Save #Namma# KPCR School, Dharwad

Save #Namma# KPCR School, Dharwad

0 have signed. Let’s get to 500!
At 500 signatures, this petition is more likely to be featured in recommendations!
Shrikant Patil started this petition to Home Minister, Government of Karnataka

ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯನ್ನು ಎಥಾಸ್ಥಿತಿ ಮುಂದುವರೆಸುವ ಕುರಿತು.

ಮಾನ್ಯರೇ,

ಮೇಲಿನ ವಿಷಯದನ್ವಯ, ಪೋಲಿಸ್ ಮಕ್ಕಳ ವಸತಿ ಶಾಲೆಯು 22 ವರ್ಷಗಳಲ್ಲಿ ಅಂದಾಜು 800 ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಿದೆ ಸನ್ 1997 ಆಗಸ್ಟ್ 1 ರಂದು ಪ್ರಾರಂಭವಾದ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಈಗ ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರ, ಪ್ರತಿಷ್ಟಿತ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಳಹಂತದ ಪೋಲಿಸ್ ಸಿಬ್ಬಂದಿ ಮಕ್ಕಳ ಕನಸುಗಳಿಗೆ ಭದ್ರ ಬುನಾದಿಯಾಗಿ ವಿದ್ಯಾರ್ಥಿಗಳ ಜೀವನ ಶೈಲಿಯನ್ನು ರೂಪಿಸುವಲ್ಲಿ ಕಾರಣವಾದ ಶಾಲೆ, ಶೈಕ್ಷಣಿಕ ಕಾಶಿ ಧಾರವಾಡದ ಮಾದರಿ ವಸತಿ ಶಾಲೆ, ಇವಾಗ ಅವನತಿಯ ಅಂಚಿನಲ್ಲಿರುವುದು ವಿಷಾದನೀಯ. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಗಳಿಗೆ ಏರುವಲ್ಲಿ ನಮ್ಮ ಸಹೃದಯಿ ಶಿಕ್ಷಕವೃಂದವು ಪಟ್ಟ ಪರಿಶ್ರಮದ ಫಲವಾಗಿ ನಿಮ್ಮೆದುರಿಗೆ ಇರುವುದು ಶ್ಲಾಘನೀಯ.

ಬಡ ಪೊಲೀಸ್ ಮಕ್ಕಳಿಗಾಗಿ ಅತ್ಯುತ್ತಮ ಶಿಕ್ಷಣ ಹಾಗೂ ವಸತಿ ನೀಡಿ, ಅವರ ಭವಿಷ್ಯಕ್ಕೆ ದಾರಿ ದೀಪವಾಗಲೆಂದು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶ್ರೀ ಅಮರಕುಮಾರ ಪಾಂಡೆಯವರು ಈ ಶಾಲೆಯನ್ನು ಆಗಸ್ಟ 1, 1997 ರಂದು ಅಮೃತ ಹಸ್ತದಿಂದ ಪ್ರಾರಂಭಿಸಿದರು. ಆದರೆ, ವರ್ತಮಾನ ಸಂಗತಿಗಳು ನಮ್ಮ ಶಿಕ್ಷಕವೃಂಧದ ತೇಜೋವಧೆಯು ಪತ್ರಿಕೆಗಳಲ್ಲಿ ಭಿತ್ತರಿಸುತ್ತಿರುವುದು ಪೋಲಿಸ್ ಮಕ್ಕಳ ವಸತಿ ಶಾಲೆಯ ಹಳೆಯ ವಿದ್ಯಾರ್ಥಿ ವೃಂದದ ಕೆಂಗಣ್ಣಿಗೆ ಗುರಿಯಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಈಗಿನ ಸಾಮಾಜಿಕ ಬದುಕಿನ ಉನ್ನತಿಗೆ ನಮ್ಮ ಎಲ್ಲ ಶಿಕ್ಷಕವೃಂದ ನಮ್ಮೊಂದಿಗೆ ಕಷ್ಟಗಳನ್ನು ಮೀರಿ ಎತ್ತರಕ್ಕೆ ಬೆಳೆಸುವ ಹಾಗೆ ನಮ್ಮ ಪಾಲಕರಾಗಿ, ನಮ್ಮ ಹಿತಚಿಂತಕರಾಗಿ ನಮ್ಮನ್ನು ಸಸಿಯಿಂದ ಹೆಮ್ಮರವಾಗಿ ಸಮಾಜದಲ್ಲಿ ಬೆಳೆಯುವಲ್ಲಿ ಕಾರಣಭೂತರಾದವರಿಗೆ ಕೊಡಲಿ ಪೆಟ್ಟನ್ನು ನೀಡುತ್ತಿರುವುದು ಶೋಚನೀಯ ಸಂಗತಿ.

