐಟಿ ಪಾರ್ಕ್ಗಳು, ಗೋದಾಮುಗಳು, ಆಸ್ಪತ್ರೆಗಳು, ಹೋಟೆಲ್ಗಳು ಮತ್ತು ಕಚೇರಿಗಳು ಸೇರಿದಂತೆ ಕರ್ನಾಟಕದ ಅನೇಕ ಕಂಪನಿಗಳು ಇಲ್ಲಿನ ಉದ್ಯೋಗಗಳಿಗೆ ಬೇರೆ ರಾಜ್ಯಗಳಲ್ಲಿ ನೇಮಕಾತಿ ಮೇಳ ನಡೆಸುತ್ತಿವೆ. ಕೆಲವು ಜಾಹೀರಾತುಗಳಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಎಂದು ಹೇಳಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಅಥವಾ ಎಂಜಿನಿಯರಿಂಗ್ ಓದಿದ ನಮ್ಮ ಯುವಕರಿಗೆ ಅರ್ಜಿ ಹಾಕುವ ಅವಕಾಶವೂ ಸಿಗುತ್ತಿಲ್ಲ.
ಕರ್ನಾಟಕದಲ್ಲಿ ಕುಶಲ ಮಾನವ ಸಂಪನ್ಮೂಲದ ಕೊರತೆ ಇಲ್ಲ. ನಮ್ಮ ಐಟಿಐ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಪ್ರತಿ ವರ್ಷ ಲಕ್ಷಾಂತರ ಯುವಕರಿಗೆ ತರಬೇತಿ ನೀಡುತ್ತವೆ. ಪ್ರತಿ ಉದ್ಯೋಗ ಮೇಳಕ್ಕೆ ಸಾವಿರಾರು ಯುವಕರು ಕೆಲಸದ ನಿರೀಕ್ಷೆಯಲ್ಲಿ ಬರುತ್ತಾರೆ.
ನಾವು ಎಲ್ಲಾ ಉದ್ಯೋಗಗಳನ್ನು ಕೇಳುತ್ತಿಲ್ಲ. ಮಸೂದೆಯ ಪ್ರಕಾರ ಶೇ.50 ವ್ಯವಸ್ಥಾಪಕ ಹುದ್ದೆಗಳು ಮತ್ತು ಶೇ.30 ಇತರ ಹುದ್ದೆಗಳು ಎಲ್ಲರಿಗೂ ಮುಕ್ತ. ಸ್ಥಳೀಯ ಅಭ್ಯರ್ಥಿಗಳು ಸಿಗದಿದ್ದರೆ, ಕಂಪನಿಗಳು ಸರ್ಕಾರದೊಂದಿಗೆ ಸೇರಿ ಮೂರು ವರ್ಷಗಳಲ್ಲಿ ತರಬೇತಿ ನೀಡಬೇಕು. ದೇಶದ ಎಲ್ಲ ಭಾಗದ ಪ್ರತಿಭೆಯನ್ನು ನಾವು ಗೌರವಿಸುತ್ತೇವೆ. ನಮ್ಮದೇ ರಾಜ್ಯದಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಹಂತಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಮೊದಲ ಅವಕಾಶ ಸಿಗಲಿ ಎಂಬುದಷ್ಟೇ ನಮ್ಮ ಬೇಡಿಕೆ.
2024ರ ಜುಲೈನಲ್ಲಿ ಸಂಪುಟ ಒಪ್ಪಿಗೆ ನೀಡಿದ ಈ ಮಸೂದೆ ಅಂದಿನಿಂದ ತಡೆಹಿಡಿಯಲ್ಪಟ್ಟಿದೆ. ಆದ್ದರಿಂದ ನಮ್ಮ ಮನವಿ:
1. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ (ಡಿಸೆಂಬರ್ 2–11, 2026) ಈ ಮಸೂದೆಯನ್ನು ಮಂಡಿಸಿ ಅಂಗೀಕರಿಸಬೇಕು.
2. ಅಲ್ಲಿಯವರೆಗೆ, ಕರ್ನಾಟಕದ ಉದ್ಯೋಗಗಳಿಗೆ ನೇಮಕಾತಿ ಮಾಡುವ ಪ್ರತಿಯೊಂದು ಕಂಪನಿಯೂ ಜಿಲ್ಲಾ ಕೇಂದ್ರಗಳೂ ಸೇರಿದಂತೆ ರಾಜ್ಯದೊಳಗೇ ನೇಮಕಾತಿ ಮೇಳ ನಡೆಸಲು ಮತ್ತು ಖಾಲಿ ಹುದ್ದೆಗಳನ್ನು ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಿಗೆ ತಿಳಿಸಲು ಸೂಚಿಸಬೇಕು.
ಕರ್ನಾಟಕದ ಉದ್ಯೋಗ ಮೊದಲು ಕರ್ನಾಟಕದ ಯುವಕರಿಗೆ ಸಿಗಲಿ.
ಇಂತಿ,

548

The Decision Makers
Petition Updates
Share this petition
Petition created on 25 November 2026