Jayaprakash Hegde as BJP Loksabha candidate for Udupi-Chikmagalur

0 have signed. Let’s get to 100!


ದೇಶ ಲೋಕಸಭಾ ಚುನಾವಣೆಗೆ ಅಣಿಯಾಗುತಿದೆ , ದೇಶ ವ್ಯಾಪ್ತಿಯಾಗಿ ಮತ್ತೆ ಮೋದಿಜಿಯವರನ್ನು ಪ್ರಧಾನಿಯಾಗಿಸುವ ಕೂಗು ಕೇಳಿಬರುತ್ತಿದೆ . ನಿಜಕ್ಕೂ ಈ ದೇಶಕ್ಕೆ ಮೋದಿಜಿಯವರ ಅಗತ್ಯವಿದೆ . ಮೋದಿಜಿಯವರ ಆಡಳಿತ ವೈಖರಿ ವಿರೋಧಿಗಳ ನಿದ್ದೆಗೆಡಿಸಿದೆ ತನ್ಮೂಲಕ ದೇಶವನ್ನು ವರ್ಷಾನುಗಟ್ಟಲೆ ಕೊಳ್ಳೆಹೊಡೆದ , ಹಗರಣಗಳ ಪಿತಾಮಹರೆಲ್ಲ ಒಂದಾಗಿದ್ದಾರೆ . ಹೇಗಾದರೂ ಗೆಲ್ಲುವ ಇಚ್ಛೆಯಿಂದ ಯಾವ ನೀಚ ಮಟ್ಟಕ್ಕೂ ಇಳಿಯುವ ಅವರ ಮಹಾಘಟಬಂಧನ್ , ಕುತಂತ್ರ ರಾಜಕಾರಣಗಳನ್ನೆಲ್ಲ  ಛೀದ್ರಛೀದ್ರ ಮಾಡಿ ಮೋದಿಜಿನ ಪ್ರಧಾನಿಯಾಗಿಸುವಲ್ಲಿ ನಾವೆಲ್ಲ ಶ್ರಮಿಸಬೇಕಿದೆ ‌. ಮೋದಿ ಸರ್ಕಾರ ಸುದೃಡ ಭಾರತಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ತಂದಿದೆ , ಅದು ತಳಮಟ್ಟಕ್ಕೆ ತಲುಪುವಲ್ಲಿ ಸಂಸದರ ವೈಪಲ್ಯ ಕಾರಣ ಇರಬಹುದು ಎಂಬುದನ್ನು ನಾವು ಒಪ್ಪಲೇಬೇಕು . ಮೋದಿಜಿ ಹೆಸರಲ್ಲಿ ಗೆದ್ದು ಬಂದ ಎಲ್ಲಾ ಸಂಸದರೂ ಮೋದಿಯ ಸ್ಪೀಡಿಗೆ ಇವರು ಕೆಲಸ ಮಾಡಲಿಲ್ಲ ಎಂಬುದು ಸತ್ಯ ,  ಹಾಗಾಗಿ ಅದೆಷ್ಟೋ ಯೋಜನೆಗಳು ಜನರನ್ನು ತಲುಪುವಲ್ಲಿ ಸಾಧ್ಯವಾಗಲಿಲ್ಲ . 

ಮುನ್ನೂರಕ್ಕೂ ಹೆಚ್ಚು ಎನ್‌ಡಿಎ ಸಂಸದರು ಕೇಂದ್ರದಲ್ಲಿ ಇದ್ದಾರೆ ಯಾರೂ ಚುರುಕಿನಿಂದ ಕೆಲಸ ಮಾಡ್ತಾರೆ ಅವರು ಕ್ಷೇತ್ರಕ್ಕೆ ಅಗತ್ಯ ಯೋಜನೆ ಶೀಘ್ರವಾಗಿ ಬಾಚಿಕೊಳ್ಳಬಹುದು. ಕ್ಷೇತ್ರದ ಜವಬ್ದಾರಿಯ ಹೊಣೆಯರಿತು ದಿನ ನಿತ್ಯ  ಕೆಲಸಗಳ ಹಿಂದೆ ಓಡಬೇಕು . ಸಂಸದರಿಗೆ ಆ ಬದ್ದತೆ ಇಲ್ಲದಿದ್ದರೆ ಅದಕ್ಕೆ ಮೋದಿ ಆಡಳಿತ ಸರಿಯಿಲ್ಲ ಎಂದು ದೂರಿ ಪ್ರಯೋಜನವಿಲ್ಲ . 

