ಸೊಳ್ಳೆ ಮುಕ್ತ ಹೊಸಕೆರೆ ಹಳ್ಳಿ ಗಾಗಿ

ಸೊಳ್ಳೆ ಮುಕ್ತ ಹೊಸಕೆರೆ ಹಳ್ಳಿ ಗಾಗಿ
Why this petition matters

ಹೊಸಕೆರೆಹಳ್ಳಿ ಕೆರೆಯ ಸುಮಾರು 500 ವರ್ಷಗಳ ಇತಿಹಾಸವಿದ್ದು ಅಂದಿನ ಕಾಲದಲ್ಲಿ ಕುಡಿಯುವುದಕ್ಕೂ ಸಹಿತ ಕೆರೆ ನೀರನ್ನು ಉಪಯೋಗಿಸುತ್ತಿದ್ದರು. ಆದರೆ ಕಾಲಕ್ರಮೇಣ ಬೆಂಗಳೂರು ನಗರ ಬೆಳೆಯುತ್ತಿದ್ದಂತೆ ಇತರೆ ಭಾಗಗಳಿಂದ ಕೆರೆಗೆ ಮೋರಿ ನೀರನ್ನು ಬಿಡುವಂತ ಕೆಲಸ ನಡೆಯುತ್ತಿದೆ. ಸರ್ಕಾರದಿಂದ ಹತ್ತಾರು ಕೋಟಿ ಕಾಮಗಾರಿಗೆ ಚಾಲನೆ ನೀದಿದ್ದರೂ ಇಲ್ಲಿವರೆಗೂ ಶುಚಿ ಯಾಗಿಲ್ಲ.ಇಲ್ಲಿ ಉತ್ಪತ್ತಿ ಯಾಗುವ ಸೊಳ್ಳೆ ಗಳಿಂದ ಹೊಸಕೆರೆ ಹಳ್ಳಿಯಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಕಳೆದ ಬಾರಿ ಡೆಂಗ್ಯೂ, ಮಲೇರಿಯಾ ಗಳು ದಾಖಲಾಗಿದ್ದು ಇಲ್ಲೇ ಹೆಚ್ಚು. ಈಗ ಸಂಜೆ ಯಾದರೇ ಜನ ಸೊಳ್ಳೆ ಗೆ ಹೆದರಿ ಈಚೆ ಬಾರದಂತಾಗಿದೆ.
ಕೆರೆ ಶುಚಿ ಗೆ. ಸರ್ಕಾರ ಕೋಟಿ ಕೋಟಿ ಮಂಜೂರು ಮಾಡಿದ್ದರೂ ಕೆಲಸ ಮಾಡಿಲ್ಲ. ಇದರ ವಿರುದ್ಧ ಬಿಬಿಎಂಪಿ ಗೆ ದೂರು ನೀಡಿದ್ದರೂ ಪ್ರಯೋಜನ ಇಲ್ಲ.
ಇದ್ದಕ್ಕೆ ಸರ್ಕಾರ ಹಾಗೂ ಜನಪ್ರದಿನಿಗಳ ನಿರ್ಲಕ್ಷ್ಯ ಕಾರಣ.
ನಮಗೆ ಕೆರೆಯನ್ನು ಸ್ವಚ್ಛಗೊಳಿಸಿ ಕೊಡಿ ಸೊಳ್ಳೆ ಇಲ್ಲದಂತೆ ಮಾಡಿ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿ
ಬಿಬಿಎಂಪಿ ಪ್ರಕಾರ ಕೆರೆಯು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರೆ ಕೆರೆಯಿಂದ ಬರುವ ಸೊಳ್ಳೆ ರೋಗಗಳು ಹೆಚ್ಚು ಹೊಸಕೆರೆಹಳ್ಳಿ ಪದ್ಮನಾಭನಗರ ಸಭಾ ಕ್ಷೇತ್ರಕ್ಕೆ ಬರುತ್ತದೆ. ಆದ್ದರಿಂದ ಕೆರೆ ನಿರ್ಲಕ್ಷ್ಯಕ್ಕೊಳಗಾಗಿದೆ ಕೂಡಲೇ ಶುಚಿಮಾಡಿ