ಬಾಲ್ಯ ವಿವಾಹಕ್ಕೆ ನನ್ನ ವಿರೋಧ - I Oppose Child Marriage.

ಬಾಲ್ಯ ವಿವಾಹಕ್ಕೆ ನನ್ನ ವಿರೋಧ - I Oppose Child Marriage.

Started
5 March 2022
Petition to
Signatures: 10Next Goal: 25
Support now

Why this petition matters

Started by Wcd Kodagu

‘ಭಾರತದ ಪ್ರಜೆಯಾದ ನಾನು ಬಾಲ್ಯವಿವಾಹದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗಿ ಅವರ ಹಕ್ಕುಗಳಾದ “ಬದುಕುವ ಹಕ್ಕು”, “ರಕ್ಷಣೆಯ ಹಕ್ಕು”, “ಅಭಿವೃದ್ಧಿ ಹೊಂದುವ ಹಕ್ಕು”, “ಭಾಗವಹಿಸುವ ಹಕ್ಕು” ಉಲ್ಲಂಘನೆಯಾಗುತ್ತದೆ ಎಂದು ತಿಳಿದಿರುವುದರಿಂದ ಬಾಲ್ಯವಿವಾಹ ಮುಕ್ತ ಸಮಾಜವನ್ನು ನಿರ್ಮಿಸುವುದಕ್ಕೆ ಬದ್ಧನಾಗಿದ್ದೇನೆ/ಳಾಗಿದ್ದೇನೆ.

 

    ‘ನನ್ನ ವೈಯಕ್ತಿಕ ನೆಲೆಯಿಂದ ಮತ್ತು ಸಮಾಜದಲ್ಲಿನ ನನ್ನ ಸ್ಥಾನಮಾನದ ನೆಲೆಯಿಂದ ನನ್ನ ಕುಟುಂಬದಲ್ಲಿ, ಬಂಧು ಬಳಗದಲ್ಲಿ, ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ನಾನು ಬಾಲ್ಯವಿವಾಹಗಳನ್ನು ವಿರೋಧಿಸುತ್ತೇನೆ.

 

    18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ನಡೆಸುವ ಸಾಧ್ಯತೆ ಕಂಡುಬಂದಲ್ಲಿ ಅದನ್ನು ತಡೆಯುತ್ತೇನೆ. ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ, ಪೊಲೀಸರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ಚೈಲ್ಡ್‍ಲೈನ್ 1098 ಗೆ ಮಾಹಿತಿ ನೀಡುತ್ತೇನೆ.

 

   ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ವಾಗಿರುವುದರಿಂದ ನಮ್ಮ ರಾಜ್ಯವನ್ನು “ಬಾಲ್ಯವಿವಾಹ ಮುಕ್ತ ರಾಜ್ಯ"ವನ್ನಾಗಿಸುವ ದಿಶೆಯಲ್ಲಿ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡು ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆಂದು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ

Support now
Signatures: 10Next Goal: 25
Support now