ರಸ್ತೆ ದುರಸ್ಥಿ ಬಗ್ಗೆ ಹಾಗು ಪಶು ವೈದ್ಯರ ಅಲಭ್ಯ ಕುರಿತು

ರಸ್ತೆ ದುರಸ್ಥಿ ಬಗ್ಗೆ ಹಾಗು ಪಶು ವೈದ್ಯರ ಅಲಭ್ಯ ಕುರಿತು

0 have signed. Let’s get to 100!
At 100 signatures, this petition is more likely to be featured in recommendations!
Common Man started this petition to MLA of Belthangady

ರಿಂದ,

ಸಾಮಾನ್ಯ ನಾಗರೀಕ

ನಾರಾವಿ

ವಿಷಯ: ಮಾನ್ಯ ಶಾಸಕರಿಗೆ ಮನವಿ ಪತ್ರ: ರಸ್ತೆ ದುರಸ್ಥಿ ಬಗ್ಗೆ ಹಾಗು ಪಶು ವೈದ್ಯರ ಅಲಭ್ಯ ಕುರಿತು

ವಿಷಯಕ್ಕೆ ಸಂಬಂಧಿಸಿದಂತೆ, ನಾರಾವಿ ಗ್ರಾಮ ಜನತೆಯ ಗಮನಕ್ಕೆ ತರಬಯಸುವೆನೆಂದೆರೆ,

ಮೊದಲನೇದಾಗಿ  ಮಂಜುನಗರ (ನಾರಾವಿ ) ಬಸ್ ಸ್ಟಾಂಡ್ ನಿಂದ ಶ್ರೀ ಗಣೇಶ್ ಮನೆಯ ತನಕ ರಸ್ತೆ ತೀರ ಹದೆಗೆಟ್ಟು ವಾಹನ ಸಂಚಾರಕ್ಕೆ ತುಂಬಾ ಅನಾನುಕೂಲ ಆಗಿದೆ. ಇದು ಸುಮಾರು ಎರಡು ಮೂರೂ ವರ್ಷಗಳಿಂದ ಹೀಗೇನೆ ಹದಗೆಟ್ಟಿದೆ. ನಾನು ಕಂಡಂತೆ ಕೆಲವು ವಾಹನ ಚಾಲಕರು ರಸ್ತೆ ಬಿಟ್ಟು ಪಾದಚಾರಿ ರಸ್ತೆಯಲ್ಲಿ ವಾಹನ ಚಲಾಯಿಸುತಿದ್ದರೆ. ಇದು ಪಾದರಸ್ತೆಯಲ್ಲಿ ನಡೆಯುವ ಪಾದಚಾರಿಗಳಿಗೆ ತುಂಬಾ ಅಪಾಯ ಉಂಟು ಮಾಡುತ್ತದೆ. ಇನ್ನು ಮಳೆಗಾಲದಲ್ಲಿ ರಸ್ತೆ ಪೂರ್ತಿ ಹದಗೆಡುವ ಸಾಧ್ಯತೆ ಇದೆ ಹಾಗಾಗಿ ಆದಷ್ಟು ಬೇಗ ರಸ್ತೆ ದುರಸ್ಥಿ ಮಾಡಬೇಕಾಗುತದೆ.

ಎರಡನೇದಾಗಿ, ಅರೋಗ್ಯ ಸೇವೆ ಎಲ್ಲರ ಮೂಲಭೂತ ಹಕ್ಕು ಆಗಿದೆ ಅದು ಮನುಷ್ಯನಾಗಲಿ ಅಥವಾ ಪ್ರಾಣಿಗಳೇ ಆಗಲಿ. ನಮ್ಮ ಗ್ರಾಮ ನಾರಾವಿಯಲ್ಲಿ ಪಶು ವೈದಕೀಯ ಸೇವೆ ಸರಿಯಾಗಿ ದೊರೆಯುತಿಲ್ಲ. ನಾನು ಇತ್ತೀಚಿಗೆ ಎರಡು ಮೂರೂ ಬಾರಿ ಪಶು ವೈದಲಯಕ್ಕೆ ಭೇಟಿ ನೀಡಿದ್ದೆ. ಪ್ರತಿ ಬಾರಿಯೂ ಮುಖ್ಯ ಪಶು ವೈದ್ಯರ ಗೈರು ಹಾಜರಿ ಕಾಣುತ್ತಿತು. ಮುಖ್ಯ ಪಶು ವೈದ್ಯರ ಬಗ್ಗೆ ವಿಚಾರಿಸಿದಾಗ, ಅವರ ಹಾಜರಿಯ ಬಗ್ಗೆ ಖಚಿತ ಮಾಹಿತಿ ಇಲ್ಲದೆ ಖಾಸಗಿ ವೈದ್ಯರ ಮೊಬೈಲ್ ನಂಬರ್ ಕೊಡುದು ಕಂಡು ಬಂದಿದೆ. ಇತ್ತೀಚಿಗೆ ಹೊಸ ಕರಳು ಬೇನೆಯಿಂದ ಹಲವು ಪಶುಗಳು ಸೂಕ್ತ ವೈದಕೀಯ ಸೌಲಭ್ಯ ಇಲ್ಲದೆ ಅಸು ನೀಗಿದೆ. ಈ ರೀತಿ ದುರ್ಘಟನೆ ಮುಂದೆ ನಡೆಯದಂತೆ ಸರಿಯಾದ ವೈದಕೀಯ ಸೇವೆ ದೊರೆಯುವಂತೆ ಆಗಬೇಕು.

ಹೀಗಾಗಿ, ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಮೇಲ್ಕಂಡ ಸಮಸ್ಯೆಗಳನ್ನು ಸರಿಪಡಿಸಲು ಸಹಕರಿಸಬೇಕಾಗಿ ಈ ಪತ್ರದ ಮೂಲಕ ಕೇಳಿಕೊಳ್ಳುತೇನೆ. ತಮ್ಮೆಲರ ಸಹಕಾರವನ್ನು ಈ ಪತ್ರಕ್ಕೆ ಸಹಿ ಹಾಕಿ ನೀಡಬೇಕಾಗಿ ವಿನಂತಿ.

0 have signed. Let’s get to 100!
At 100 signatures, this petition is more likely to be featured in recommendations!