ಒಬ್ಬ ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಕಾರ್ಯಕರ್ತನಾಗಿ ಯೋಚಿಸಿದರೆ ನಮ್ಮ‌ ಸಮಸ್ಯೆಗಳಿಗೆ ಧ್ವನಿಯಾಗಬಲ್ಲ , ಕಾರ್ಯಕರ್ತರ ಕೈಗೆ ಸಿಗುವ ಸಂಸದರನ್ನು ಆಯ್ಕೆ ಮಾಡುವುದೆ ಉತ್ತಮ ಇಲ್ಲದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ .

ಮೋದಿಜಿ ಅವರನ್ನು ಪ್ರಧಾನಿಯಾಗಿ ಮತ್ತೆ ಕಾಣುವ ಆಶಯ ನಮ್ಮೆಲ್ಲರಲ್ಲೂ ಇದೆ ಹಾಗೆ ಅವರ ಕಾರ್ಯವೇಗಕ್ಕೆ ತಕ್ಕಂತೆ ನಮ್ಮ ಕ್ಷೇತ್ರವನ್ನೂ ಅಭಿವೃದ್ಧಿ ಮಾಡುವ ಸಂಸದರನ್ನು ಆರಿಸಿದಾಗ ಮಾತ್ರ   ನಮ್ಮ‌ ಕ್ಷೇತ್ರದ ಅಭಿವೃದ್ಧಿ ಸಾಧ್ಯ . ಆವೆಲ್ಲ ದೃಷ್ಟಿಯಿಂದ ಯೋಚಿಸಿದರೆ ಸ್ಥಳಿಯರೂ , ಹಿರಿಯ ರಾಜಕೀಯ ಮುತ್ಸದಿಗಳು ಆದ ಜಯಪ್ರಕಾಶ್ ಹೆಗ್ಡೆಯವರು ಸರ್ವ ಸಮರ್ಥ ಆಯ್ಕೆ.  ಹೆಗ್ಡೆಯವರಿಗೆ ಉಭಯ ಜಿಲ್ಲೆಯ ಪರಿಪೂರ್ಣ ಪರಿಚಯವಿದೆ , ಕಾರ್ಯಕರ್ತರ ಸಂಪರ್ಕವಿದೆ , ಕೆಲಸ ಆಗಬೇಕಾದರೆ ಯಾರನ್ನು ಸಂಪರ್ಕಿಸಬೇಕು ಎನ್ನುವ ಸ್ಪಷ್ಟ ಅರಿವು ಇದೆ . ದೇಶವೇ ಮೋದಿ ಮತ್ತೋಮ್ಮೆ ಎಂಬ ದ್ವನಿಯಲ್ಲಿರುವಾಗ  ಬಿಜೆಪಿಯ ಪ್ರಮುಖ ನಾಯಕರಾಗಿರುವ ಜಯಪ್ರಕಾಶ್ ಹೆಗ್ಡೆ ಈ ಹಿನ್ನೆಲೆಯಲ್ಲಿ  ಮೋದಿಯ ಕನಸುಗಳನ್ನು ಉಡುಪಿಯಲ್ಲಿ ನನಸಾಗಿಸಲು ಅತ್ಯಂತ ಸೂಕ್ತವಾಗಿದ್ದಾರೆ. ಕಡತಗಳ ಹಿಂದೆಯೇ ಹೋಗಿ ದೆಹಲಿ ಮಟ್ಟದಲ್ಲಿ ಕಾರ್ಯ ಸಾಧಿಸಿಕೊಂಡ ಬರುವ ಖಡಕ್ ಮಾತಿನ ಜಯಪ್ರಕಾಶ್ ಹೆಗ್ಡೆಯವರು ಈ ಹಿಂದೆ ಅತ್ಯಲ್ಪ ಅವದಿಗೆ ಸಂಸದರಾಗಿದ್ದರೂ , ಕಿರು ಅವಧಿಯ ಸಾಧನೆಯ ಮೂಲಕ ಮತದಾರ ಮನಸ್ಸಲ್ಲಿ ಅಚ್ಚೊತ್ತಿದ್ದಾರೆ . 

