AAP demands the Right to Banking Services in Kannada

0 have signed. Let’s get to 1,000!


AAP demands the Right to Banking Services in Kannada

Karnataka has a long history of banking, and is among the earliest places in the country where the industry originated. Several famous banks have begun their journey from here, viz. State Bank of Mysore, Canara Bank, Syndicate Bank and Vijaya Bank.

It is strange, therefore, that despite this history, it has not been easy for Kannadigas to deal with banks in our own state. All the supporting documents needed for essential banking services such as challans, cheque leaves, receipts etc. are not printed in Kannada, but only available in English and Hindi. The neglect of Kannada is so rampant that even regional and cooperative banks print all their stationery in English. 

To compound this, much of the staff in nationalised bank branches in the state is from outside Karnataka, and is not able to assist those who struggle with the unfamiliar forms. And although as per RBI guidelines non-Kannada speaking employees need to learn Kannada language in a fixed time frame, this is not happening. 

At Aam Aadmi Party, we wish to raise a simple question - if the required documents can be printed in Hindi, why are they not printed in Kannada as well?

The solution is simple, fair and practical :

To enable access to banking services in the state without assistance from others, citizens of the state must be provided all supportive documents and forms for banking compulsorily in Kannada as well, along with any other languages that the banks may choose.

Likewise, ATMs should also be usable in Kannada throughout the state. 

Banking jobs in rural Karnataka should be reserved for those who can speak Kannada.

Challans and Cheque leaves are already printed in Kannada in SBI bank, and this should be followed by all other Banks.

For a very long time, Kannadigas have put up with the inconveniences caused by insensitive and ineffective processes followed in the banking sector. What we now find is that not only is this history being corrected, instead we are encountering ever-growing insistence that we had better learn Hindi or English to access the very services that we pay for. It is time for every proud Kannadiga to join hands and make all institutions, beginning with banks, offer all communication in Kannada as well wherever it is sought by consumers in the state.

Aam Aadmi Party requests that all members of the public sign this petition, and spread the demand for Kannada to be included as a medium of transaction in all banks in our state. 

++++++++++++++++++++++++++

ಆಮ್ ಆದ್ಮಿ ಪಕ್ಷದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಬಳಕೆಯ ಹಕ್ಕಿನ ಪ್ರತಿಪಾದನೆ

ಕರ್ನಾಟಕ ನಮ್ಮ ದೇಶದ ಬ್ಯಾಂಕಿಂಗ್ ಕ್ಷೇತ್ರದ ತವರೂರು. ದೇಶದ ಹಲವು ಪ್ರಖ್ಯಾತ ಬ್ಯಾಂಕುಗಳು ಇಲ್ಲಿ ಜನ್ಮ ತಾಳಿವೆ. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್.

ಬ್ಯಾಂಕಿಂಗ್‌ನ ತವರೂರಾದ ಕರ್ನಾಟಕದಲ್ಲಿ ಬ್ಯಾಂಕಿಂಗ್  ಸಾಮಾನ್ಯ ಕನ್ನಡಿಗರಿಗೆ ವ್ಯವಹರಿಸಲು ಸುಲಭವಾಗೇನು ಇಲ್ಲ , ಕಾರಣ ಪರರಾಜ್ಯಗಳ ಸಿಬ್ಬಂದಿಗಳಿಂದ ಕೂಡಿದ ರಾಷ್ಟ್ರೀಕೃತ ಬ್ಯಾಂಕ್‌ಗಳು, ವ್ಯವಹಾರಕ್ಕೆ ಅಗತ್ಯವಾದ ಅರ್ಜಿ ನಮೂನೆಗಳು, ಚಲನ್‌ಗಳು ಮತ್ತು ಚೆಕ್ ಹಾಗೂ ರಸೀದಿಗಳು ಕನ್ನಡದಲ್ಲಿರದೇ ಇಂಗ್ಲೀಷ್ ಅಥವಾ ಹಿಂದಿಯಲ್ಲಿದೆ. ಬ್ಯಾಂಕಿಂಗ್‌ನಲ್ಲಿ  ಕನ್ನಡದ ಕಡೆಗಣನೆ ಎಲ್ಲಿಯವರೆಗಿದೆ ಎಂದರೆ ರಾಜ್ಯದ  ಗ್ರಾಮೀಣ ವಿಕಾಸ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕುಗಳು ಸಹ ಇಂಗ್ಲೀಷ್‌ನಲ್ಲೇ ಚಲನ್,ಚೆಕ್ ಹಾಗೂ ಅರ್ಜಿಗಳನ್ನು ಮುದ್ರಿಸಿರುತ್ತಾರೆ.

ಈ ನಿಟ್ಟಿನಲ್ಲಿ ಆಮ್‌ ಆದ್ಮಿ ಪಕ್ಷವು ಸರಳವಾದ ಪ್ರಶ್ನೆಯೊಂದನ್ನು ಮುಂದಿಡುತ್ತಿದೆ "ಹಿಂದಿಯಲ್ಲಿ ಚಲನ್/ಅರ್ಜಿ/ರಸೀತಿಗಳನ್ನು ಮುದ್ರಿಸಬಹುದಾದರೆ ಕನ್ನಡದಲ್ಲೇಕಿಲ್ಲ?"
 
