ಬೆಳಗಾವಿ ಅಧಿವೇಶನದಲ್ಲೇ ಕನ್ನಡಿಗರ ಉದ್ಯೋಗ ಮಸೂದೆ ಮಂಡಿಸಿ: ಕರವೇ ಆಗ್ರಹ; ಡಿ.12ರಂದು ಬೃಹತ್ ರ‍್ಯಾಲಿ ಎಚ್ಚರಿಕೆ


https://www.instagram.com/reel/DgNQf1WzvG0/?jplx=MTR4ajBzOGhkbjBmcw==
https://x.com/RTTopannavar23/status/2125949561458110866?a=Jp937SJDIVDuWwi4EX0&s=19
ಬೆಳಗಾವಿ, ನ.26: ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
2024ರ ಜುಲೈನಲ್ಲಿ ಸಂಪುಟ ಒಪ್ಪಿಗೆ ನೀಡಿದ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಕನ್ನಡಿಗ ಯುವಕರು ತಮ್ಮದೇ ರಾಜ್ಯದಲ್ಲಿ ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಡಿಸೆಂಬರ್ 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಬೇಡಿಕೆಗೆ ಬೆಂಬಲವಾಗಿ ರಾಜ್ಯದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು c.org/4SZBg8s4FH ಆನ್‌ಲೈನ್ ಮನವಿಗೆ ಸಹಿ ಹಾಕಬೇಕು ಎಂದು ಗುಡಗನಟ್ಟಿ ಮನವಿ ಮಾಡಿದ್ದಾರೆ.