Conduct UPSC exams in all Indian languages listed in 8th schedule.

Victory

Conduct UPSC exams in all Indian languages listed in 8th schedule.

This petition made change with 1,099 supporters!

Priyank KS started this petition to The honorable prime minister of India, honorable members of parliament

(ಇಂಗ್ಲೀಶಿನ ಸಂದೇಶ ಮುಗಿದ ಮೇಲೆ ಕನ್ನಡದಲ್ಲಿ ಸಂದೇಶವಿದೆ)

To:
The Honorable Prime Minister of India, the honorable members of Parliament

Subject: Demand to conduct the UPSC exams in all Indian languages listed in 8th schedule of constitution. Thereby, treating all languages as equal and providing equal opportunities for all linguistic groups of India.

Union Public Service Commission (UPSC) has recently made amendments to its examination structure which creates major obstacles to non-Hindi speaking population of India. This move by the UPSC is against ethos of linguistic equality in India. Also, the new rules do not provide a level-playing field for students from rural background.

Some of the amendments are highlighted below:

1. If the candidate has completed his/her graduation with any of the following languages (other than Hindi or English) as the medium, only then he/she may opt for that particular language as medium to answer the optional papers.
“Assamese, Bengali, Bodo, Dogri, Gujarati, Kannada, Kashmiri, Konkani, Maithili, Malayalam,Manipuri, Marathi, Nepali, Oriya, Punjabi, Sanskrit, Santhali, Sindhi, Tamil, Telugu, and Urdu”.

Fact that native Hindi speakers are exempted from this rule speaks of the systematic discrimination being carried out against non-Hindi speakers of India.

2. A minimum number of 25 candidates should opt for a specific language medium for answering the question papers. In case there are less than 25 candidates opting for any approved language medium (other than English or Hindi), then those candidates will be required to write their examination either in Hindi or in English only.

3. Exams for the English paper were earlier only for qualification. But in the new pattern marks obtained in English paper will be considered for the final ranking.
This rule is a setback to the students especially from rural background. Even though they are knowledgeable, they might lose out in terms of proficiency in English.

4. The new exam pattern spares candidates from compulsorily qualifying in any of the 22 scheduled languages recognized by the constitution of this country.
In this respect, we urge the Indian Parliament to:

1. Make UPSC withdraw its recent amendments made with regard to medium of examination that discriminates on the basis of language.
2. Make sure that every citizen of Indian union gets unconditional right of opting for language of his choice in UPSC examinations.
3. Make sure that all the competitive examinations conducted by union government of India are made available in all languages listed in 8th schedule of constitution of India.
4. Make sure that English language paper is not considered for rankings, but is only mandatory for qualification, as the case was before.

----------------------------------------------------------------------------------------------------

ಮಾನ್ಯ ಪ್ರಧಾನಮಂತ್ರಿಗಳು ಮತ್ತು ಎಲ್ಲಾ ಸಂಸದರುಗಳಿಗೆ,

ವಿಷಯ: ಕೇಂದ್ರ ಲೋಕಸೇವಾ ಆಯೋಗವು ತಾನು ನಡೆಸುವ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವು ಎಲ್ಲಾ ಭಾಷೆಗಳಲ್ಲಿ ನಡೆಸಬೇಕು. ತನ್ಮೂಲಕ ಎಲ್ಲಾ ಭಾಷೆಗಳನ್ನು ಸಮಾನ ಮನೋಧರ್ಮದಿಂದ ನೋಡುತ್ತಾ ಎಲ್ಲಾ ಭಾಷಿಕ ಸಮುದಾಯಕ್ಕೂ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಮಾನ ಅವಕಾಶಗಳನ್ನು ಒದಗಿಸಿಕೊಡಬೇಕು.

ಕೇಂದ್ರ ಲೋಕಸೇವಾ ಆಯೋಗ(ಯು.ಪಿ.ಎಸ್.ಸಿ)ವು ಇತ್ತೀಚೆಗೆ ಯು.ಪಿ.ಎಸ್.ಸಿ ಪರೀಕ್ಷೆಯ ನಿಯಮಗಳಿಗೆ ಮಾಡಿರುವ ತಿದ್ದುಪಡಿಗಳು ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ತೊಡಕು ಉಂಟುಮಾಡುವಂತದ್ದಾಗಿದೆ. ಭಾಷಾ ಸಮಾನತೆಯನ್ನು ನಿರಾಕರಿಸುತ್ತಿರುವ ಹಾಗೂ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನೇ ಗಾಳಿಗೆ ತೂರುತ್ತಿರುವ ಈ ನಡೆಯು, ಗ್ರಾಮೀಣ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತು ಹಿಂದಿಯೇತರ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಿಕೊಡುತ್ತಿಲ್ಲ.

