Petitioning ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅನಗತ್ಯ ಹಿಂದಿ ಬಳಕೆ ನಿಲ್ಲಲಿ

ಮಾನ್ಯರೇ,

ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತು ನಿಲ್ದಾಣಗಳಲ್ಲಿ ಅನಗತ್ಯವಾಗಿ ಹಿಂದೀ ಭಾಷೆಯ ಬಳಕೆ ಮಾಡಲಾಗುತ್ತಿದೆ.

- ಈ ಭಾಷಾ ನೀತಿಯನ್ನು ಕರ್ನಾಟಕ ಸರ್ಕಾರದ ಸೂಚನೆಯ ಮೇರೆಗೆ ಮಾಡಲಾಗಿಲ್ಲ.
- ಮೆಟ್ರೋ ಆಡಳಿತ ಮಂಡಳಿಯೇ ಏಕಪಕ್ಷೀಯವಾಗಿ ಮೆಟ್ರೋನಲ್ಲಿ ಹಿಂದೀ ಬಳಕೆಯ ನಿರ್ಧಾರ ಕೈಗೊಂಡಿದೆ ಎಂದು ಮೆಟ್ರೋ ಆಡಳಿತ ಮಂಡಳಿಯವರು ಮಾಹಿತಿ ಹಕ್ಕಿನ ಅರ್ಜಿಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ. (ಮಾಹಿತಿ ಹಕ್ಕಿನ ಪತ್ರದ ಪ್ರತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: https://goo.gl/IsT4MZ)

ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋ, ಕರ್ನಾಟಕ ಸರ್ಕಾರದ ನೀತಿಗಳಿಗೆ ಅನುಗುಣವಾಗಿ ನಡೆಯಬೇಕಿದ್ದು ಸರ್ಕಾರದ ಇತರ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ / ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತಿತರ ಸರ್ಕಾರೀ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಭಾಷಾನೀತಿಯನ್ನೇ ನಮ್ಮ ಮೆಟ್ರೋನಲ್ಲೂ ಬಳಸಬೇಕು. ಈ ಕುರಿತು ನಮ್ಮ ಮೆಟ್ರೋ ಆಡಳಿತ ವರ್ಗಕ್ಕೆ ಸೂಕ್ತ ಆದೇಶ ನೀಡಬೇಕೆಂದು ಕೋರುತ್ತೇವೆ.

- ಗಣೇಶ್ ಚೇತನ್
- ಆನಂದ್ ಜಿ
- ಅರುಣ್ ಜಾವಗಲ್
- ವಲ್ಲೀಶ್ ಕುಮಾರ್ ಎಸ್
ಬನವಾಸಿ ಬಳಗ

 

This petition will be delivered to:
  • ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

    ಬನವಾಸಿ ಬಳಗ started this petition with a single signature, and now has 6,779 supporters. Start a petition today to change something you care about.




    Stand with ಬನವಾಸಿ ಬಳಗ

    ಬನವಾಸಿ ಬಳಗ needs your help with “ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅನಗತ್ಯ ಹಿಂದಿ ಬಳಕೆ ನಿಲ್ಲಲಿ”. Join ಬನವಾಸಿ ಬಳಗ and 6,778 supporters today.