AIIMS FOR BAGALKOTE

AIIMS FOR BAGALKOTE
Why this petition matters

ಪ್ರೀತಿಯ ಬಂಧುಗಳೇ,
ನಮ್ಮ ಜಿಲ್ಲೆ ಹಿಂದುಳಿದಿದೆ ಎಂದು ಕೊರಗುವುದಕ್ಕಿಂತಲೂ, ನಮ್ಮ ಜಿಲ್ಲೆಯನ್ನು ಹೇಗೆ ಅಭಿವೃಧ್ಧಿ ಪಥದಲ್ಲಿ ಕೊಂಡೊಯ್ಯಬಹುದು ಎಂದು ಆಲೋಚಿಸುವುದು ಉತ್ತಮ. ನಮ್ಮ ಜಿಲ್ಲೆಗೆ ಸರ್ಕಾರದ ಸೌಲಭ್ಯಗಳು ದೊರೆತರೆ ನಮಗೆ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೂ ಇದರಿಂದ ಅನುಕೂಲವಾಗಲಿದೆ. ಬಾಗಲಕೋಟೆ ಜಿಲ್ಲೆಯ ಏಳಿಗೆಗಾಗಿ ಏಮ್ಸ್ ಅತ್ಯಾವಶ್ಯಕ. ಇದರಿಂದ ಹಲವಾರು ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಜಾಗತಿಕ ಗುಣಮಟ್ಟದ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಅತೀ ಕಡಿಮೆ ದರದಲ್ಲಿ ಬಾಗಲಕೋಟೆ ಮಂದಿಗೆ ಮಾತ್ರವಲ್ಲ ಉತ್ತರ ಕರ್ನಾಟಕದ ಎಲ್ಲರಿಗೂ ದೊರಕಲಿದೆ. ಖಾಸಗಿ ದವಾಖಾನೆಗೆ ಹೋಗುವ ಬದಲು ಬರೀ ಒಂದು ಬಿಪಿಎಲ್ ಚೀಟಿಯೊಂದಿದ್ದರೆ ಎಲ್ಲಾ ಸೌಲಭ್ಯಗಳನ್ನು ಕೈಗೆಟಕುವ ದರದಲ್ಲಿ ಪಡೆದುಕೊಳ್ಳಬಹುದು. ಇದರಿಂದ ನಮ್ಮ ನಿಮ್ಮೆಲ್ಲರ ಮನೆ ಮಕ್ಕಳಿಗೆ ಅನುಕೂಲವಾಗಲಿದೆ. ನಮಗೆ ಜನ್ಮ ನೀಡಿದ ಈ ಜಿಲ್ಲೆಯ, ಈ ಮಣ್ಣಿನ ಋಣ ತೀರಿಸಲು ನಿಮಗೊಂದು ಸುವರ್ಣವಕಾಶ. ನಾವೆಲ್ಲರು ಸೇರಿ ಈ ಒಳ್ಳೆಯ ಉದ್ದೇಶಕ್ಕೆ ಕೈಜೋಡಿಸೋಣ. ಏಮ್ಸ್ ಗಾಗಿ ಈ ಮನವಿಗೆ ಹೆಸರು, ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಹಾಕಿ ಈ ಅಭಿಯಾನಕ್ಕೆ ಸಹಿ ಮಾಡಿ. ನಿಮ್ಮ ಒಂದು ಹಸ್ತಾಕ್ಷರ ಸರ್ಕಾರದ ಕಣ್ಣು ತೆರೆಸಬಲ್ಲದು.
ಈ ಲಿಂಕ್ ಅನ್ನು ನಿಮ್ಮ ಬಂಧು ಬಾಂಧವರೊಂದಿಗೆ ಹಂಚಿಕೊಳ್ಳಿ ಹಾಗೂ ಅವರಿಗೂ ಸಹಿ ಮಾಡಲು ಪ್ರೇರೇಪಿಸಿ. ಜೈ ಬಾಗಲಕೋಟೆ..!! ಜೈ ಕರ್ನಾಟಕ..!! ಜೈ ಏಮ್ಸ್..!!
Dear friend,
Instead of thinking and pondering over the backwardness of our district we need to think about the means of developing it. If our district receives government facilities it is not only us, but even the future generation will be vastly benefitted. For the betterment of Bagalkote district, AIIMS is a must and it will create many job opportunities. Not only the people of Bagalkot but the people of North Karnataka will have the access to the world class treatment and medical facilities at a less cost. Instead of going to the private clinic we can have the access to all the facilities by means of a BPL card at the cheapest cost possible. This will benefit our families and our relatives at a greater extent. It is the golden opportunity to all of us to pay back to this district and to this land which has given us an unique identity. Lets all join our hands for this noble cause. Kindly sign this petition with your name, email id and mobile number. Your signature can be an eye opener to our government. Kindly share this link with your family and friends and motivate them to sign the same.
Thank you, Jai Bagalkote, Jai Karnataka, Jai AIIMS
Follow us :
Website: https://nammabagalkot.com/
Facebook: https://www.facebook.com/nammabagalkotnews
Instagram: https://www.instagram.com/nammabagalkotnews/
Twitter: https://twitter.com/BagalkotNews
Youtube: https://www.youtube.com/channel/UCgm7peoKeM7nUr5NVBfEgcA