ಯು.ಪಿ.ಎಸ್.ಸಿ.ಯ ಬದಲಾಗಿರುವ ನಿಯಮಗಳಲ್ಲಿ ಮುಖ್ಯವಾದ ಕೆಲವು ಕೆಳಕಂಡಂತೆ ಇವೆ:
1. ತಮ್ಮ ಪದವಿಯನ್ನು ಕೆಳಗೆ ಪಟ್ಟಿ ಮಾಡಲಾಗಿರುವ ಯಾವುದಾದರೂ ಭಾಷೆಯ ಮಾಧ್ಯಮದಲ್ಲಿ ಓದಿದ್ದರೆ ಮಾತ್ರ ಅದೇ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಇಲ್ಲವಾದರೆ ಇಂಗ್ಲಿಶ್ ಅಥವಾ ಹಿಂದಿಯಲ್ಲಿಯೇ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಬೇಕು.
“ಅಸ್ಸಾಮಿ, ಬಂಗಾಳಿ, ಬೊಡೊ, ಡೋಗ್ರಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಂಥಾಳಿ, ಸಿಂಧಿ, ತಮಿಳು, ತೆಲುಗು, ಮತ್ತು ಉರ್ದು”.

ಹಿಂದಿ ಭಾಷಿಕರಿಗೆ ಈ ನಿಯಮ ಅನ್ವಯಿಸದೇ ಇರುವುದು, ಭಾಷೆಯ ಆಧಾರದ ಮೇಲೆ ನಡೆಸಲಾಗುತ್ತಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ.

2. ಇಂಗ್ಲೀಶ್ ಅಥವಾ ಹಿಂದಿಯೇತರ ಭಾಷೆಯಲ್ಲಿ ಪರೀಕ್ಷೆ ಬರೆಯಲು ಕನಿಷ್ಟವೆಂದರೆ ಇಪ್ಪತ್ತೈದು ಅಭ್ಯರ್ಥಿಗಳು ಸಿದ್ದವಿದ್ದರೆ ಮಾತ್ರ ಆ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಲ್ಲವಾದರೆ ಅಭ್ಯರ್ಥಿಗಳು ಅನಿವಾರ್ಯವಾಗಿ ಇಂಗ್ಲಿಶ್ ಅಥವಾ ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕು.
3. ಇಂಗ್ಲೀಶ್ ಜ್ಞಾನವನ್ನು ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯನ್ನು ರಾಂಕ್ ನಿರ್ಧರಿಸುವ ಮಟ್ಟಕ್ಕೆ ಕಡ್ಡಾಯ ಮಾಡಲಾಗಿದೆ. ಇದರಿಂದ, ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿಗಳು ಬೇರೆಲ್ಲಾ ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರೂ, ಇಂಗ್ಲೀಶಿನ ಮೇಲೆ ಸ್ವಲ್ಪಮಟ್ಟಿನ ಹಿಡಿತ ಹೊಂದಿರುವರು ಎಂಬ ಕಾರಣಕ್ಕೆ ಹಿನ್ನಡೆ ಅನುಭವಿಸುತ್ತಾರೆ.

4. ಭಾರತೀಯ ಭಾಷೆಗಳ ಜ್ಞಾನ ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯನ್ನು ತೆಗೆದು ಹಾಕಲಾಗಿದೆ.

ಈ ನಿಟ್ಟಿನಲ್ಲಿ ನಮ್ಮ ಹಕ್ಕೊತ್ತಾಯಗಳು ಹೀಗಿವೆ:
1. ಯು.ಪಿ.ಎಸ್.ಸಿಯು ಭಾಷಾ ಮಾಧ್ಯಮದ ವಿಷಯದಲ್ಲಿ ಮಾಡಿರುವ ನಿಯಮದ ಬದಲಾವಣೆಗಳನ್ನು ತತ್ಕ್ಷಣದಿಂದ ಕೈಬಿಡಬೇಕು.
2. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ತನ್ನ ಆಯ್ಕೆಯ ಭಾಷೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯನ್ನು ಎದುರಿಸುವ ಹಕ್ಕುಗಳು ಸಿಗಬೇಕು.
3. ಒಕ್ಕೂಟ ಸರ್ಕಾರದದಿಂದ ನೇಮಕಾತಿಗಾಗಿ ಅಥವಾ ಪ್ರವೇಶಕ್ಕಾಗಿ ನಡೆಸಲ್ಪಡುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಲ್ಲಿ ನಡೆಸಬೇಕು.
4. ಇಂಗ್ಲಿಶ್ ಭಾಷೆಯಲ್ಲಿ ಬಂದ ಅಂಕಗಳನ್ನು ರಾಂಕಿಂಗ್ಗೆ ಪರಿಗಣಿಸಬಾರದು, ಈ ಮೊದಲಿದ್ದಂತೆಯೇ ಕೇವಲ ಅರ್ಹತೆಗಾಗಿ ಎಂದಷ್ಟೇ ಪರಿಗಣಿಸಿದರೆ ಸಾಕು.

Victory

This petition made change with 1,099 supporters!