#Panchamasali_2A: Inclusion LingayathPanchamasali into 2A in Karnataka and OBC in central.

#Panchamasali_2A: Inclusion LingayathPanchamasali into 2A in Karnataka and OBC in central.

0 have signed. Let’s get to 1,500!
At 1,500 signatures, this petition is more likely to get picked up by local news!
Deepak Junjarwad started this petition to Sri. Narendra Modiji, Hon'ble Prime Minister, Government of India, New Delhi. and

Sub:- Reg. inclusion of Lingayath Panchamasaali Caste in Category 2A of the backward classes in Karnataka.

ವಿಷಯ : ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2 ಎ ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರ ಒಬಿಸಿಗೆ ಮೀಸಲಾತಿಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ..

ಗೌರವಾನ್ವಿತರೇ ,
ಕರ್ನಾಟಕ ರಾಜ್ಯದಲ್ಲಿ ಕೃಷಿಯನ್ನು ಕುಲ ಕಸುಬನ್ನಾಗಿಸಿಕೊಂಡಿರುವ ಹಾಗೂ ಕೃಷಿ ಕೂಲಿಕಾರರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ , ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ.
ಈ ಬಗ್ಗೆ 26 ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಸಹ ಯಾವುದೇ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲ.
ಆದ್ದರಿಂದ ನಮ್ಮ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಸಮಾಜದವತಿಯಿಂದ 2012 ರಿಂದ 4 ಹಂತದ ವಿವಿಧ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ.
2021 ಜನವರಿ 14 ರಿಂದ ಕೂಡಲಸಂಗಮದಿಂದ ಬೆಂಗಳೂರುನವರೆಗೂ ಸುಮಾರು 712 ಕಿ.ಮೀ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಬೃಹತ್ ಪಾದಯಾತ್ರೆಯನ್ನು ಮಾಡಿ , ಫೆಬ್ರವರಿ21 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ದಾಖಲೆಯ ಐತಿಹಾಸಿಕ ಬೃಹತ್ ಪಂಚಮಸಾಲಿ ಮಹಾರ್ಯಾಲಿಯನ್ನು ಸಂಘಟಿಸಿ, ಸುಮಾರು ಹತ್ತು ಲಕ್ಷಾಂತರ ಜನಸ್ತೋಮದೊಂದಿಗೆ ಒಗ್ಗಟ್ಟಿನ ಶಕ್ತಿ ಪ್ರದರ್ಶನವನ್ನು ಯಶಸ್ವಿಯಾಗಿಗೈದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು.
ಆದರೂ ಸರ್ಕಾರ ಸ್ಪಷ್ಟವಾದ ಸ್ಪಂದನೆ ಮಾಡಿಲ್ಲ.
ಫೆಬ್ರವರಿ 21 ರಿಂದ ಫ್ರಿಡಮ್ ಪಾರ್ಕನಲ್ಲಿ ನಿರಂತರವಾಗಿ ಜಗದ್ಗುರುಗಳು ಹಾಗೂ ಸಮಾಜದ ಗಣ್ಯರು ಧರಣಿ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ.
      ಆದ್ದರಿಂದ  ಮೂಲಕ ತಮ್ಮಲ್ಲಿ ವಿನಂತಿಸುವುದೇನಂದರೆ ಸಂವಿಧಾನ ಬದ್ಧವಾಗಿ ಹಿಂದುಳಿದ 2 ಎ ಪಟ್ಟಿಯಲ್ಲಿ ಸೇರ್ಪಡಿಗೊಳ್ಳ್ಳಲು ಗುಣ ಲಕ್ಷಣಗಕನ್ನು ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮಾಜವನ್ನು 2 ಎ ಪ್ರವರ್ಗ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ  ಸೂಕ್ತ ನಿರ್ದೇಶನ ನೀಡಬೇಕೆಂದು ರಾಜ್ಯದ ಪಂಚಮಸಾಲಿ ಸಮಾಜದ ಪರವಾಗಿ ವಿನಂತಿಸುತ್ತೇವೆ.

0 have signed. Let’s get to 1,500!
At 1,500 signatures, this petition is more likely to get picked up by local news!