🚨 ಕರ್ನಾಟಕದ 45,000 ಕೆರೆಗಳನ್ನು ಉಳಿಸಿ🚨 Save the 45000 lakes in Karnataka 🚨

The Issue
ಮಾನ್ಯ ರಾಜ್ಯಪಾಲರೇ, Hon Governor,
ಕರ್ನಾಟಕದ 45,000 ಕೆರೆಗಳನ್ನು ಉಳಿಸಿ - KTCDA ತಿದ್ದುಪಡಿ ಮಸೂದೆ 2025 ಅನ್ನು ತಿರಸ್ಕರಿಸಿ
Save the 45,000 Lakes in Karnataka - Reject the KTCDA Amendment Bill 2025
ಅಂತರ್ಜಲವನ್ನು ಮರುಪೂರಣ ಮಾಡುವ, ಪ್ರವಾಹದಿಂದ ನಮ್ಮನ್ನು ರಕ್ಷಿಸುವ, ಕೃಷಿಗೆ ನೀರುಣಿಸುವ ಹಾಗೂ ಜೀವವೈವಿಧ್ಯತೆಯನ್ನು ಕಾಪಿಟ್ಟುಕೊಳ್ಳುವ - ಕರ್ನಾಟಕದ 45,000 ಕೆರೆಗಳು ನಮ್ಮ ರಾಜ್ಯದ ಜೀವನಾಡಿಗಳಾಗಿವೆ. ಆದರೆ ಇತ್ತೀಚೆಗೆ ಅಂಗೀಕರಿಸಲಾದ KTCDA ತಿದ್ದುಪಡಿ ಮಸೂದೆ- 2025 ಬಫರ್ ವಲಯಗಳನ್ನು ಕಡಿತಗೊಳಿಸುವ ಮೂಲಕ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಅವುಗಳನ್ನು ನಾಶಮಾಡುವ ಅಪಾಯವಿದೆ.
Karnataka’s 45,000 lakes are the lifelines of our state — recharging groundwater, protecting us from floods, supporting agriculture, and sustaining biodiversity. But the recently passed KTCDA Amendment Bill 2025 threatens to destroy them by reducing buffer zones and allowing construction in ecologically sensitive areas.
ಇನ್ನೂ ಆಶ್ಚರ್ಯಕರ ವಿಷಯಯವೆಂದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಅದರ ವಿರುದ್ಧ ಸ್ವಯಂಪ್ರೇರಿತ ವಿಚಾರಣೆಯನ್ನು ಪ್ರಾರಂಭಿಸಿದರೂ ಮಸೂದೆಯನ್ನು ಅಂಗೀಕರಿಸಲಾಗಿದೆ. ನಾಗರಿಕರು ಮತ್ತು ತಜ್ಞರನ್ನು ನಿರ್ಲಕ್ಷಿಸಲಾಗಿದೆ. ನಮ್ಮ ಪರಂಪರೆಯನ್ನು ರಕ್ಷಿಸುವ ಬದಲು, ಸರ್ಕಾರವು ರಿಯಲ್ ಎಸ್ಟೇಟ್ ಲಾಬಿಗೆ ಪಕ್ಕಾಗಿ ಪಕ್ಷಪಾತ ಸಲ್ಲಿಸುತ್ತಿರುವಂತೆ ತೋರುತ್ತಿದೆ.
Shockingly, the Bill was pushed through despite the National Green Tribunal (NGT) initiating suo motu proceedings against it. Citizens and experts were ignored. Instead of protecting our heritage, the government appears to be serving the real estate lobby.
ಈ ಕಾನೂನು ಜಾರಿಗೆ ಬಂದರೆ, ಮತ್ತೆ ಪುನರುಜ್ಜೀವನಗೊಳಿಸಲಾಗದ ರೀತಿ ಪರಿಸರ ಹಾನಿ, ತೀವ್ರ ನೀರಿನ ಕೊರತೆ, ಆಹಾರ ಅಭದ್ರತೆ ಹಾಗೂ ನಮ್ಮ ನಗರಗಳಲ್ಲಿ ಉಲ್ಬಣಗೊಳ್ಳುವ ಪ್ರವಾಹಕ್ಕೆ ಕಾರಣವಾಗುತ್ತದೆ.
If implemented, this law will trigger irreversible environmental damage, water scarcity, food insecurity, and worsening floods in our cities.