 ಅಲ್ಪಸ್ವಲ್ಪ ಓದಲು ಬರೆಯಲು ಕಲಿತಿರುವ ಗ್ರಾಮೀಣ ಭಾಗದ ವ್ಯಕ್ತಿಯೋರ್ವ ಬ್ಯಾಂಕ್‌ಗೆ ಹಣ ತುಂಬಲು ಹೋದರೆ ಇಂಗ್ಲೀಷ್‌ನಲ್ಲಿರುವ ಚಲನ್/ ಅರ್ಜಿಗಳನ್ನು ಅರ್ಥೈಸಿಕೊಳ್ಳಬೇಕು ಮತ್ತು ಕನ್ನಡ ಬಾರದ ಸಿಬ್ಬಂದಿಗಳೊಂದಿಗೆ ಮಾತನಾಡಲು ಪರಿತಪಿಸಬೇಕು.

ಇದಕ್ಕೆ ಸರಳವಾದ,ನ್ಯಾಯಯುತವಾದ ಮತ್ತು ವಾಸ್ತವಿಕ ಪರಿಹಾರಗಳಿವೆ

 ಇನ್ನೊಬ್ಬರ ನೆರವಿಲ್ಲದಂತೆ ಸರಳ ಹಾಗೂ ಸುಲಲಿತವಾಗಿ ಬ್ಯಾಂಕಿಂಗ್ ನಡೆಸಲು
*ಕನ್ನಡದಲ್ಲೇ ಕಡ್ಡಾಯವಾಗಿ ಚಲನ್ ಹಾಗೂ ಅರ್ಜಿಗಳನ್ನು ಮುದ್ರಿಸಬೇಕು

*ಎಟಿಎಂಗಳಲ್ಲಿಯೂ ಕನ್ನಡ ಭಾಷೆ ಬಳಸಬೇಕು.

*ಆರ್‌ಬಿಐನ ನಿಯಮ ಪಾಲಿಸಿ, ಸ್ಥಳೀಯ ಭಾಷೆಯನ್ನು ನಿಗದಿತ ಸಮಯದೊಳಗೆ ಬ್ಯಾಂಕಿಂಗ್  ಸಿಬ್ಬಂದಿಗಳಿಗೆ ಕಲಿಸಲೇಬೇಕು

*ಕರ್ನಾಟಕದ ಗ್ರಾಮೀಣ ಪ್ರದೇಶಗಳ ಬ್ಯಾಂಕಿಂಗ್ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಾಗಿಡಬೇಕು.

*ಈಗಾಗಲೇ ಎಸ್‌ಬಿಐ  ಬ್ಯಾಂಕಿನ ಎಟಿಎಂ/ ಚಲನ್‌ಗಳಲ್ಲಿ ಕನ್ನಡ ಬಳಕೆಯಲ್ಲಿದೆ,ಇದನ್ನು ಎಲ್ಲಾ ಬ್ಯಾಂಕುಗಳು ಅನುಸರಿಸಬೇಕು.

ಇದುವರೆಗೂ ಕನ್ನಡದ ಕಡೆಗಣನೆಯನ್ನು ಮತ್ತು ಬ್ಯಾಂಕುಗಳಲ್ಲಿನ ಸಂವೇದನಾರಹಿತವಾದ ಹಾಗೂ ಪರಿಣಾಮಕಾರಿಯಲ್ಲದ ಕ್ರಮಗಳು ಹಾಗೂ ಕನ್ನಡ ಭಾಷೆ ಬರದವರಿಂದ ಆದ ಪಡಿಪಾಟಲನ್ನು ಕೋಟ್ಯಾಂತರ  ಕನ್ನಡಿಗರು ಸಹಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಇಂಗ್ಲೀಷ್ ಅಥವಾ ಹಿಂದಿ ಕಲಿಯಲೇಬೇಕೆನ್ನುವ ಒತ್ತಡವನ್ನೂ ಎದುರಿಸುತ್ತಿದ್ದಾರೆ.

 ಸ್ವಾಭಿಮಾನಿ ಕನ್ನಡಿಗರೇ ಎಚ್ಚೆತ್ತುಕೊಳ್ಳಿ! ನಿತ್ಯ ವ್ಯವಹಾರ ಮಾಡುವ ಬ್ಯಾಂಕ್‌ನಂತಹ ಜಾಗಗಳಲ್ಲಿಂದ ಶುರುವಾಗಿ, ಕನ್ನಡಕ್ಕೆ ಸಿಗಬೇಕಾದ ಮಾನ್ಯತೆ ಸಿಕ್ಕಿ, ಕನ್ನಡಿಗ ಗ್ರಾಹಕರಿಗೆ ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಲು ಇದು ಸರಿಯಾದ ಸಮಯ!

ದಯವಿಟ್ಟು ಈ ಪಿಟಿಶನ್‌ಗೆ ಸಹಿ ಮಾಡಿ ಮತ್ತು ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕುಗಳಲ್ಲಿ ಕನ್ನಡವನ್ನೂ ವ್ಯವಹಾರ ಭಾಷೆಯನ್ನಾಗಿಸಲು ಆರ್‌ಬಿಐ'ಯನ್ನು ಒತ್ತಾಯಿಸುವ ಈ ಜನಾಂದೋಲನದಲ್ಲಿ ಎಲ್ಲಾ ಕನ್ನಡಿಗರು ಭಾಗಿಯಾಗುವಂತೆ ಆಮ್‌ ಆದ್ಮಿ ಪಕ್ಷವು ವಿನಂತಿಸಿಕೊಳ್ಳುತ್ತದೆ.



Today: Prithvi Reddy, is counting on you

Prithvi Reddy, State Convenor, Aam Aadmi Party Karnataka needs your help with “AAP's demand for Banking services & forms in Kannada for local people”. Join Prithvi Reddy, and 739 supporters today.