Extend SAKAALA SERVICES to us too...Govt & Pvt Aided Employees in Karnataka ಸಕಾಲ ನಮಗೂ ...

0 have signed. Let’s get to 100!


Dear Friends & Colleagues

ಕರ್ನಾಟಕ ಸರ್ಕಾರ 'ಸಕಾಲ ಸೇವೆ'ಯನ್ನು ಜಾರಿಗೆ ತಂದಾಗ, ಅದು ಇಡೀ ದೇಶಕ್ಕೆ ಮಾದರಿಯಾಗಿ ಗಮನಸೆಳೆದಿತ್ತು. ಹಲವು ಸೇವೆಗಳು ನಿಗದಿತ ಕಾಲಮಿತಿಯಲ್ಲಿ ಜನಸಾಮಾನ್ಯನಿಗೆ ತಲುಪಿದವು. ಕೆಲ ಅಧಿಕಾರಿ/ಸಹಾಯಕ ಸಿಬ್ಬಂದಿಗಳ ಅನವಶ್ಯಕ ವಿಳಂಬನೀತಿ ಮತ್ತು ಭ್ರಷ್ಟತೆಯನ್ನು ಬಹುಮಟ್ಟಿಗೆ ತಡೆಯಲು ಯಶಸ್ವಿಯೂ ಆಯಿತು.

ಕಾಲಮಿತಿಗೊಳಪಟ್ಟು ಆಗುವ ಈ ಸಕಾಲ ಯೋಜನೆಯನ್ನು ಸರ್ಕಾರಿ ಮತ್ತು ಖಾಸಗಿ ಅನುದಾನಿತ ಸಿಬ್ಬಂದಿಗಳಿಗೂ ವಿಸ್ತರಿಸುವ ಅನಿವಾರ್ಯತೆ ಇದೆ. ಅವರ ವೇತನ, ವಾರ್ಷಿಕ ವೇತನ ಬಡ್ತಿ, ಕಾಲಮಿತಿ ಬಡ್ತಿ, ಪರೀಕ್ಷಾರ್ಥ ಅವಧಿ ಪೂರೈಕೆ ಮೊದಲಾದ ಕೆಲಸಗಳಿಗಾಗಿ ಅನವಶ್ಯಕವಾಗಿ ಅಧಿಕಾರಿಗಳ ಬಳಿಗೆ ಅಲೆದಾಡುವುದನ್ನು ತಪ್ಪಿಸಲು ಮತ್ತು ಭ್ರಷ್ಟತೆಯನ್ನು ತಡೆಯಲು ಸಾಧ್ಯವಿದೆ. ಇವುಗಳಿಗಾಗಿ ಅಧಿಕಾರಿಗಳು, ಸಂಬಂಧಿಸಿದ ಗುಮಾಸ್ತರು, ಸೂಪರಿಂಟೆಂಡೆಂಟ್ಗಳ ಬಳಿ ಅಲೆದು-ಅಲೆದು ಸಾಕಾಗಿಹೋಗಿದೆ.

ಭ್ರಷ್ಟತೆ ತೊಲಗಲಿ, ಸಕಾಲ ನಮಗೂ ಸಿಗಲಿ.

Please Sign the Petition.

Extend the SAKAALA SERVICES to Govt and Pvt Aided Employees in getting their salaries, arrears, increments, encashments, declaration of probationery period etc. This will mandate the clerical staffs and officials who purposefully with hold the employees due.

Let delay and corruption go, Let SAKAALA come.

So, kindly sign my online petition.

Guruswamy C.