ಈ ಅಜಾಗರೂಕ ಮಸೂದೆಯನ್ನು ತಿರಸ್ಕರಿಸಲು ಮತ್ತು ನಮ್ಮ ಕರೆಗಳನ್ನು ಹಾಗೂ ನಮ್ಮ ಭವಿಷ್ಯವನ್ನು ಉಳಿಸಲು ನಾವು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಗೆ ಈ ಕೆಳಕಂಡಂತೆ ಮನವಿ ಮಾಡುತ್ತೇವೆ.
We appeal to the Hon. Governor of Karnataka to reject this reckless Bill and save our lakes — and our future.
----------------------------------------------------------------------
ಗೌರವಾನ್ವಿತ ಕರ್ನಾಟಕದ ರಾಜ್ಯಪಾಲರೇ,
Hon. Governor of Karnataka,
ದಯವಿಟ್ಟು ಕರ್ನಾಟಕದ 45,000 ಕೆರೆಗಳನ್ನು ಉಳಿಸಿ - KTCDA ತಿದ್ದುಪಡಿ ಮಸೂದೆ 2025 ಅನ್ನು ತಿರಸ್ಕರಿಸಿ
Please Save the 45,000 Lakes of Karnataka – Reject the KTCDA Amendment Bill 2025
ಕರ್ನಾಟಕವು ಊಹಿಸಲಾಗದ ಪ್ರಮಾಣದಲ್ಲಿ ಪರಿಸರ ಮತ್ತು ನೀರಿನ ಬಿಕ್ಕಟ್ಟಿನ ಅಂಚಿನಲ್ಲಿದೆ. ಇತ್ತೀಚೆಗೆ ಅಂಗೀಕರಿಸಲ್ಪಟ್ಟ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ತಿದ್ದುಪಡಿ ಮಸೂದೆ 2025 ನಮ್ಮ ರಾಜ್ಯದ ಜೀವನಾಡಿಗಳನ್ನು ನಾಶಮಾಡುವ ಬೆದರಿಕೆ ಹಾಕುತ್ತದೆ - ಶತಮಾನಗಳಿಂದ ನಿರ್ಮಿಸಲಾದ 45,000 ಅಂತರ್‌ಸಂಪರ್ಕಿತ ಕೆರೆಗಳು ಹಾನಿಯ ಅಂಚಿನಲ್ಲಿವೆ.
Karnataka stands on the brink of an environmental and water crisis of unimaginable proportions. The recently passed Karnataka Tank Conservation and Development Authority (KTCDA) Amendment Bill 2025 threatens to destroy the very lifelines of our state — 45,000 interconnected lakes and tanks built over centuries.
ಈ ಮಸೂದೆಗೆ ಒಪ್ಪಿಗೆ ಸಿಕ್ಕರೆ:
- ಕೆರೆಗಳ ಅವನತಿಯಾಗುತ್ತದೆ ಹಾಗೂ ಅವುಗಳ ಬಫರ್ ವಲಯಗಳು ನಾಶವಾಗುತ್ತವೆ.
- ಅಂತರ್ಜಲ ಕಲುಷಿತಗೊಳ್ಳುತ್ತದೆ, ನೀರಿನ ಲಭ್ಯತೆ ಕುಸಿಯುತ್ತದೆ.
- ಕೃಷಿ ಮತ್ತಷ್ಟು ಕುಸಿಯುತ್ತದೆ, ಆಹಾರ ಅಭದ್ರತೆಗೆ ಕಾರಣವಾಗುತ್ತದೆ.
- ಕೋಟ್ಯಂತರ ಮರಗಳು ನಷ್ಟವಾಗುತ್ತವೆ ಮತ್ತು ಲಕ್ಷಾಂತರ ಎಕರೆ ಕಾಂಕ್ರೀಟ್ ಆಗುತ್ತವೆ.
- ಉಷ್ಣತೆ, ರೋಗ ಮತ್ತು ಪರಿಸರ ನಾಶವು ರಾಜ್ಯವನ್ನು ಆವರಿಸುತ್ತದೆ.
ಇದು ಕೇವಲ ಕೆರೆಗಳ ಬಗ್ಗೆ ಅಲ್ಲ - ಇದು ನೀರಿನ ಭದ್ರತೆ, ಆಹಾರ ಭದ್ರತೆ ಮತ್ತು ಕರ್ನಾಟಕದ ಉಳಿವಿನ ಬಗ್ಗೆ.
If this bill receives assent:
- Lakes will be degraded and their buffer zones destroyed.
- Groundwater will be polluted, water availability will plummet.