•ಭಾರತದಲ್ಲಿಯೇ ಪೊಲೀಸ್ ಮಕ್ಕಳಿಗಾಗಿ ಇರುವ ಏಕೈಕ ಮಾದರಿ ಶಾಲೆ.

•ಶಿಕ್ಷಕರ ವಯೋಮಿತಿ ಮೀರಿದ್ದು, ಬೇರೆಡೆ ಎಲ್ಲೂ ಅವಾಕಾಶವಿಲ್ಲದಿರುವದರಿಂದ ನಮ್ಮ ಜೀವನ ರೂಪಿಸಿದ ಶಿಕ್ಷಕರನ್ನು ಮುಂದುವರಿಸಲು ಕೋರಿಕೆ.

•ಬಡ ಪೊಲೀಸ್ ಮಕ್ಕಳಿಗೆ ಉಚಿತ ಶಿಕ್ಷಣದಿಂದ ವಂಚನೆಯಾದಂತಾಗುವುದು.

•ಕೌಟುಂಬಿಕ ಸಮಸ್ಯೆಯಿರುವ ಎಷ್ಟೋ ಮಕ್ಕಳಿಗೆ ಆಸರೆಯಾಗಿದ್ದ ಶಾಲೆ.

•ಪೊಲೀಸ್ ಪೇದೆಗಳ ವರ್ಗಾವಣೆಯಿಂದಾಗಿ ಮಕ್ಕಳ ಶಿಕ್ಷಣದ ಸಮಸ್ಯೆಗೆ ಪರಿಹಾರವಾಗಿರುವಂತಹ ಶಾಲೆ.

•ಬಡ ಪೊಲೀಸ್ ಮಕ್ಕಳ ಅತ್ಯುತ್ತಮ ಶಿಕ್ಷಣ ಮತ್ತು ವಸತಿ ಸೌಲಭ್ಯ ನೀಡುವ ಶಾಲೆ.

•ಎಷ್ಟೋ ಪೊಲೀಸ್ ಮಕ್ಕಳ ಭವಿಷ್ಯ ರೂಪಿಸಿದ ಶಾಲೆ.

•ಮುಚ್ಚುವ ಬದಲು ಇನ್ನಷ್ಟು ಅಭಿವೃದ್ಧಿ ಪಡಿಸಿ, ನಾವು ಕೈ ಜೋಡಿಸುತ್ತೇವೆ.

ಆದ್ದರಿಂದ, ದಯಾಳುಗಳಾಗಿರುವ ತಾವು ಕೆಳವರ್ಗದ ಸಿಬ್ಬಂದಿಗಳ ಆಶಾಕಿರಣವಾದ ಶಾಲೆಯ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಲು ಶ್ರಮಿಸುವಿರಿ ಎಂಬ ನಂಬಿಕೆ ಎಲ್ಲ ಹಳೆಯ ವಿದ್ಯಾರ್ಥಿಗಳದ್ದಾಗಿದೆ. ನಿಮ್ಮ ಈ ಕಾರ್ಯಕ್ಕೆ ನೆರವಾಗಲು ಹಳೆಯ ವಿದ್ಯಾರ್ಥಿಗಳ ಸಂಘದವರು ಸದಾ ಸಿದ್ಧರಿದ್ದೇವೆ. ಆದಕಾರಣ ಶಾಲೆಯಲ್ಲಿ ಈ ಹಿಂದಿನಂತೆ ಮುಂದುವರೆಸಿಕೊಂಡು ಹೋಗಲು ತಾವು ಶ್ರಮಿಸುವಿರಿ ಎಂಬ ಆಶಯ ಹೊಂದಿದ್ದೇವೆ.

ಧನ್ಯವಾದಗಳು

ಇಂತಿ ನಿಮ್ಮ ವಿಶ್ವಾಸಿಗರು 

(ಹಳೆಯ ವಿದ್ಯಾರ್ಥಿಗಳ ವೃಂದ ಎನ್. ಎ. ಮುತ್ತಣ್ಣ ಸ್ಮಾರಕ ಕರ್ನಾಟಕ ರಾಜ್ಯ ಪೊಲೀಸ್ ಮಕ್ಕಳ ವಸತಿ ಶಾಲೆ ಧಾರವಾಡ)

0 have signed. Let’s get to 500!
At 500 signatures, this petition is more likely to be featured in recommendations!