‌ಮೂರಕ್ಕೂ ಹೆಚ್ಚು ಹೊಸ ರೈಲುಗಳು 

ರೈಲು ಮಾರ್ಗ ,  ಮೀನುಗಾರಿಕಾ ಸಬ್ಸಿಡಿ , ಅಡಿಕೆಗೆ ಬೆಂಬಲ ಬೆಲೆ , ಇನ್ನಿತರ ಪ್ರಧಾನ  ಕೆಲಸಗಳು ಅತೀ ಕಡಿಮೆಯಲ್ಲಿ ಸಂಸದರಾಗಿ ಇದ್ದಾಗ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಂಡು ಬಂತು.

ನಮ್ಮ ಕ್ಷೇತ್ರದ ಬಗ್ಗೆ ನಮಗೂ ಹಲವೂ ಕನಸುಗಳಿವೆ .

ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣ , ಕುಂದಾಪುರ ಬೆಂಗಳೂರು ವೇಗದ ರಾತ್ರಿ ರೈಲು , ಮೀನುಗಾರಿಕಾ ವಿಶ್ವವಿದ್ಯಾಲಯ , ಕೃಷಿ ವಿಶ್ವ ವಿದ್ಯಾಲಯ , ಪ್ರವಾಸೊದ್ಯಮ ಆಧಾರಿತ ಉದ್ಯೊಗ ಸೃಷ್ಟಿ , ಹೀಗೆ ಬಹಳಷ್ಟು ಕೆಲಸಗಳು ಬಾಕಿ ಇವೆ , ಇದೆಲ್ಲದರ ಧ್ವನಿಯಾಗುವ ಸಮರ್ಥ ಸಂಸದರಾಗಲು ಹೆಗ್ಡೆಯವರೇ ಸೂಕ್ತರಾಗಿದ್ದಾರೆ

ಅಲ್ಲದೇ ಕಾರ್ಯಕರ್ತರೇ ನಾಯಕರಾಗಿರುವ ಬಿಜೆಪಿಯಲ್ಲಿ , ಕಾರ್ಯಕರ್ತರಿಗೆ ದಿನದ ಯಾವ ಹೊತ್ತಿನಲ್ಲಿ ಒಂದು ಮಿಸ್ ಕಾಲ್ ಬಂದರೂ ತಿರುಗಿ ಕಾಲ್ ಮಾಡುವ , ಕಾರ್ಯಕರ್ತರ ಹಿತೈಷಿ ನಾಯಕರಾದ ಜಯಪ್ರಕಾಶ್ ಹೆಗ್ಡೆ ಸಂಸದ ಸ್ತಾನಕ್ಕೆ ಸೂಕ್ತ ಎಂಬುದರಿಂದಾಗಿ ನಾವೆಲ್ಲ ಕಾರ್ಯಕರ್ತರು ಒಕ್ಕೊರಲಿನಿಂದ ಅವರ ಆಯ್ಕೆ ಬಯಸುತಿದ್ದೇವೆ . ದಿನದ ಹದಿನೆಂಟು ಗಂಟೆ ದೇಶಕ್ಕಾಗಿ ಅರ್ಪಿಸುವ ಮೋದಿಜಿ , ಚುನಾವಣೆ ಹೊರತಾಗಿಯೂ ಸಮಸ್ತ ಕ್ಷೇತ್ರದ ಸಂಪರ್ಕ ಹೊಂದಿರುವ ಹೆಗ್ಡೆಜೀ ಇದು ಅಭಿವೃದ್ಧಿಯ ಪರ್ವಕಾಲ ಆಗಲಿದೆ . ಹೆಗ್ಡೆಯವರ ಬಗ್ಗೆ ಉಭಯ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಅಭೂತಪೂರ್ವ ಬೆಂಬಲದ ಅಲೆ  , ಅವರ ಹಿರಿತನದ ರಾಜಕೀಯ ಅನುಭವ , ಕ್ಷಿಪ್ರ ಆಡಳಿತ ಇದನ್ನೆಲ್ಲ ಪಕ್ಷದ ಪ್ರಮುಖರು ಗಮನಿಸಿ ಅವರನ್ನೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಸದ ಅಭ್ಯರ್ಥಿಯಾಗಿ ಆಯ್ಕೆ ಮಾಡಲೇವೇಕೆಂದು ಒತ್ತಾಯದ ವಿನಂತಿ ಯೊಂದಿಗೆ ಈ ಪೆಟಿಶನ್ ಗೆ ಸಹಿ ಮಾಡುತಿದ್ದೇನೆ .