Uplifting Middle Class citizens of India

Uplifting Middle Class citizens of India

0 have signed. Let’s get to 100!
At 100 signatures, this petition is more likely to be featured in recommendations!
Vinod Kartavya started this petition to Education Minister and

*ನೀವು ಮದ್ಯಮ ವರ್ಗದವರೇ ಒಮ್ಮೆ ಯೋಚಿಸಿ*


ಮದ್ಯಮ ವರ್ಗದ ಜನರಿಗೆ ಒಂದು ಗಾದೆ ಇದೆ ಏನಂದರೆ *ಆರಕ್ಕೆ ಹಕ್ಕಲ್ಲ ಮೂರಕ್ಕೆ ಇಳಿಯಲ* ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಯಾಕೆ ಇಂತಹ ಪರಿಸ್ಥಿತಿ ಎಂದು ಮದ್ಯಮ ವರ್ಗದವರ ದುಡಿಮೆಯಲ್ಲಿ ಶೇಕಡಾ 50% ಹಣ ಊಟಾ ತಿಂಡಿ ಹಾಲು ಹಾಗೂ ಇತರೆ ಹೋಗುತ್ತದೆ, ಇನ್ನೂ ಶೇಕಡಾ 20% ಬಾಗ ಸಂಸಾರದವರ ಬಟ್ಟೆಗೆ ಹೋಗುತ್ತದೆ ಮತೆ ಉಳಿದ 30% ರಷ್ಟು ಬಾಡಿಗೆ ಅಥವಾ ಬಡ್ಡಿ ಗೆ ಹೋಗುತ್ತದೆ, ಹಾಗಾಗಿ ಈ ಮಧ್ಯಮವರ್ಗದವರು ಸಂಪೂರ್ಣ ಆದಾಯ ಮುಗಿದಿದ್ದರೂ ತಮ್ಮ ಮಕ್ಕಳು ಮಾತ್ರ ಖಾಸಗಿ ಶಾಲೆಯಲ್ಲಿ ಓದಬೇಕು ಅದು ಯಾಕೆ ಅನ್ನುತಿರ ಒಂದು ಒಳ್ಳೆಯ ಬೋಧನೆ ಎನ್ನಬಹುದು ಕೆಲವರಿಗೆ ಅದು ಪ್ರೆಸ್ಟೀಜ್ ಪ್ರಶ್ನೆ ಹಾಗೂ ಕೆಲವರಿಗೆ ಆಂಗ್ಲ ಮಾದ್ಯಮ ಕಲಿಕೆಗೆ.

ಹಾಗಾಗಿ ತಮ್ಮಲ್ಲಿ ಹಣ ಇಲ್ಲದಿದ್ದರೂ, ಎಲ್ಲಾ ಉಚಿತವಾಗಿ ಇದ್ದರೂ ಸಹ ಸರ್ಕಾರಿ ಶಾಲೆಗೆ ಸೇರಿಸುವುದಿಲ್ಲ, ಖಾಸಿಗೆ ಶಾಲೆಗಳಲ್ಲಿ ತುಂಬಾ ದುಬಾರಿ ಇದ್ದರೂ ಅದೇನೂ ಹಾಡು ಇದೆಯಲ್ಲ *ಸಾಲ ಮಾಡಿ ಆದ್ರೂ ತುಪ್ಪ ತಿನ್ನು* ಎಂದು ಎಷ್ಟೇ ದುಬಾರಿ ಯಾದರು ಖಾಸಗಿ ಶಾಲೆಗೆ ಸೇರಿಸುತ್ತಾರೆ.


