Petition Closed
Petitioning Janashree News

Telecast Kannada version of "Malgudi Days"

There are more than 60 million Kannada speaking people across the world. Janashree News has announced that it is going to telecast "Malgudi Days" with Kannada subtitles. We would urge Janashree News channel to telecast the Kannada version ( dubbed version ) of Malgudi days which very much portrays the culture of Karnataka. If the telecast is only with sub-titles and not dubbed into Kannada, large number of Kannadigas who are not comfortable reading sub-titles will be denied the programme. Shankar Nag ( Legendary Kannada Actor/Director ),  the director of this serial and the star cast comprises mostly of Kannada artists.

Letter to
Janashree News
ಶ್ರೀ ಅನಂತ್ ಚಿನಿವಾರ್
ಮುಖ್ಯಸ್ಥರು,
ಜನಶ್ರೀ ಸುದ್ದಿ ವಾಹಿನಿ
ಬೆಂಗಳೂರು

ಮಾನ್ಯರೇ,

ವಿಷಯ : ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರದಲ್ಲಿ ಮಾಡಲು ಮನವಿ.

ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿ ವಾಹಿನಿ ಜನಶ್ರೀಯಲ್ಲಿ ನಟ ಶಂಕರ್ ನಾಗ್ ಅವರ ನಿರ್ದೇಶನದ "ಮಾಲ್ಗುಡಿ ಡೇಸ್" ಧಾರಾವಾಹಿ ಜೂನ್ 16 2012 ರಿಂದ ಪ್ರಸಾರವಾಗುವ ಸುದ್ದಿ ಕನ್ನಡಿಗರೆಲ್ಲರಿಗೂ ನಲಿವು ತಂದಿದೆ. ಹಿಂದಿಯಲ್ಲಿರುವ ಈ ಧಾರಾವಾಹಿಯನ್ನು ಕನ್ನಡ ಸಬ್ ಟೈಟಲ್ ಜೊತೆ ಜನಶ್ರೀ ವಾಹಿನಿ ಪ್ರಸಾರ ಮಾಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕನ್ನಡದ ನಟರೇ ಅಭಿನಯಿಸಿರುವ, ಕನ್ನಡ ಸಂಸ್ಕೃತಿಯನ್ನೇ ಬಿಂಬಿಸುವ ಈ ಧಾರಾವಾಹಿಯನ್ನು ಕೇವಲ ಕನ್ನಡ ಸಬ್ ಟೈಟಲ್ ಜೊತೆ ಪ್ರಸಾರ ಮಾಡದೇ ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಬೇಕೆಂದು ಕೋರುತ್ತ ಜಾಗೃತ ಕನ್ನಡ ಗ್ರಾಹಕರಾದ ನಾವು ಈ "ಮಿಂಬಲೆ ಮನವಿ" (ONLINE PETITION)ಯನ್ನು ಸಲ್ಲಿಸುತ್ತಿದ್ದೇವೆ.

ಕನ್ನಡದ ಕಲಾವಿದರು ಅಭಿನಯಿಸಿರುವ, ಕನ್ನಡಿಗರೇ ನಿರ್ದೇಶಿಸಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲ್ಪಟ್ಟ, ಕನ್ನಡ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಿದ ಅಪರೂಪದ ಧಾರಾವಾಹಿ "ಮಾಲ್ಗುಡಿ ಡೇಸ್" ಆಗಿದ್ದು, ಅದನ್ನು ಕನ್ನಡ ವಾಹಿನಿಯೊಂದರಲ್ಲಿ ಹಿಂದಿಯಲ್ಲಿ ಪ್ರಸಾರ ಮಾಡುವುದು ಕನ್ನಡದ ನೋಡುಗರನ್ನು ಪರಿಣಾಮಕಾರಿಯಾಗಿ ತಲುಪುವ ಮಾರ್ಗವಾಗಿಲ್ಲ ಆದ್ದರಿಂದ ಈ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಬೇಕೆಂದು ಮನವಿ ಮಾಡುತ್ತೇವೆ.

ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯಲ್ಲಿ ಮನವಿ ಮಾಡುತ್ತೇವೆ.

ನಮ್ಮ ನೆಚ್ಚಿನ ಜನಶ್ರೀ ವಾಹಿನಿ ಕನ್ನಡದ ನೋಡುಗರ ಈ ಬೇಡಿಕೆಗೆ ಮನ್ನಣೆ ನೀಡಿ ಕನ್ನಡದಲ್ಲೇ ಈ ಧಾರಾವಾಹಿಯನ್ನು ಪ್ರಸಾರ ಮಾಡುವ ಮೂಲಕ ಒಂದು ಅಪರೂಪದ ಕಾರ್ಯಕ್ರಮವನ್ನು ಹೆಚ್ಚಿನ ಕನ್ನಡಿಗರಿಗೆ ತಲುಪಿಸಲು ಮುಂದಾಗಲಿ ಎಂದು ಈ ಸಂದರ್ಭದಲ್ಲಿ ಆಗ್ರಹಪೂರ್ವಕ ಮನವಿ ಮಾಡುತ್ತೇವೆ.