ರಾಜ್ಯದ ಮರಾಠಾ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎ ಗುಂಪಿಗೆ ಸೇರಿಸುವಂತೆ ಆಗ್ರಹಿಸಿ ಮರಾಠಾ ಕ್ರಾಂತಿ (ಮೌನ)
ರಾಜ್ಯದ ಮರಾಠಾ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎ ಗುಂಪಿಗೆ ಸೇರಿಸುವಂತೆ ಆಗ್ರಹಿಸಿ ಮರಾಠಾ ಕ್ರಾಂತಿ (ಮೌನ)
- ಮರಾಠಾ ಕ್ರಾಂತಿ (ಮೌನ) ಮೋರ್ಚಾ
1) ಮರಾಠಾ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವ ಕುರಿತು ಹಿಂದುಳಿದ ಆಯೋಗಗಳ ಅಧ್ಯಕ್ಷರಾಗಿದ್ದ ಶಂಕರಪ್ಪ ಅವರು 2012ರಲ್ಲಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದರು. ಈ ವರದಿ ಅನುಷ್ಠಾನಗೊಂಡರೆ ಮಾತ್ರ ನಮ್ಮ ಜನಾಂಗಕ್ಕೆ ಮೀಸಲಾತಿಯ ಲಾಭ ದೊರೆಯುತ್ತದೆ. ಈಗಿರುವ ಮೀಸಲಾತಿಯಿಂದ ಪ್ರಯೋಜನ ಆಗಿಲ್ಲ’.
2) ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿರಾಜೆ ಭೋಸ್ಲೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬಲ್ಲಿ ತಮ್ಮ ದೇಹ ತ್ಯಾಗ ಮಾಡಿದ್ದಾರೆ. ಅಲ್ಲಿ ಅವರ ಸಮಾಧಿ ಕೂಡ ಇದ್ದು, ಆ ಸ್ಥಳವನ್ನು ಅಭಿವೃದ್ಧಿಪಡಿಸಬೇಕು.
3) ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಬೇಕು. ಈ ಕುರಿತಂತೆ ಈಗಾಗಲೇ ಸರಕಾರದ ಮುಂದೆ ಪ್ರಸ್ತಾವನೆ ಇದ್ದು, ಇದಕ್ಕೆ ಅನುಮೋದನೆ ನೀಡಬೇಕು’.
4) ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯ ದಿ ಮರಾಠಾ ಸಹಕಾರಿ ಬ್ಯಾಂಕ್ ಈಗ ಬಾಗಿಲು ಮುಚ್ಚಿದೆ. ಈ ಬ್ಯಾಂಕ್ ಆರ್ಥಿಕ ಸಂಕಷ್ಟದಲ್ಲಿದ್ದಾಗ ಠೇವಣಿ ಸಂಬಂಧಿತ ವಿಮಾ ಸಾಲವನ್ನು ಪಡೆಯಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಬ್ಯಾಂಕಿನ ಸುಮಾರು ₹8 ಕೋಟಿ ಠೇವಣಿ ಕೆಸಿಸಿ ಬ್ಯಾಂಕ್ನಲ್ಲಿತ್ತು. ಈ ಠೇವಣಿ ಹಣವನ್ನು ವಾಪಸ್ ಕೊಡಿಸಿ, ಬ್ಯಾಂಕ್ ಪುನರುಜ್ಜೀವನಕ್ಕೆ ಸಹಕರಿಸಬೇಕು’.