Need Installing suitable vetting process for issuing recommendations to NRI Organisations
Need Installing suitable vetting process for issuing recommendations to NRI Organisations

We appeal every Kannadiga and Kannada Organisations across the world to sign this petition and mention your country in the comment box.
ಸನ್ಮಾನ್ಯ ಮುಖ್ಯ ಮಂತ್ರಿಗಳೇ,
ದಿನಾಂಕ ೧೯ ಫೆಬ್ರುವರಿಯಂದು ತಾವು ಸಾಗರೋತ್ತರ ಕನ್ನಡಿಗರು ಎಂಬ ವೇದಿಕೆಯ ರಜತಮಹೋತ್ಸವ ಕಾರ್ಯಕ್ರಮದ ಬಗ್ಗೆ ಹೊರಡಿಸಿರುವ ಸಂದೇಶ ಪತ್ರ ತಪ್ಪು ಮಾಹಿತಿಗಳನ್ನೊಳಗೊಂಡಿದೆ ಎಂಬುದನ್ನು ತಮ್ಮ ಗಮನಕ್ಕೆ ತಂದಿರುತ್ತೇವೆ.
ಕನ್ನಡಿಗರುಯುಕೆ ಸಂಘಟನೆಯಿಂದ ನಿಮ್ಮಲ್ಲಿ ವಿನಮ್ರವಾದ ವಿನಂತಿ: ಅನಿವಾಸಿ ಕನ್ನಡಿಗರಲ್ಲಿ ಈಗಾಗಲೇ ಸ್ಥಾಪಿತಗೊಂಡಿರುವ, ಹಲವಾರು ವರ್ಷದಿಂದ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ನೂರಾರು ಪ್ರಾಮಾಣಿಕ ಕನ್ನಡ ಸಂಘಗಳ ಹಾಗೂ ಹಲವಾರು ನಿಸ್ವಾರ್ತ ಕನ್ನಡ ಪ್ರತಿನಿಧಿಗಳ ಒಂದು ಅಧಿಕೃತ ಡೇಟಾಬೇಸ್ ಮಾಡಿ ಅವರನ್ನು ಸರಿಯಾಗಿ, ಸೂಕ್ತವಾಗಿ ಆಯಾ ದೇಶಗಳ ರಾಯಭಾರಿ ಕಚೇರಿಗಳೊಂದಿಗೆ ಸಂಪರ್ಕಿಸಿ ಗುರುತಿಸುವ ಪ್ರಯತ್ನ ಮಾಡಿ. ಈ ಕೆಲಸವನ್ನು NRI ಫೋರಮ್ ಆಗಲೇ ೨೦೧೮ ರಲ್ಲಿ ಶುರು ಮಾಡಿತ್ತು, ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿದೆ ಆದರೆ ಇದನ್ನು ಪ್ರಬಲಗೊಳಿಸುವ ಅವಕಾಶ ಬಂದಿದೆ.
ವಂದನೆಗಳೊಂದಿಗೆ
ಕನ್ನಡಿಗರುಯುಕೆ