ಇನ್ನೂ ನಮ್ಮ ಸರ್ಕಾರಿ ಶಾಲೆಗೆ ಬರೋಣ ಮೊದಲನೆಯದಾಗಿ ಆಂಗ್ಲ ಮಾದ್ಯಮ ಇಲ್ಲದಿರುವುದು, ಜಗತ್ತಿನ ಎಲ್ಲಾ ಕಡೆ ಆಂಗ್ಲ ಭಾಷೆಯನ್ನು ಒಪ್ಪಿಕೊಂಡಿದ್ದಾಗಿ ಇದೆ, ಭಾಷಾಭಿಮಾನ ಎಷ್ಟೇ ಇದ್ದರೂ ಸಹ ಒಪ್ಪಲೇಬೇಕು ಆಂಗ್ಲ ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಆದರೆ ಸರ್ಕಾರ ನಮ್ಮ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ವನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಕ್ಕೆ ಭಾಷಾಭಿಮಾನ ಗಳು ಅದಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ, ಈ ಭಾಷಾಭಿಮಾನ ಗಳ ಮಕ್ಕಳು ಮಾತ್ರ ಖಾಸಗಿ ಶಾಲೆಯಲ್ಲಿ ಅದರಲ್ಲೂ ಬೇರೆ ದೇಶದಲ್ಲಿ ಓದುತ್ತಿದ್ದರೆ.

ಹಾಗೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಅವಶ್ಯಕತೆ ಗಳ ಕೊರತೆಯೂ ಇದೆ, ಕಂಪ್ಯೂಟರ್ ಲ್ಯಾಬ್, ಸೈನ್ಸ್ Lab ಹಾಗೂ ಲೈಬ್ರರಿ ಕೇವಲ ಕಲ್ಪನೆಯಲ್ಲಿ ಮಾತ್ರ.

ಇನ್ನೂ ನಮ್ಮ ಸರ್ಕಾರಿ ಶಾಲೆಯ ಕೆಲವು ಅದ್ಯಾಪಕರಲ್ಲು ಈಗಿನ ಕಾಲಕ್ಕೆ ಹೇಳಿಕೊಡುವ ನೈಪುಣ್ಯದ ಕೊರತೆಯೂ ಇದೆ.

ಈ ಸರ್ಕಾರಿ ಶಾಲೆಯ ಉನ್ನತೀಕರಣ ಮಾಡಬೇಕೆಂಬ ರಾಜಕೀಯ ಇಚ್ಚಾಶಕ್ತಿ ಇಲ್ಲ ಏಕೆಂದರೆ ಮೋಸ್ಟ್ of the ಖಾಸಗಿ ಶಾಲೆಗಳು ಅವರದ್ದೇ ಅಲ್ಲವೇ ಅದು ಹೇಗೆ ಸಾದ್ಯ ಹೇಳಿ?

ಭಾರತ ದೇಶದಲ್ಲಿ ಶೇಕಡಾ 80% ಜನರು ಮಧ್ಯಮವರ್ಗದವರು ಇದ್ದಾರೆ ಎಲ್ಲರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಮ್ಮನ್ನು ತಾವು ಆರ್ಥಿಕ ಮುಕ್ಕಟಿಗೆ ಸಿಲುಕಿದ್ದಾರೆ.

ಒಮ್ಮೆ ಯೋಚಿಸಿ ಈ ಎಲ್ಲಾ ಮಾದ್ಯಮ ವರ್ಗದವರು ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿದರೆ ಅವರ ಆದಾಯದಲ್ಲಿ savings ಮಾಡಿಕೊಂಡು ತಾವು ಜೀವನದಲ್ಲಿ ಮೇಲೆ ಬರುತ್ತಾರೆ.

ಹಾಗಾಗಿ ನಮ್ಮ ದೇಶದ ಉನ್ನತಿಗೆ ಶಿಕ್ಷಣ ತುಂಬಾ ಮುಖ್ಯ.

ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳು ನಾಚುವ ರೀತಿ ಆದಾಗ ಮಾತ್ರ ನಮ್ಮ ದೇಶ ಮುಂದುವರಿದ ರಾಷ್ಟ್ರ ವಾಗಲು ಸಾಧ್ಯ.

*ಸರ್ಕಾರಿ ಶಾಲೆ ಉಳಿಸಿ*
*ಮದ್ಯಮ ವರ್ಗ ಬೆಳೆಸಿ*
*ಉನ್ನತ ರಾಷ್ಟ್ರ ನಿರ್ಮಿಸಿ*


ವಿ

0 have signed. Let’s get to 100!
At 100 signatures, this petition is more likely to be featured in recommendations!