- Agriculture will collapse further, causing food insecurity.
- Crores of trees will be lost and lakhs of acres concretised.
- Heat, disease, and environmental destruction will engulf the state.
This is not just about lakes — it is about water security, food security, and the survival of Karnataka itself.
ಮಸೂದೆಯನ್ನು ಏಕೆ ತಿರಸ್ಕರಿಸಬೇಕು:
- ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಈಗಾಗಲೇ (ಜುಲೈ 2025 ರಿಂದ) ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಅಪಾಯಗಳನ್ನು ಗುರುತಿಸಿ ಸರ್ಕಾರಕ್ಕೆ ನೋಟಿಸ್ ನೀಡಿದೆ. ಆದರೂ, ಮಸೂದೆಯನ್ನು ಸರಿಯಾದ ಪ್ರಕ್ರಿಯೆಯ ವಿರುದ್ಧ ಶಾಸಕಾಂಗದ ಮೂಲಕ ತಳ್ಳಲಾಯಿತು.
- ಮಸೂದೆ ಸಂವಿಧಾನ ಮತ್ತು ಕೇಂದ್ರ ಪರಿಸರ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಅನುಮತಿಸಿದರೆ, ಅದು ಅಂತ್ಯವಿಲ್ಲದ ಮೊಕದ್ದಮೆಗಳನ್ನು ಹುಟ್ಟುಹಾಕುತ್ತದೆ ಮತ್ತು ಆಡಳಿತ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ.
- ವಿಧಾನ ಸಭೆಯಲ್ಲಿಯೂ ಸಹ, "NGT ಗೆ ಕರ್ನಾಟಕದ ಮೇಲೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲ" ಎಂಬ ಆಘಾತಕಾರಿ ಹೇಳಿಕೆಗಳನ್ನು ನೀಡಲಾಯಿತು - ಇದು ಕಾನೂನುಬದ್ಧವಾಗಿ ಸುಳ್ಳು ಮತ್ತು ಕಾನೂನಿನ ನಿಯಮಕ್ಕೆ ಅವಮಾನವಾಗಿದೆ.
- ಇಡೀ ಪ್ರಕ್ರಿಯೆಯು ಪಾರದರ್ಶಕತೆಯನ್ನು ಹೊಂದಿಲ್ಲ, ಸಾರ್ವಜನಿಕ ಸಮಾಲೋಚನೆ ನಡೆದಿಲ್ಲ ಅಥವಾ ತಜ್ಞರ ಪರಾಮರ್ಶೆ ಅಥವಾ ವಿಶ್ಲೇಷಣೆಯನ್ನೂ ಹೊಂದಿಲ್ಲ. ನಾಗರಿಕರು, ತಜ್ಞರು ಮತ್ತು ನ್ಯಾಯಾಂಗವನ್ನು ನಿರ್ಲಕ್ಷಿಸಲಾಗಿದೆ.
Why the Bill Must Be Rejected
- The National Green Tribunal (NGT) has already taken suo motu cognizance of the matter (since July 2025), recognizing the risks and issuing notice to the Government. Yet, the Bill was pushed through the legislature in defiance of due process.
- The Bill violates the Constitution and central environmental laws. If allowed, it will only trigger endless litigation and deepen the governance crisis.
- Even in the Assembly, shocking statements were made — including that “NGT has no jurisdiction over Karnataka” — which is legally false and an affront to the rule of law.
- The entire process has lacked transparency, public consultation, or expert review. Citizens, experts, and the judiciary were ignored.
ಕರ್ನಾಟಕದ ನಾಗರಿಕರು ವಿವರವಾದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ದಯವಿಟ್ಟು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮನವಿ ಪತ್ರದ ಪಠ್ಯವನ್ನು ನೋಡಿ: https://drive.google.com/file/d/1U7NcQqmvbRmPXjF9JYwFo3UxLZn25Kx6/view?usp=drive_link
ಫೋಲ್ಡರ್‌ನಲ್ಲಿ: tinyurl.com/BTHPR250825
Concerned citizens of Karnataka have submitted a detailed memorandum. Please see the text of the memorandum by clicking on this link: https://drive.google.com/file/d/1U7NcQqmvbRmPXjF9JYwFo3UxLZn25Kx6/view?usp=drive_link
In the folder: tinyurl.com/BTHPR250825
ಯಾರಿಗೆ ಲಾಭ?
ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಗಳ ಲಾಬಿಗಳು ಮಾತ್ರ ಸ್ಪಷ್ಟ ಫಲಾನುಭವಿಗಳಾಗುತ್ತಾರೆ. ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಹಿಂದಿನ ಸಂರಕ್ಷಿತ ಪ್ರದೇಶಗಳನ್ನು ಹಸ್ತಾಂತರಿಸುವ ಒಂದು ಲಜ್ಜೆಗೆಟ್ಟ ಪ್ರಯತ್ನ ಇದು! ನಾಗರಿಕರು, ರೈತರು ಮತ್ತು ಭವಿಷ್ಯದ ಪೀಳಿಗೆಯನ್ನು ಪಣವಾಗಿಸಿ ನಮ್ಮ ಕೆರೆಗಳು ಮತ್ತು ಸಾರ್ವಜನಿಕರನ್ನು ಸ್ಥಾಪಿತ ಹಿತಾಸಕ್ತಿಗಳಿಗೆ ಹಸ್ತಾಂತರಿಸಲು ಈ ಮಸೂದೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತೋರುತ್ತದೆ.
Who Benefits?
The only clear beneficiaries are the real estate and builder lobbies. It is a brazen attempt to hand over previous protected areas for road and building construction! This Bill appears designed to hand over our lakes and commons to vested interests at the cost of citizens, farmers, and future generations.
ನಮ್ಮ ಮನವಿ:
ಕರ್ನಾಟಕದ ನಾಗರಿಕರಾದ ನಾವು, ವಿನಮ್ರವಾಗಿ ಮತ್ತು ತುರ್ತಾಗಿ ನಿಮ್ಮನ್ನು ವಿನಂತಿಸುತ್ತೇವೆ, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರೇ,
- ಸಾರ್ವಜನಿಕ ಹಿತಾಸಕ್ತಿಯ ವಿಶಾಲ ದೃಷ್ಟಿಯಿಂದ KTCDA ತಿದ್ದುಪಡಿ ಮಸೂದೆ 2025 ಅನ್ನು ತಿರಸ್ಕರಿಸಿ.
- ಪರ್ಯಾಯವಾಗಿ, ಒಳಗೊಂಡಿರುವ ಗಂಭೀರ ಉಲ್ಲಂಘನೆಗಳನ್ನು ಗಮನದಲ್ಲಿಟ್ಟುಕೊಂಡು, ವ್ಯಾಪಕವಾದ ಸಾಂವಿಧಾನಿಕ ಪರಿಶೀಲನೆಗಾಗಿ ಮಸೂದೆಯನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಉಲ್ಲೇಖಿಸಿ.
- ಸಂವಿಧಾನ, ಕಾನೂನಿನ ನಿಯಮ ಮತ್ತು ಕರ್ನಾಟಕದ ಜನರ ನೀರು, ಆಹಾರ ಮತ್ತು ಆರೋಗ್ಯಕರ ಪರಿಸರದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಿರಿ.
- ಇದು ಕೇವಲ ಆಡಳಿತದ ಬಗ್ಗೆ ಅಲ್ಲ - ಇದು ಅಳಿವುಉಳಿವಿನ ಬಗ್ಗೆ. ದಯವಿಟ್ಟು ಕರ್ನಾಟಕವನ್ನು ಕೊನೆಯ ಪುನಃರುಜ್ಜೀವನಗೊಳಿಸಲಾಗದ ವಿಪತ್ತಿನಿಂದ ರಕ್ಷಿಸಲು ನಿಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿ.
ನಮ್ಮ ಕೆರೆಗಳನ್ನು ಉಳಿಸಿ. ನಮ್ಮ ಭವಿಷ್ಯವನ್ನು ಉಳಿಸಿ
Our Appeal
We, the citizens of Karnataka, humbly and urgently request you, Hon. Governor Shri Thawar Chand Gehlot, to:
- Reject the KTCDA Amendment Bill 2025 in the larger public interest.
- Alternatively, refer the bill to the Hon. President of India for wider constitutional scrutiny, given the grave violations involved.
- Uphold the Constitution, the rule of law, and the fundamental rights of the people of Karnataka to water, food, and a healthy environment.
- This is not just about governance — it is about survival. Please use your constitutional authority to save Karnataka from an irreversible disaster.
Save our lakes. Save our future.
-----------------------------------------------------------
Twitter Thread: https://x.com/BLRTownHall/status/1960303677463503043

2,768

The Decision Makers
Supporter Voices
Share this petition
Petition created on 2 September 2025